Mumbai: ತನ್ನ ಪ್ರೇಯಸಿಯ ಮಗಳ ಮೇಲೆ ಅತ್ಯಾಚಾರ, ಖಾಸಗಿ ಭಾಗಕ್ಕೆ ಸ್ಕ್ರೂಡ್ರೈವರ್ ಆಗಿ ವಿಕೃತಿ ತೋರಿದ ವ್ಯಕ್ತಿ

ತನ್ನ ಪ್ರೇಯಸಿಯ ಮಗಳ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮೇಘವಾಡಿ ಪೊಲೀಸರು 24 ವರ್ಷದ ಯುವಕ ಮತ್ತು ಆತನ ಗೆಳತಿಯನ್ನು ಬಂಧಿಸಿದ್ದಾರೆ. ಮತ್ತು ಅವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಗಂಭೀರ ಅಪರಾಧ ಪ್ರಕರಣ ದಾಖಲಿಸಿದ್ದಾರೆ. ಆ ವ್ಯಕ್ತಿ ತನ್ನ ಗೆಳತಿಯ ಕೇವಲ 10 ವರ್ಷದ ಅಪ್ರಾಪ್ತ ಮಗಳ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಕ್ರೌರ್ಯದ ಮಿತಿಯನ್ನು ಮೀರಿದ್ದಾನೆ.

Mumbai: ತನ್ನ ಪ್ರೇಯಸಿಯ ಮಗಳ ಮೇಲೆ ಅತ್ಯಾಚಾರ, ಖಾಸಗಿ ಭಾಗಕ್ಕೆ ಸ್ಕ್ರೂಡ್ರೈವರ್ ಆಗಿ ವಿಕೃತಿ ತೋರಿದ ವ್ಯಕ್ತಿ
ಕ್ರೈಂ
Image Credit source: The hin

Updated on: Jun 23, 2025 | 3:06 PM

ಮುಂಬೈ, ಜೂನ್ 23: ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿ, ಖಾಸಗಿ ಭಾಗಕ್ಕೆ ಸ್ಕ್ರೂಡ್ರೈವರ್ ಹಾಕಿ ವಿಕೃತಿ ಮೆರೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಜೋಗೇಶ್ವರಿ ಉಪನಗರದಲ್ಲಿ ಈ ಘಟನೆ ನಡೆದಿದೆ. ಮೇಘವಾಡಿ ಪೊಲೀಸರು 24 ವರ್ಷದ ಯುವಕ ಮತ್ತು ಆತನ ಗೆಳತಿಯನ್ನು ಬಂಧಿಸಿದ್ದಾರೆ. ಮತ್ತು ಅವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಗಂಭೀರ ಅಪರಾಧ ಪ್ರಕರಣ ದಾಖಲಿಸಿದ್ದಾರೆ.

ಆ ವ್ಯಕ್ತಿ ತನ್ನ ಗೆಳತಿಯ ಕೇವಲ 10 ವರ್ಷದ ಅಪ್ರಾಪ್ತ ಮಗಳ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಕ್ರೌರ್ಯದ ಮಿತಿಯನ್ನು ಮೀರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ವ್ಯಕ್ತಿ ಅಪ್ರಾಪ್ತ ಬಾಲಕಿಯ ಖಾಸಗಿ ಭಾಗಗಳಿಗೆ ಸ್ಕ್ರೂಡ್ರೈವರ್ ಹಾಕಿದ್ದಲ್ಲದೇ ಇಡೀ ಕೃತ್ಯದ ವೀಡಿಯೊವನ್ನು ಚಿತ್ರೀಕರಿಸಿದ್ದಾನೆ.

ಈ ಬಗ್ಗೆ ಯಾರಾದರೂ ಪೊಲೀಸರಿಗೆ ಮಾಹಿತಿ ನೀಡಿದರೆ ವೀಡಿಯೊವನ್ನು ವೈರಲ್ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ. ಘಟನೆಯ ನಂತರ, ಬಾಲಕಿ ಮೇಘವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಧೈರ್ಯ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದು ಘಟನೆ

ಮಸೀದಿ ಕೊಠಡಿಯಲ್ಲಿ 6 ವರ್ಷದ ಮಗು ಮೇಲೆ ಅತ್ಯಾಚಾರ ಆರೋಪ
6 ವರ್ಷದ ಬಾಲಕಿ ಮೇಲೆ 55 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಿಕ್ಕಬಳ್ಳಾಪುರ ನಗರದ ಶಮ್ಸ್ ಮಸೀದಿಯ ಕೊಠಡಿಯಲ್ಲಿ ಘಟನೆ ನಡೆದಿದೆ. ಮಸೀದಿಯೊಂದರ ಮೌಲ್ವಿ ಬಾಲಕಿಗೆ ಚಾಕೊಲೆಟ್‌ ಕೊಡಿಸುವುದಾಗಿ ಆಮಿಷವೊಡ್ಡಿ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮತ್ತಷ್ಟು ಓದಿ: ವಾಕಿಂಗ್ ಹೋಗಿದ್ದ 80 ವರ್ಷದ ಅಜ್ಜಿ ಮೇಲೆ ಅತ್ಯಾಚಾರ; ಆರೋಪಿಗೆ ಗುಂಡು ಹಾರಿಸಿದ ಪೊಲೀಸರು

ಬಾಲಕಿಯ ತಾಯಿ ದೂರು ನೀಡಿದ ಬಳಿಕ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಜೂನ್ ಆರಂಭದಲ್ಲಿ ಘಟನೆ ನಡೆದಿತ್ತು. ಈ ಕುರಿತು ಆರೋಪಿ ಮಹಪ್ಯೂಸ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯ ಮಗ ಬೇರೊಂದು ಮಸೀದಿಯಲ್ಲಿ ಮೌಲ್ವಿಯಾಗಿ ಕೆಲಸ ಮಾಡುತ್ತಿದ್ದಾರೆ.

ಮೌಲ್ವಿಯ ಆಶ್ರಯಕ್ಕೆ ಮಸೀದಿಯ ಕೊಠಡಿ ನೀಡಲಾಗಿತ್ತು. ಆದ್ರೆ ಮಸೀದಿಯ ಕೊಠಡಿಯನ್ನು ದುರುಪಯೋಗ ಪಡಿಸಿಕೊಂಡು ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಬಾಲಕಿ ತಾಯಿ ಗಂಭೀರ ಆರೋಪ ಮಾಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:02 pm, Mon, 23 June 25