ಮುಂಬೈ: ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (NCB) ತನ್ನ ಇಬ್ಬರು ಅಧಿಕಾರಿಗಳನ್ನು ಮುಂಬೈ ವಲಯ ಘಟಕದಿಂದ ಅಮಾನತುಗೊಳಿಸಿದೆ. ಭಾರತಿ ಸಿಂಗ್ ಹಾಗೂ ಕರೀಷ್ಮಾ ಪ್ರಕಾಶ್ ಡ್ರಗ್ಸ್ ಪ್ರಕರಣಗಳಲ್ಲಿ ಎನ್ಸಿಬಿ ಅಧಿಕಾರಿಗಳು ಸಹಾಯ ಮಾಡಿದ್ದಾರೆಂಬ ಆರೋಪ ಕೇಳಿಬಂದಿದ್ದರಿಂದ ಅಮಾನತುಗೊಳಿಲಾಗಿದೆ.
ಹೆಸರಾಂತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ನಲ್ಲಿ ಹಲವು ಡ್ರಗ್ಸ್ ಪ್ರಕರಣಗಳು ಬೆಳಕಿಗೆ ಬಂದಿತ್ತು. ಬಾಲಿವುಡ್ ಸಿನಿಮಾದ ಜನಪ್ರಿಯ ಹಾಸ್ಯ ಕಲಾವಿದೆ ಹಾಗೂ ದೀಪಿಕಾ ಪಡುಕೋಣೆಯ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದು, ಇವರಿಗೆ ಎನ್ಸಿಬಿ ನೋಟಿಸ್ ನೀಡಿತ್ತು. ಆದರೆ ಈ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ತೋರಿ, ಜಾಮೀನು ಪಡೆಯುವಲ್ಲಿ ಸಹಾಯ ಮಾಡಿದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಎರಡು ಪ್ರಕರಣಕ್ಕೆ ಸಂಬಂಧಿಸಿದ ನಿಗದಿತ ಜಾಮೀನು ವಿಚಾರಣೆಯ ಸಮಯದಲ್ಲಿ ಸಾರ್ವಜನಿಕ ಅಭಿಯೋಜಕರೊಂದಿಗೆ (public prosecutor) ತನಿಖಾ ಅಧಿಕಾರಿಗಳು ಹಾಜರಾಗಿರಲಿಲ್ಲ ಎಂದು ಮೂಲಗಳಿಂದ ಸ್ಪಷ್ಟವಾಗಿದೆ.