Narendra Modi: ಪ್ರಧಾನಿಯ ಅನಿರೀಕ್ಷಿತ ಭೇಟಿಯಿಂದ ಆವಾಕ್ಕಾದ ಉಜ್ವಲ ಸ್ಕೀಮ್ ಫಲಾನುಭವಿ; ಅಷ್ಟಕ್ಕೂ ಆ ಮಹಿಳೆ ಯಾರು?

|

Updated on: Dec 31, 2023 | 8:46 PM

Social Media Praises PM for His Great Heart: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಕಾಲೊನಿಯೊಂದರಲ್ಲಿ ಉಜ್ವಲ ಯೋಜನೆಯ ಫಲಾನುಭವಿಯ ಮನೆಗೆ ಅನಿರೀಕ್ಷಿತ ಭೇಟಿ ನೀಡಿದರು. ಮೀರಾ ಅವರಿಂದ ಚಹಾ ಕುಡಿದು ಅವರೊಂದಿಗೆ ಮತ್ತು ಮನೆಯವರೊಂದಿಗೆ ಪ್ರಧಾನಿ ಮಾತನಾಡಿ ಯೋಗಕ್ಷೇಮ ವಿಚಾರಿಸಿದರು. ನರೇಂದ್ರ ಮೋದಿ ಅವರ ಈ ಭೇಟಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ಬೆರಗಾಗಿದ್ದಾರೆ. ಪ್ರಧಾನಿಗಳ ಗುಣವನ್ನು ಕೊಂಡಾಡಿದ್ದಾರೆ.

Narendra Modi: ಪ್ರಧಾನಿಯ ಅನಿರೀಕ್ಷಿತ ಭೇಟಿಯಿಂದ ಆವಾಕ್ಕಾದ ಉಜ್ವಲ ಸ್ಕೀಮ್ ಫಲಾನುಭವಿ; ಅಷ್ಟಕ್ಕೂ ಆ ಮಹಿಳೆ ಯಾರು?
ಪ್ರಧಾನಿ ನರೇಂದ್ರ ಮೋದಿ ಉಜ್ವಲ ಯೋಜನೆಯ ಫಲಾನುಭವಿಯ ಮನೆಗೆ ಭೇಟಿ
Follow us on

ಅಯೋಧ್ಯೆ, ಡಿಸೆಂಬರ್ 31: ನೂತನವಾಗಿ ನಿರ್ಮಿಸಲಾಗಿರುವ ಏರ್​ಪೋರ್ಟ್ ಉದ್ಘಾಟನೆಗೆಂದು ಉತ್ತರಪ್ರದೇಶ ರಾಜ್ಯದ ಅಯೋಧ್ಯೆ ನಗರಿಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಉಜ್ವಲ ಯೋಜನೆಯ ಫಲಾನುಭವಿಯ ಮನೆಗೆ ದಿಢೀರ್ ಭೇಟಿ ನೀಡಿ ಅಚ್ಚರಿಗೊಳಿಸಿದ ಘಟನೆ ಬಹಳ ಮಂದಿಯ ಗಮನ ಸೆಳೆದಿದೆ. ಅಯೋಧ್ಯೆಯ ಲತಾ ಮಂಗೇಶ್ವರ್ ಚೌಕ್ ಬಳಿಯ ಕಾಲೊನಿಯಲ್ಲಿ ಮೀರಾ ಮಾಂಝಿ ಎಂಬ ಬಡ ಮಹಿಳೆ ಹಾಗು ಉಜ್ವಲ ಯೋಜನೆಯ ಫಲಾನುಭವಿಯ ಮನೆಗೆ ಪ್ರಧಾನಿಗಳು ತೆರಳಿದ್ದಾರೆ. ಅವರಿಂದ ಚಹಾ ಮಾಡಿಸಿಕೊಂಡು ಕುಡಿತು ಸ್ವಲ್ಪ ಹೊತ್ತು ಮಾತನಾಡಿದ್ದಾರೆ. ಅವರ ಕುಟುಂಬದ ಯೋಗಕ್ಷೇಮ ಹಾಗೂ ಕಾಲೊನಿಯ ಪರಿಸ್ಥಿತಿ ಬಗ್ಗೆ ವಿಚಾರಿಸಿದ್ದಾರೆ. ಪ್ರಧಾನಿ ತಮ್ಮ ಮನೆಗೆ ಬಂದಿದ್ದು, ತಮ್ಮೊಂದಿಗೆ ಮಾತನಾಡಿದ್ದು ಆ ಮಹಿಳೆಯನ್ನು ಸ್ತಂಬೀಭೂತಗೊಳಿಸಿದೆ.

ಅಷ್ಟಕ್ಕೂ ಕೋಟ್ಯಂತರ ಮಂದಿ ಉಜ್ವಲ ಸ್ಕೀಮ್ ಫಲಾನುಭವಿಗಳು ಇರುವಾಗ ಆ ಮಹಿಳೆಯ ಮನೆಗೆ ಪ್ರಧಾನಿಗಳು ಹೋಗಲು ಏನು ಕಾರಣ? ಬಡವರಿಗೆ ಸಬ್ಸಿಡಿ ದರದಲ್ಲಿ ಎಲ್​ಪಿಜಿ ಸಿಲಿಂಡರ್ ವಿತರಿಸುವ ಉಜ್ವಲ ಯೋಜನೆಯ ಕೋಟ್ಯಂತರ ಜನರನ್ನು ತಲುಪಿದೆ. ಈ ಯೋಜನೆಯ 10 ಕೋಟಿಯ ಫಲಾನುಭವಿ ಈ ಮೀರಾ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಈ ಮಹಿಳೆಯನ್ನು ಭೇಟಿ ಮಾಡಿರಬಹುದು ಎನ್ನಲಾಗಿದೆ.

ಮೊದಲೇ ಯೋಜಿಸಿರಲಿಲ್ಲ ಈ ಭೇಟಿ

ಉಜ್ವಲ ಯೋಜನೆ ಫಲಾನುಭವಿಯ ಮನೆಗೆ ನರೇಂದ್ರ ಮೋದಿ ದಿಢೀರ್ ಭೇಟಿ ನೀಡಿದ್ದು ಮೊದಲೇ ಪೂರ್ವಯೋಜಿತವಾದ ಕಾರ್ಯಕ್ರಮ ಎಂಬ ಟೀಕೆ ಕೆಲ ವಲಯಗಳಲ್ಲಿ ಬಂದಿರುವುದು ಹೌದು. ಆದರೆ, ಉತ್ತರ ಪ್ರದೇಶ ಸರ್ಕಾರ ನೀಡಿದ ಮಾಹಿತಿ ಪ್ರಕಾರ ಈ ಭೇಟಿ ಮೊದಲೇ ಯೋಜಿತವಾಗಿರಲಿಲ್ಲ. ಪ್ರಧಾನಿಗಳೇ ಸ್ವಯಂ ಆಗಿ ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಎನ್ನಲಾಗಿದೆ.

ಇದನ್ನೂ ಓದಿ: ಭಾರತ-ತಾಂಜಾನಿಯಾ ಫ್ರೆಂಡ್ಲಿ ರನ್: ಫಿಟ್‌ನೆಸ್ ಐಕಾನ್ ಮಿಲಿಂದ್ ಸೋಮನ್ ಭಾಗಿ

ನರೇಂದ್ರ ಮೋದಿ ನಡೆಗಳಿಂದ ಬೆರಗಾದ ನೆಟ್ಟಿಗರು…!

ಉಜ್ವಲ ಯೋಜನೆಯ ಫಲಾನುಭವಿ ಮೀರಾ ಅವರ ಮನೆಗೆ ಮೋದಿ ಭೇಟಿ ನೀಡಿದ ವಿಡಿಯೋ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ದೇಶ ವಿದೇಶಗಳಿಂದ ಜನರು ಮೋದಿ ಗುಣಗಳಿಗೆ ಬೆರಗು ವ್ಯಕ್ತಪಡಿಸಿದ್ದಾರೆ.

ಅಮೆರಿಕನ್ ಭಾರತೀಯರೊಬ್ಬರು ಕಾಮೆಂಟ್ ಮಾಡಿದ್ದು, ಮೋದಿಯಂತಹ ನಾಯಕರು ಅಮೆರಿಕದಲ್ಲಿಲ್ಲವಲ್ಲ ಎಂದು ಚಕಿತಗೊಂಡಿದ್ದಾರೆ.

‘ವಿಪರ್ಯಾಸ ಎಂದರೆ ನಾನು ಭಾರತದಲ್ಲಿ ಚಿಕ್ಕವನಿದ್ದಾಗ ನನ್ನ ದೇಶಕ್ಕೆ ಅಬ್ರಹಾಂ ಲಿಂಕನ್, ಜಾನ್ ಎಫ್ ಕೆನಡಿ ಅವರಂತಹ ನಾಯಕರು ಇಲ್ಲವಲ್ಲ ಎಂದುಕೊಳ್ಳುತ್ತಿದ್ದೆ. ಈಗ 40ಕ್ಕೂ ಹೆಚ್ಚು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದೇನೆ. ಮೋದಿಯಂತಹ ನಾಯಕರು ಯಾಕಿಲ್ಲ ಎನಿಸುತ್ತಿದೆ,’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Mann Ki Baat: ಯಾವ ದೇಶ ನಾವೀನ್ಯತೆಗೆ ಅವಕಾಶ ನೀಡುವುದಿಲ್ಲವೋ ಆ ದೇಶದ ಅಭಿವೃದ್ಧಿ ಅಲ್ಲಿಗೆ ನಿಲ್ಲುತ್ತದೆ: ಮೋದಿ

ಈ ವ್ಯಕ್ತಿ ಮಾಂತ್ರಿಕ ಎಂದು ಒಬ್ಬರ ಉದ್ಗಾರ…!

‘ಈ ದೃಶ್ಯ ನೋಡುವಾಗ ನನಗೇ ಗೊತ್ತಿಲ್ಲದಂತೆ ಕಣ್ಣಲ್ಲಿ ನೀರು ಜಿನುಗುತ್ತಿದ್ದವು. ಈ ವ್ಯಕ್ತಿ ಒಬ್ಬ ಮಾಂತ್ರಿಕನೇ..’ ಎಂದು ಮಗದೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಒಬ್ಬ ಪ್ರಧಾನಿ ಎಂದರೆ ಹೀಗಿರಬೇಕು. ಇವರನ್ನು ಪ್ರಧಾನಿಯಾಗಿ ಪಡೆದಿರುವುದು ದೇಶದ ಅದೃಷ್ಟ. ಎಂಥ ನಿಸ್ವಾರ್ಥ, ಸರಳ ಹಾಗೂ ಬುದ್ಧಿವಂತ ವ್ಯಕ್ತಿ ನಮ್ಮ ಪ್ರಧಾನಿಯಾಗಿದ್ದಾರೆ’ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:31 pm, Sun, 31 December 23