ಮುಂಬೈ: ಮುಂಬೈನ ಘಾಟ್‌ಕೋಪರ್ (Ghatkopar) ಪ್ರದೇಶದಲ್ಲಿ ಸೋಮವಾರ ಬೃಹತ್ ಹೋರ್ಡಿಂಗ್ ಕುಸಿತವಾಗಿ (Hoarding Collapse) ಅದರಡಿ ಬಹಳಷ್ಟು ಜನರು ಸಿಲುಕಿದ್ದರು. ಈ ದುರಂತ ಘಟನೆಯ ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡವು ಹೋರ್ಡಿಂಗ್ ಕುಸಿದ ಸ್ಥಳಕ್ಕೆ ತಲುಪಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು (Rescue Operation) ಪ್ರಾರಂಭಿಸಿತು. ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 70 ಮಂದಿ ಗಾಯಗೊಂಡಿದ್ದಾರೆ.
ಬಿಎಂಸಿ ಅಧಿಕಾರಿಗಳ ಪ್ರಕಾರ, 120 x 120 ಅಡಿ ಅಳತೆಯ ಹೋರ್ಡಿಂಗ್ ಪೆಟ್ರೋಲ್ ಪಂಪ್ ಮೇಲೆ ಅಪ್ಪಳಿಸಿತು. ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಪೆಟ್ರೋಲ್ ಪಂಪ್‌ನ ಮೇಲೆ 100 ಅಡಿ ಎತ್ತರದ ಜಾಹೀರಾತು ಫಲಕ ಬಿದ್ದಿದ್ದರಿಂದ ಸಾವಿನ ಸಂಖ್ಯೆ 14ಕ್ಕೆ ಏರಿದೆ ಮತ್ತು 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ 88 ಜನರನ್ನು ರಕ್ಷಿಸಲಾಗಿದೆ ಮತ್ತು ಅವರಲ್ಲಿ ಕನಿಷ್ಠ 31 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನಾಗರಿಕ ಅಧಿಕಾರಿಗಳ ಪ್ರಕಾರ, ಜಾಹೀರಾತು ಫಲಕವು ಅಕ್ರಮವಾಗಿದ್ದು, ಗಾಳಿ ಮತ್ತು ಮಳೆಯ ನಡುವೆ ಘಾಟ್ಕೋಪರ್‌ನ ಚೆಡ್ಡಾನಗರ ಜಂಕ್ಷನ್‌ನಲ್ಲಿರುವ ಪೆಟ್ರೋಲ್ ಪಂಪ್‌ನ ಮೇಲೆ ಉರುಳಿ ಬಿದ್ದಿದೆ. ಅದರಡಿ ಸಿಲುಕಿ ಮೃತಪಟ್ಟ ಬಹುತೇಕ ಎಲ್ಲರ ದೇಹಗಳನ್ನು ಹೊರತೆಗೆಯಲಾಗಿದೆ.
Dy CM of Maharashtra added background music to the visuals of his visit at the site of Ghatkopar hoarding collapse where 14 persons lost their lives. 🙏🏻 pic.twitter.com/qNhv0biShF
— Cow Momma (@Cow__Momma) May 14, 2024
ಇದನ್ನೂ ಓದಿ: Monsoon 2024: ಮೇ ತಿಂಗಳಲ್ಲೇ ಭಾರತ ಪ್ರವೇಶಿಸಲಿದೆ ಮುಂಗಾರು, ಯಾವ್ಯಾವ ರಾಜ್ಯಗಳಲ್ಲಿ ಯಾವಾಗ ಮಳೆ?
ಸುಮಾರು 80 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಮತ್ತು ಬಹುತೇಕ ಎಲ್ಲಾ ದೇಹಗಳನ್ನು ಹೊರತೆಗೆಯಲಾಗಿದೆ. ಅಕಾಲಿಕ ಮಳೆ ಮತ್ತು ಧೂಳಿನ ಬಿರುಗಾಳಿಯಿಂದಾಗಿ ಇಂದು ಸಂಜೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯನ್ನು 1 ಗಂಟೆಯವರೆಗೆ ಸ್ಥಗಿತಗೊಳಿಸಲಾಯಿತು, ಸ್ಥಳೀಯ ರೈಲುಗಳ ಸೇವೆಗಳು ವಿಳಂಬಗೊಂಡವು ಮತ್ತು ಹಲವಾರು ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಕಂಡುಬಂದಿತು. 15 ವಿಮಾನಗಳನ್ನು ವಿವಿಧ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಯಿತು.
One thing I have realised the value of Human Life in Mumbai for every one sitting in power is Zero.
In the hoarding fall in Ghatkopar area, over 100 were trapped of which 69 were injured and taken to hospital.
Several deaths have been reported.
pic.twitter.com/OHfZQxdVhb— Singh Varun (@singhvarun) May 13, 2024
ಇದನ್ನೂ ಓದಿ: Mumbai Dust Storm: ಮುಂಬೈನಲ್ಲಿ ಧೂಳು ಸಹಿತ ಬಿರುಗಾಳಿ; ಹೋರ್ಡಿಂಗ್ ಬಿದ್ದು 8 ಸಾವು, 64 ಜನರಿಗೆ ಗಾಯ
ಮುಖ್ಯಮಂತ್ರಿಯಿಂದ ಪರಿಹಾರ ಘೋಷಣೆ:
ಈ ಘಟನೆಯ ಮಾಹಿತಿ ಪಡೆದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಇದು ದುರದೃಷ್ಟಕರ ಎಂದು ಹೇಳಿದ್ದಾರೆ. ಮುಂಬೈನಲ್ಲಿರುವ ಎಲ್ಲಾ ಹೋರ್ಡಿಂಗ್‌ಗಳನ್ನು ಲೆಕ್ಕ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸಂತ್ರಸ್ತರ ಸಂಬಂಧಿಕರಿಗೆ 5 ಲಕ್ಷ ರೂ. ಪರಿಹಾರವನ್ನು ನೀಡುವುದಾಗಿ ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ಏಕನಾಥ್ ಶಿಂಧೆ ಹೇಳಿದ್ದಾರೆ.
#WATCH | Mumbai’s Ghatkopar hoarding collapse incident: Visuals of the rescue operations from the spot.
The death toll in the Ghatkopar hoarding collapse incident has risen to 14. pic.twitter.com/6A9rcebtVX
— ANI (@ANI) May 14, 2024
“ಇದು ಅತ್ಯಂತ ದುರದೃಷ್ಟಕರ ಘಟನೆ. ಸರಕಾರ ಇದರ ಬಗ್ಗೆ ತನಿಖೆ ನಡೆಸುತ್ತದೆ ಮತ್ತು ಹೊಣೆಗಾರರು ಕ್ರಮ ಎದುರಿಸಬೇಕಾಗುತ್ತದೆ. ನಗರದ ಎಲ್ಲಾ ಹೋರ್ಡಿಂಗ್‌ಗಳ ಸ್ಟ್ರಕ್ಚರಲ್ ಆಡಿಟ್ ನಡೆಸುವಂತೆ ನಾನು ಬಿಎಂಸಿ ಆಯುಕ್ತರನ್ನು ಕೇಳಿದ್ದೇನೆ. ಅಕ್ರಮ ಮತ್ತು ಅಪಾಯಕಾರಿ ಎಂದು ಕಂಡುಬಂದರೆ ಅವುಗಳನ್ನು ತೆಗೆದುಹಾಕಲಾಗುವುದು” ಎಂದು ಸಿಎಂ ಏಕನಾಥ್ ಶಿಂಧೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ