Population Census: ಕೇಂದ್ರ ಸರ್ಕಾರದಿಂದ ಜನಗಣತಿ ದಿನಾಂಕ ಪ್ರಕಟ; 2026, 2027ರಲ್ಲಿ 2 ಹಂತಗಳಲ್ಲಿ ಗಣತಿ

ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಜನಗಣತಿ 2027ರ ಗಣತಿಯ ದಿನಾಂಕವನ್ನು ಸಹ ತನ್ನ ಅಧಿಸೂಚನೆಯಲ್ಲಿ ಹಂಚಿಕೊಂಡಿದೆ. 2011ರ ನಂತರ ಭಾರತದ ಮೊದಲ ಜನಗಣತಿಯನ್ನು ಕ್ರಮವಾಗಿ ಅಕ್ಟೋಬರ್ 1, 2026 ಮತ್ತು ಮಾರ್ಚ್ 1, 2027ರಂದು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ. 2027ರ ಜನಗಣತಿಯ ಘೋಷಣೆಯು ಮಹಿಳಾ ಮೀಸಲಾತಿ ಮಸೂದೆ ಮತ್ತು ವಿವಾದಾತ್ಮಕ ಡಿಲಿಮಿಟೇಶನ್​​ಗೆ ದಾರಿ ಮಾಡಿಕೊಟ್ಟಿದೆ.

Population Census: ಕೇಂದ್ರ ಸರ್ಕಾರದಿಂದ ಜನಗಣತಿ ದಿನಾಂಕ ಪ್ರಕಟ; 2026, 2027ರಲ್ಲಿ 2 ಹಂತಗಳಲ್ಲಿ ಗಣತಿ
Census

Updated on: Jun 16, 2025 | 6:12 PM

ನವದೆಹಲಿ, ಜೂನ್ 16: 2011ರ ನಂತರ ಭಾರತದಲ್ಲಿ ಮೊದಲ ಬಾರಿಗೆ ಜನಗಣತಿಯನ್ನು (Population Census) 2 ಹಂತಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಇಂದು (ಸೋಮವಾರ) ಘೋಷಿಸಿದೆ. ಕ್ರಮವಾಗಿ 2026ರ ಅಕ್ಟೋಬರ್ 1 ಮತ್ತು 2027ರ ಮಾರ್ಚ್ 1ರಂದು ಜನಗಣತಿ ನಡೆಯಲಿದೆ. ಕೇಂದ್ರ ಸರ್ಕಾರದಿಂದ ಜನಗಣತಿ ಕುರಿತು ಅಧಿಸೂಚನೆ ಪ್ರಕಟವಾಗಿದೆ. ಈ ಅಧಿಸೂಚನೆ ಪ್ರಕಾರ ಎರಡು ಹಂತಗಳಲ್ಲಿ ಜನಗಣತಿ (Population Census) ನಡೆಯಲಿದೆ. ಆದರೆ, 2027ರ ಮಾರ್ಚ್ 1ರ ದಿನಾಂಕದ ಜನಗಣತಿಯಲ್ಲಿ ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್‌, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳನ್ನು ಪರಿಗಣಿಸಿಲ್ಲ. ಇನ್ನೊಂದು ಹಂತದ ಜನಗಣತಿ ಅಂದರೆ, 2026ರ ಅಕ್ಟೋಬರ್‌ 1ರಂದು ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್‌, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾ ಖಂಡಗಳಲ್ಲಿ ನಡೆಸಲಾಗುತ್ತದೆ. ಇದಕ್ಕೆ ಕಾರಣ ಮಾರ್ಚ್‌ ತಿಂಗಳುಗಳಲ್ಲಿ ಈ ಪ್ರದೇಶಗಳಲ್ಲಿ ಹಿಮಪಾತವಾಗುವುದರಿಂದ ಪ್ರತ್ಯೇಕ ದಿನಾಂಕಗಳಂದು ನಡೆಸಲಾಗುತ್ತದೆ.

ಮನೆಪಟ್ಟಿ ಕಾರ್ಯಾಚರಣೆ (HLO) ಎಂದೂ ಕರೆಯಲ್ಪಡುವ ಮೊದಲ ಹಂತದಲ್ಲಿ, ಆಸ್ತಿಗಳು, ಕುಟುಂಬದ ಆದಾಯ, ವಸತಿ ಪರಿಸ್ಥಿತಿಗಳು ಮತ್ತು ಸೌಕರ್ಯಗಳಿಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಮುಂಬರುವ ಜನಗಣತಿಯು ಭಾರತದ ಮೊದಲ ಡಿಜಿಟಲ್ ಜನಗಣತಿಯಾಗಿರುವುದರಿಂದ ಇದೇ ಮೊದಲ ಬಾರಿಗೆ, ಪ್ರತಿಕ್ರಿಯಿಸುವವರು ಮನೆಯಿಂದಲೇ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: ದೇಶದ 16ನೇ ಜನಗಣತಿಗೆ ಇಂದು ಗೆಜೆಟ್ ನೋಟಿಫಿಕೇಶನ್, ಅಧಿಕಾರಿಗಳೊಂದಿಗೆ ಅಮಿತ್ ಶಾ ಚರ್ಚೆ

ಎರಡನೇ ಹಂತವಾದ ಜನಗಣತಿ (PE), ಮನೆಯಲ್ಲಿ ವಾಸಿಸುವವರ ಜನಸಂಖ್ಯಾ, ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತದೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ಜಾತಿ ಎಣಿಕೆಯು ಜನಗಣತಿಯ ಭಾಗವಾಗಿರುತ್ತದೆ. 2027ರ ಜನಗಣತಿಯ ಘೋಷಣೆಯು ಮಹಿಳಾ ಮೀಸಲಾತಿ ಮಸೂದೆ ಮತ್ತು ವಿವಾದಾತ್ಮಕ ಡಿಲಿಮಿಟೇಶನ್​​ಗೆ ದಾರಿ ಮಾಡಿಕೊಟ್ಟಿದೆ. ಇದನ್ನು 1971ರಿಂದ ವಿವಿಧ ಸಾಂವಿಧಾನಿಕ ತಿದ್ದುಪಡಿಗಳ ಮೂಲಕ ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ ಜಾತಿ ಜನಗಣತಿ ಮರು ಸರ್ವೇ: ಹೈಕಮಾಂಡ್ ಸಭೆ ಬಳಿಕ ಸಿದ್ದರಾಮಯ್ಯ ಮಹತ್ವದ ಘೋಷಣೆ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಟ್ಟ ಮಹಿಳಾ ಮೀಸಲಾತಿ ಮಸೂದೆಯು ಜನಗಣತಿಯನ್ನು ನಡೆಸಿದ ನಂತರವೇ ಜಾರಿಗೆ ಬರುವ ನಿರೀಕ್ಷೆಯಿದೆ. ನಂತರ ಡಿಲಿಮಿಟೇಶನ್ ಮಾಡಲಾಗುತ್ತದೆ. ಡಿಲಿಮಿಟೇಶನ್ ಎಂದರೆ ಕ್ಷೇತ್ರಗಳ ಜನಸಂಖ್ಯೆಯ ಆಧಾರದ ಮೇಲೆ ಅವುಗಳ ಗಡಿಗಳನ್ನು ಮರುರೂಪಿಸುವ ಪ್ರಕ್ರಿಯೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ