ಉದ್ಯಮಿ ಮುಕೇಶ್ ಅಂಬಾನಿ(Mukesh Ambani)ಗೆ ಮತ್ತೆ ಜೀವ ಬೆದರಿಕೆಯ ಇ-ಮೇಲ್ ಬಂದಿದ್ದು, ಈ ಬಾರಿ 400 ಕೋಟಿ ರೂ. ಕೊಡುವಂತೆ ಬೇಡಿಕೆ ಇಡಲಾಗಿದೆ. ಒಂದೊಮ್ಮೆ ಹಣವನ್ನು ನೀಡಲು ವಿಫಲವಾದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಒಂದು ವಾರದಲ್ಲಿ ಮೂರನೇ ಬಾರಿಗೆ ಬೆದರಿಕೆಯ ಇ-ಮೇಲ್ ಬಂದಿದೆ. ಕಂಪನಿಯ ಮೇಲ್ ಐಡಿಗೆ ಶುಕ್ರವಾರ ಮೊದಲ ಇ-ಮೇಲ್ ಬಂದಿತ್ತು, ಶನಿವಾರ ಮತ್ತೊಂದು ಇ-ಮೇಲ್ ಬಂದಿದೆ.
ಅಂಬಾನಿ ನೀಡಿದ ದೂರಿನ ಆಧಾರದ ಮೇಲೆ, ಗಾಮದೇವಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಶಾದಬ್ ಖಾನ್ ಎಂಬ ಹೆಸರಿನಲ್ಲಿ ಇ-ಮೇಲ್ ಬಂದಿದೆ, ಈ ಪ್ರಕರಣ ಸಂಬಂಧ ಮುಂಬೈ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ಮೊದಲು 20 ಕೋಟಿ ರೂ. ಹಾಗೂ 200 ಕೋಟಿ ರೂ,ಗೆ ಆರೋಪಿ ಬೇಡಿಕೆ ಇಟ್ಟಿದ್ದ, ಇದೀಗ 400 ಕೋಟಿ ರೂ,ಗೆ ಬೇಡಿಕೆ ಇಟ್ಟಿದ್ದಾನೆ.
ಮತ್ತಷ್ಟು ಓದಿ: ಉದ್ಯಮಿ ಮುಕೇಶ್ ಅಂಬಾನಿಗೆ ಕೊಲೆ ಬೆದರಿಕೆ: 20 ಕೋಟಿ ರೂ.ಗೆ ಬೇಡಿಕೆ ಇಟ್ಟ ಆರೋಪಿ
ಶನಿವಾರ (ಅಕ್ಟೋಬರ್ 27) ಮುಕೇಶ್ ಅಂಬಾನಿ ಅವರ ಇಮೇಲ್ ಖಾತೆಗೆ ಮೇಲ್ ಬಂದಿದ್ದು, ಅದರಲ್ಲಿ ಮುಕೇಶ್ ಅಂಬಾನಿಗೆ 20 ಕೋಟಿ ರೂ.ಗೆ ಬೆದರಿಕೆ ಹಾಕಿದ್ದ ಮತ್ತು ಹಣ ನೀಡದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದ.
ಹಿಂದಿನ ಬೆದರಿಕೆ ಇ-ಮೇಲ್‌ನಲ್ಲಿ,ನೀವು ನಮಗೆ 20 ಕೋಟಿ ರೂಪಾಯಿ ನೀಡದಿದ್ದರೆ, ನಾವು ನಿಮ್ಮನ್ನು ಕೊಲ್ಲುತ್ತೇವೆ. ನಾವು ಭಾರತದಲ್ಲಿ ಅತ್ಯುತ್ತಮ ಶೂಟರ್ಗಳನ್ನು ಹೊಂದಿದ್ದೇವೆ ಎಂದು ಬೆದರಿಕೆ ಹಾಕಿದ್ದರು.
ಈ ಮೇಲ್ ಅನ್ನು ಯಾವ IP ವಿಳಾಸದಿಂದ ಕಳುಹಿಸಲಾಗಿದೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಲು ಪ್ರಾರಂಭಿಸಿದೆ.
ಈ ವರ್ಷದ ಫೆಬ್ರವರಿ ತಿಂಗಳಲ್ಲಿ, ವ್ಯಕ್ತಿಯೊಬ್ಬರು ನಾಗ್ಪುರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮುಖೇಶ್ ಅಂಬಾನಿ ಅವರ ಮನೆ ಆಂಟಿಲಿಯಾವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು, ನಂತರ ಪೊಲೀಸರು ತಕ್ಷಣವೇ ಆಂಟಿಲಿಯಾ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:11 am, Tue, 31 October 23