ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ನಡುವೆ ಎಷ್ಟು ಅವಧಿಯ ಅಂತರ ಇರಬೇಕೆಂದು ಈಗ ನೀಡಲಾಗಿರುವ ಮಾರ್ಗಸೂಚಿ ಮತ್ತೆ ಮಾರ್ಪಾಡಾಗುವ ಸಾಧ್ಯತೆ ಇದೆ. ಕೊವಿಡ್ ಲಸಿಕೆಗಳ ಸಲಹಾ ಸಮಿತಿ, ರೋಗ ನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (NTAGI) ಕೆಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ. ಲಸಿಕೆಯ ಎರಡು ಡೋಸ್ಗಳ ನಡುವಿನ ಅಂತರವನ್ನು 6- 8 ವಾರಗಳಿಂದ 12-16 ವಾರಗಳಿಗೆ ಹೆಚ್ಚಿಸಬಹುದು. ಆರೋಗ್ಯ ಸಚಿವಾಲಯದ ಅನುಮೋದನೆಯ ನಂತರ ಶಿಫಾರಸುಗಳನ್ನು ಜಾರಿಗೆ ತರಲಾಗುವುದು. ಇದು ಶೀಘ್ರದಲ್ಲೇ ಪ್ರಕಟಣೆಯಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಮುಂದೆ ಏನು?
ಪ್ರಕ್ರಿಯೆಯ ಪ್ರಕಾರ, ರೋಗ ನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (NTAGI) ಶಿಫಾರಸ್ಸುಗಳನ್ನು ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು (NEGVAC)ಗೆ ಕಳುಹಿಸಲಾಗುವುದು. ನಂತರ ತಜ್ಞರ ಗುಂಪು ತನ್ನ ಶಿಫಾರಸುಗಳನ್ನು ಆರೋಗ್ಯ ಸಚಿವಾಲಯಕ್ಕೆ ಅನುಮೋದನೆಗಾಗಿ ಕಳುಹಿಸುತ್ತದೆ. ಈ ಸಂಪೂರ್ಣ ಪ್ರಕ್ರಿಯೆ 1 ರಿಂದ 2 ದಿನಗಳನ್ನು ತೆಗೆದುಕೊಳ್ಳಬಹುದು.
ರೋಗ ನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ 7 ಮುಖ್ಯ ಶಿಫಾರಸುಗಳು
1. ಕೊರೊನಾ ರೋಗಿಗಳಿಗೆ ಚೇತರಿಸಿಕೊಂಡ ಆರು ತಿಂಗಳ ನಂತರ ಲಸಿಕೆ ಹಾಕಿಸಬೇಕು. ಪ್ರಸ್ತುತ ಚೇತರಿಸಿಕೊಂಡ ರೋಗಿಗಳಿಗೆ 14 ದಿನಗಳ ನಂತರ ಶಾಟ್ ನೀಡಲಾಗುತ್ತದೆ. ಇದು ಮಾನವ ದೇಹದಲ್ಲಿ ಉತ್ಪತ್ತಿಯಾಗುವ ನೈಸರ್ಗಿಕ ಆಂಟಿಬಾಡಿ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
2. ಮೊದಲ ಡೋಸ್ ನಂತರ ಸೋಂಕಿತರಿಗೆ ಚೇತರಿಸಿಕೊಂಡ 4-8 ವಾರಗಳ ನಂತರ ಎರಡನೇ ಡೋಸ್ ನೀಡಬೇಕು. ಪ್ರಸ್ತುತ ಈ ರೋಗಿಗಳಿಗೆ ಚೇತರಿಸಿಕೊಂಡ 14 ದಿನಗಳ ನಂತರ ಎರಡನೇ ಶಾಟ್ ನೀಡಲಾಗುತ್ತದೆ. ನೈಸರ್ಗಿಕ ಆಂಟಿಬಾಡಿ ಉತ್ಪಾದಕತೆಯನ್ನು ಹೆಚ್ಚಿಸಲು ಇದನ್ನು ಶಿಫಾರಸು ಮಾಡಲಾಗಿದೆ.
3. ಚಿಕಿತ್ಸೆಯ ಸಮಯದಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಒಳಗಾದ ರೋಗಿಗಳಿಗೆ ಚೇತರಿಸಿಕೊಂಡ 12 ವಾರಗಳ ನಂತರ ಲಸಿಕೆ ನೀಡಬೇಕು. ಸದ್ಯ ಈ ರೋಗಿಗಳಿಗೆ ನಿರ್ದಿಷ್ಟ ನಿಯಮವಿಲ್ಲ.
4. ಇತರೆ ಗಂಭೀರ ಕಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾದವರಿಗೆ ಚೇತರಿಸಿಕೊಂಡ 4 ರಿಂದ 8 ವಾರಗಳ ನಂತರ ಲಸಿಕೆ ನೀಡಬೇಕು. ಸದ್ಯ ಈ ರೋಗಿಗಳಿಗೆ ಪ್ರತ್ಯೇಕ ಪ್ರೋಟೋಕಾಲ್ ಇಲ್ಲ. ಜೊತೆಗೆ ಯಾವುದೇ ಅಡ್ಡಪರಿಣಾಮಗಳನ್ನು ತಪ್ಪಿಸಲು ಅಂತರ ಅಗತ್ಯವೆಂದು ತಜ್ಞರ ಅಭಿಪ್ರಾಯವಾಗಿದೆ.
5. ವ್ಯಾಕ್ಸಿನೇಷನ್ ಮೊದಲು ರಾಪಿಡ್ ಆಂಟಿಜೆನ್ ಪರೀಕ್ಷೆಯ ಅಗತ್ಯವಿಲ್ಲ. ಸೋಂಕು ಹರಡುವ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಅನಗತ್ಯ ಜನಸಂದಣಿಯನ್ನು ಕಡಿಮೆಗೊಳಿಸಲು ಶಿಫಾರಸು ಮಾಡಲಾಗಿದೆ.
6. ಸದ್ಯ ಕೋವಿಶೀಲ್ಡ್ ಲಸಿಕೆಗಳ ಎರಡು ಪ್ರಮಾಣಗಳ ನಡುವಿನ ಅಂತರ 4-8 ವಾರಗಳಿವೆ. ಲ್ಯಾನ್ಸೆಟ್ ಪ್ರಕಾರ, 12 ವಾರಗಳ ಅಂತರವು ಲಸಿಕೆಯ ಪರಿಣಾಮಕಾರಿತ್ವವನ್ನು ಶೇ. 81.3 ರಷ್ಟು ಹೆಚ್ಚಿಸುತ್ತದೆ. ಇದನ್ನು ಯುರೋಪ್ನಲ್ಲಿ ಅನುಸರಿಸಲಾಗುತ್ತಿದೆ.
7. ಗರ್ಭಿಣಿಯರ ತಪಾಸಣಾ ಕೇಂದ್ರಗಳಲ್ಲಿ ಲಸಿಕೆಗಳ ಸಾಧಕ-ಬಾಧಕಗಳ ಬಗ್ಗೆ ಗರ್ಭಿಣಿಯರಿಗೆ ತಿಳಿಸಬೇಕು. ಅವರಿಗೆ ವ್ಯಾಕ್ಸಿನೇಷನ್ ಆಯ್ಕೆಯನ್ನು ಸಹ ನೀಡಬೇಕು. ಸದ್ಯಕ್ಕೆ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಲಸಿಕೆ ಸ್ವೀಕರಿಸಲು ಅನುಮತಿ ಇಲ್ಲ.
ಇದನ್ನೂ ಓದಿ
ವಿಜಯನಗರ: ಅನ್ಯ ಜಾತಿ ಯುವಕನನ್ನು ಪ್ರೀತಿಸಿದ ಯುವತಿ; ಪೋಷಕರಿಂದ ಮರ್ಯಾದಾ ಹತ್ಯೆ ಶಂಕೆ
(National Technical Advisory Group on Immunisation recommended a change in the covid vaccine guideline)Covishield
Published On - 11:59 am, Thu, 13 May 21