ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೆ ಕೊವಿಡ್ (Covid-19) ಪ್ರಕರಣ ಏರಿಕೆ ಆಗಿದ್ದು ಬುಧವಾರ 1,081 ಹೊಸ ಪ್ರಕರಣಗಳು ವರದಿ ಆಗಿವೆ. ಫೆಬ್ರುವರಿ 24ರಲ್ಲಿ 1,124 ಪ್ರಕರಣಗಳೊಂದಿಗೆ ಅತೀ ಹೆಚ್ಚು ಕೊವಿಡ್ ಪ್ರಕರಣಗಳು ವರದಿ ಆಗಿದ್ದು, ಇದಾದ ನಂತರ ಇವತ್ತು ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ ಮುಂಬೈಯಲ್ಲಿ 739 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಏತನ್ಮಧ್ಯೆ, ಬೃಹನ್ಮುಂಬೈ ಕಾರ್ಪೊರೇಷನ್ (Brihanmumbai Municipal Corporation) ಕಮಿಷನರ್ ಇಕ್ಬಾಲ್ ಸಿಂಗ್ ಚಹಾಲ್ ಅವರು ಸೋಂಕು ಪತ್ತೆ ಮತ್ತು ಲಸಿಕೆ ಪ್ರಕ್ರಿಯೆಗಳನ್ನು ಹೆಚ್ಚಿಸುವಂತೆ ಆದೇಶಿಸಿದ್ದಾರೆ. ಮುಂಗಾರು ಸನಿಹವಾಗುತ್ತಿದ್ದಂತೆ ರೋಗ ಲಕ್ಷಣಗಳಿರುವ ಕೊವಿಡ್-19 ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ ಎಂದು ಕಮಿಷನರ್ ಹೇಳಿದ್ದಾರೆ.
ಧಾರಾವಿ ಕೊಳಚೆಗೇರಿಯಲ್ಲಿ 10 ಪ್ರಕರಣಗಳು ಪತ್ತೆ
ಧಾರಾವಿ ಕೊಳಚೆಗೇರಿಯಲ್ಲಿ ಹೊಸ 10 ಪ್ರಕರಣಗಳು ಪತ್ತೆಯಾಗಿದೆ ಎಂದು ಬಿಎಂಸಿ ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 37ಕ್ಕೇರಿದೆ. ಮೇ ತಿಂಗಳ ಆರಂಭ ವಾರದಲ್ಲಿ ಇಲ್ಲಿ ಯಾವುದೇ ಕೊವಿಡ್ ಪ್ರಕರಣಗಳು ವರದಿ ಆಗಿರಲಿಲ್ಲ. ಆದರೆ ಮೇ 15ರ ನಂತರ ಪ್ರಕರಣಗಳ ಸಂಖ್ಯೆ ಧುತ್ತನೆ ಏರಿದೆ.
ಕೊವಿಡ್ ಸಾಂಕ್ರಾಮಿಕ ಹಬ್ಬಿದ ನಂತರ ಧಾರಾವಿಯಲ್ಲಿ ಇಲ್ಲಿಯವರೆಗೆ 8,707 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 8,252 ಮಂದಿ ಚೇತರಿಸಿಕೊಂಡಿದ್ದು, 419 ಮಂದಿ ಸಾವಿಗೀಡಾಗಿದ್ದಾರೆ.
Maharashtra reports 1,081 new COVID19 cases today; Active cases stand at 4,032 including 2,970 cases in Mumbai pic.twitter.com/zUFdA9aKUS
— ANI (@ANI) June 1, 2022
ರಾಜ್ಯದಲ್ಲಿ ಮಂಗಳವಾರ 711 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಮವಾರ 431 ಸೋಂಕುಗಳು ದಾಖಲಾಗಿವೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 4,032 ಆಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಯಾವುದೇ ಕೊವಿಡ್ ಸಂಬಂಧಿತ ಸಾವುಗಳು ವರದಿಯಾಗಿಲ್ಲ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ