AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ಅತೀ‌ ದೊಡ್ಡ ಜಿಲ್ಲೆ ಉತ್ತರ ಕನ್ನಡದಲ್ಲಿ ಇಲ್ಲ ಸಿಟಿ ಸ್ಕ್ಯಾನ್ ಸೌಲಭ್ಯ, ಅನ್ಯ ಜಿಲ್ಲೆಗಳಿಗೆ ಹೋಗಿಯೇ ಮಾಡಿಸಬೇಕು ಟೆಸ್ಟ್

Uttara Kannada: ಸೋಂಕಿನ ಸವಾರಿಗೆ ಬ್ರೇಕ್ ಹಾಕಲು.. ಕೊರೊನಾ ಜಾಲ ಭೇದಿಸಲು ಮೊದ್ಲು ಕೊರೊನಾ ಟೆಸ್ಟ್ ಮಾಡಬೇಕು. ಸೋಂಕಿತರನ್ನ ಪತ್ತೆ ಹಚ್ಚಬೇಕು. ರೋಗಿಗಳ ಗಂಭೀರತೆ ಅರಿಯಲು ವಿವಿಧ ಟೆಸ್ಟ್‌ಗಳ ಜತೆ ಸಿಟಿ ಸ್ಕ್ಯಾನ್ ಕೂಡಾ ನಡೆಸ್ಬೇಕು. ಆದ್ರೆ, ರಾಜ್ಯದ ಅತೀ‌ ದೊಡ್ಡ ಜಿಲ್ಲೆಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯವೇ ಇಲ್ಲ.

ರಾಜ್ಯದ ಅತೀ‌ ದೊಡ್ಡ ಜಿಲ್ಲೆ ಉತ್ತರ ಕನ್ನಡದಲ್ಲಿ ಇಲ್ಲ ಸಿಟಿ ಸ್ಕ್ಯಾನ್ ಸೌಲಭ್ಯ, ಅನ್ಯ ಜಿಲ್ಲೆಗಳಿಗೆ ಹೋಗಿಯೇ ಮಾಡಿಸಬೇಕು ಟೆಸ್ಟ್
ಕೊವಿಡ್​ ಪರೀಕ್ಷೆ (ಪ್ರಾತಿನಿಧಿಕ ಚಿತ್ರ)
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on:May 13, 2021 | 9:49 AM

Share

ಗುಣ ಲಕ್ಷಣ ಇರುತ್ತೆ.. ಹೆಲ್ತ್ ಅಪ್ಸೆಟ್ ಆಗಿರುತ್ತೆ. ಆದ್ರೂ ಆರ್ಟಿಪಿಸಿಆರ್ನಲ್ಲಿ ನೆಗೆಟಿವ್ ಬಂದಿರುತ್ತೆ. ಆದ್ರೆ, ಸಿಟಿ ಸ್ಕ್ಯಾನ್ನಲ್ಲಿ ಮಾತ್ರ ರಿಪೋರ್ಟ್ ಉಲ್ಟಾ ಆಗಿರುತ್ತೆ. ಹೀಗಾಗಿ ಜನ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಲು ಮುಂದಾಗ್ತಿದ್ದಾರೆ. ಆದ್ರೆ, ಅತೀ ದೊಡ್ಡ ಜಿಲ್ಲೆಯಲ್ಲೇ ಸಿಟಿ ಸ್ಕ್ಯಾನ್ ಮಾಡಿಸೋದು ಅಷ್ಟು ಸುಲಭದ ಕೆಲಸ ಅಲ್ಲ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯ ಕೊರತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯವೇ ಇಲ್ಲದಂತೆ ಆಗಿದೆ. ಕಾರವಾರ, ಹೊನ್ನಾವರ, ಕುಮಟಾ, ಶಿರಸಿಯ ಸರ್ಕಾರಿ ಹಾಗೂ ಖಾಸಗಿ ಹೊರತುಪಡಿಸಿ ಉಳಿದ 8 ತಾಲೂಕುಗಳಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯಗಳೇ ಇಲ್ಲ. ಬೃಹತ್ ನಗರವಾಗಿರುವ ಭಟ್ಕಳದಲ್ಲಂತೂ ಕೇಳವ ಹಾಗಿಲ್ಲ.

ಅಂದ್ಹಾಗೆ, ಕೊರೊನಾದಿಂದಾಗಿ ಹಲವರಿಗೆ ನ್ಯುಮೋನಿಯಾ ಸಮಸ್ಯೆಯೂ ಎದುರಾಗುತ್ತಿದೆ. ಇದ್ರಿಂದ ಶ್ವಾಸಕೋಶದಲ್ಲಿ ಕಫದ ಸಂಗ್ರಹ ಪ್ರಮಾಣವೂ ಅಷ್ಟೇ ಹೆಚ್ಚಾಗಿರುತ್ತದೆ. ಇದನ್ನು ಪತ್ತೆ ಹಚ್ಚಲು ಸಿಟಿ ಸ್ಕ್ಯಾನ್ ಬಹಳಷ್ಟು ಅಗತ್ಯ. ಅಲ್ಲದೆ, ಕೊರೊನಾ ಲಕ್ಷಣಗಳಿದ್ರೂ ಆರ್‌ಟಿಪಿಸಿಆರ್ನಲ್ಲಿ ನೆಗೆಟಿವ್ ಬಂದಿದ್ರೂ, ಸಿಟಿ ಸ್ಕ್ಯಾನ್ ಉಪಯೋಗಿಸಬಹುದು. ಆದ್ರೆ, ಜಿಲ್ಲೆಯಲ್ಲಿ ಲಭ್ಯವಿರುವ ಸಿಟಿ ಸ್ಕ್ಯಾನ್‌ನಲ್ಲಿ ಕೂಡಾ ಹಲವಾರು ಬಾರಿ ತಾಂತ್ರಿಕ‌ ದೋಷ, ಸಿಬ್ಬಂದಿ ಕೊರತೆ, ಹೆಚ್ಚಿನ ಕ್ಯೂನಿಂದಾಗಿ ಜನರಿಂದ ಸೌಲಭ್ಯ ದೊರೆಯದಂತಾಗುತ್ತಿದೆ. ಹೊರ ಜಿಲ್ಲೆ ಉಡುಪಿ, ಮಂಗಳೂರು ಅಥವಾ ಹೊರ ರಾಜ್ಯ ಗೋವಾವನ್ನು ಅವಲಂಭಿಸಬೇಕಾದ ಸ್ಥಿತಿಯಿದೆ.

ಇನ್ನು, ಅಧಿಕಾರಿಗಳು ಹೇಳೋದೇ ಬೇರೆ. ಅಂದ್ರೆ, ಸಿಟಿ ಸ್ಕ್ಯಾನ್ ಹೆಚ್ಚಿನ ಅಗತ್ಯದ ವಸ್ತುವಲ್ಲ. ಆರ್‌ಟಿಪಿಸಿಆರ್ ರಿಪೋರ್ಟ್‌ನಲ್ಲಿ ನೆಗೆಟಿವ್ ಬಂದು, ಕೊವಿಡ್ ಲಕ್ಷಣಗಳಿದ್ದರೆ ಮಾತ್ರ ಸಿಟಿ ಸ್ಕ್ಯಾನ್ ಮಾಡಿಸ್ಬೇಕು ಅಂತಾ ಅಧಿಕಾರಿಗಳು ಖಡಕ್ ಆಗಿ ಹೇಳ್ತಿದ್ದಾರೆ. ಆದ್ರೆ, ಭಟ್ಕಳದಲ್ಲಿ ಸಿಟಿ ಸ್ಕ್ಯಾನ್ ಬಗ್ಗೆ ಸ್ಥಳೀಯ ಶಾಸಕ ಸುನೀಲ್ ನಾಯ್ಕ್ ಅವರ ಬಳಿ ಕೇಳಿದ್ರೆ, ಸಿಎಂ ಸಿಟಿ ಸ್ಕ್ಯಾನ್ ಅಳವಡಿಕೆಗೆ ಅನುದಾನ ನೀಡುವುದಾಗಿ ಹೇಳಿದ್ದಾರೆ ಅಂದ್ರು.

ಒಟ್ನಲ್ಲಿ, ಉತ್ತರಕನ್ನಡ ಜಿಲ್ಲೆಯಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯದ ಕೊರತೆ ಇದೆ. ಇದ್ರಿಂದ ಜನ ಹೊರ ಜಿಲ್ಲೆಗಳಿಗೆ ಹೋಗಿ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ತಿದ್ದಾರೆ. ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.

ಇದನ್ನೂ ಓದಿ: Petrol Diesel Rate Today: ಪೆಟ್ರೋಲ್​, ಡೀಸೆಲ್​ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ; ನಿಮ್ಮ ನಗರದಲ್ಲಿ ತೈಲ ದರ ಎಷ್ಟಿದೆ?

Published On - 9:25 am, Thu, 13 May 21

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್