ಸದಾ ಮಕ್ಕಳ ಶ್ರೇಯಸ್ಸು ಬಯಸುತ್ತಾ ಅವರ ಬೇಕು ಬೇಡಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಚಿಂತೆಯೂ ಕಾಡದಂತೆ ನೋಡಿಕೊಳ್ಳುವವಳು ತಾಯಿ. ಮಗನ ಆತ್ಮಹತ್ಯೆಯ ಸುದ್ದಿ ಕೇಳುತ್ತಿದ್ದಂತೆ ಆಘಾತಕ್ಕೊಳಗಾಗಿ ಹೃದಯಾಘಾತದಿಂದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಗ್ವಾಲಿಯರ್ನಲ್ಲಿ ನಡೆದಿದೆ. ನೌಕರಿ ಸಿಗಲಿಲ್ಲ ಎನ್ನುವ ಕಾರಣಕ್ಕೆ 33 ವರ್ಷದ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ತಾಯಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ವಾಲಿಯರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 33 ವರ್ಷದ ಎಂಜಿನಿಯರಿಂಗ್ ಪದವೀಧರ ಶನಿವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನ ಸಹೋದರ ಶನಿವಾರ ರಾತ್ರಿ ಮದುವೆ ಸಮಾರಂಭದಲ್ಲಿದ್ದಾಗ ತನ್ನ ಕಿರಿಯ ಸಹೋದರ ವಿಷ ಸೇವಿಸಿದ ಬಗ್ಗೆ ತಂದೆಯಿಂದ ಕರೆ ಬಂದಿತ್ತು.ಮನೆಗೆ ತಲುಪಿದಾಗ ರೂಮಿನ ಒಳಗಂಡೆಯಿಂದ ಚಿಲಕ ಹಾಕಿತ್ತು.
ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿ ರೂಮಿಗೆ ನುಗ್ಗಿದಾಗ ಮನೀಶ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿತ್ತು ಎಂದು ಸಹೋದರ ಹೇಳಿದ್ದಾರೆ.
ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಕಾಲೇಜು ಕಟ್ಟಡದಿಂದ ಜಿಗಿದು ಏರೋಸ್ಪೇಸ್ ವಿದ್ಯಾರ್ಥಿ ಆತ್ಮಹತ್ಯೆ
ಸಂಬಂಧಿತ ಪರೀಕ್ಷೆಗಳಿಗೆ ಹಾಜರಾಗಿದ್ದರೂ ನೌಕರಿ ಪಡೆಯಲು ವಿಫಲನಾದ ಕಾರಣ ಆತ ಒತ್ತಡಕ್ಕೊಳಗಾಗಿದ್ದ. ಮೃತನ ತಾಯಿಗೆ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿಯುತ್ತಿದ್ದಂತೆ ಆಘಾತ ಸಹಿಸಲಾಗದೆ ಸಾವನ್ನಪ್ಪಿದ್ದಾರೆ ಎಂದು ಸಹೋದರ ತಿಳಿಸಿದ್ದಾರೆ.
ಯುವಕ ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ನೌಕರಿ ಪಡೆಯಲು ಸಾಕಷ್ಟು ಬಾರಿ ಪ್ರಯತ್ನ ಪಟ್ಟಿದ್ದ, ಆದರೆ ಪದೇ ಪದೇ ವಿಫಲವಾಗುತ್ತಿದ್ದ, ಇದು ಆತ ಈ ರೀತಿಯ ಹೆಜ್ಜೆ ಇಡುವಂತಾಯಿತು. ಮಗನ ಸಾವಿನ ಬಗ್ಗೆ ತಾಯಿಗೆ ತಿಳಿಸಿದಾಗ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ