ಮಹಾರಾಷ್ಟ್ರ ಮೇಲೆ ಬಿಜೆಪಿ Surgical Strike, ಯುದ್ಧಕ್ಕೆ ನಾವೂ ಸಿದ್ಧ -ಪವಾರ್

|

Updated on: Nov 23, 2019 | 2:05 PM

ಮುಂಬೈ: ಇಂದು ಬೆಳಗ್ಗೆ ರಾಜ್ಯದಲ್ಲಿ ದಿಢೀರನೆ ಬಿಜೆಪಿ ಮೈತ್ರಿ ಸರ್ಕಾರ ಸ್ಥಾಪನೆಯಾದ ಹಿನ್ನೆಲೆಯಲ್ಲಿ ಎನ್‌ಸಿಪಿ ಮತ್ತು ಶಿವಸೇನೆ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಗೂ ಮುನ್ನ ಈ ದಿಢೀರ್​ ಬೆಳವಣಿಗೆಗೆ ಕಾರಣಕರ್ತರಾಗಿರುವ ಅಜಿತ್‌ ಪವಾರ್‌ ಅವರನ್ನ ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ವಜಾ ಮಾಡಲಾಗಿದೆ. ಬಿಜೆಪಿಗೆ ಅಗತ್ಯ ಸಂಖ್ಯಾಬಲ ಇಲ್ಲ. ಈಗಲೂ ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಮೈತ್ರಿ ಜಾರಿಯಲ್ಲಿದೆ. ನಮ್ಮ ಮೈತ್ರಿ ಶಾಸಕರನ್ನು ಹಿಡಿದಿಟ್ಟುಕೊಂಡು ಹೊಸ ಸರ್ಕಾರ ರಚನೆಗೆ ನಾವು ಸಿದ್ಧವಿದ್ದೇವೆ. ಶಿವಸೇನೆ ನಾಯಕತ್ವದಲ್ಲಿ […]

ಮಹಾರಾಷ್ಟ್ರ ಮೇಲೆ ಬಿಜೆಪಿ Surgical Strike, ಯುದ್ಧಕ್ಕೆ ನಾವೂ ಸಿದ್ಧ -ಪವಾರ್
Follow us on


ಮುಂಬೈ:
ಇಂದು ಬೆಳಗ್ಗೆ ರಾಜ್ಯದಲ್ಲಿ ದಿಢೀರನೆ ಬಿಜೆಪಿ ಮೈತ್ರಿ ಸರ್ಕಾರ ಸ್ಥಾಪನೆಯಾದ ಹಿನ್ನೆಲೆಯಲ್ಲಿ ಎನ್‌ಸಿಪಿ ಮತ್ತು ಶಿವಸೇನೆ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಗೂ ಮುನ್ನ ಈ ದಿಢೀರ್​ ಬೆಳವಣಿಗೆಗೆ ಕಾರಣಕರ್ತರಾಗಿರುವ ಅಜಿತ್‌ ಪವಾರ್‌ ಅವರನ್ನ ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ವಜಾ ಮಾಡಲಾಗಿದೆ.

ಬಿಜೆಪಿಗೆ ಅಗತ್ಯ ಸಂಖ್ಯಾಬಲ ಇಲ್ಲ. ಈಗಲೂ ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಮೈತ್ರಿ ಜಾರಿಯಲ್ಲಿದೆ. ನಮ್ಮ ಮೈತ್ರಿ ಶಾಸಕರನ್ನು ಹಿಡಿದಿಟ್ಟುಕೊಂಡು ಹೊಸ ಸರ್ಕಾರ ರಚನೆಗೆ ನಾವು ಸಿದ್ಧವಿದ್ದೇವೆ. ಶಿವಸೇನೆ ನಾಯಕತ್ವದಲ್ಲಿ ನಾವೇ ಹೊಸ ಸರ್ಕಾರ ರಚಿಸುವುದು. ಇಂದು ನಡೆದಿರುವ ಮಹಾರಾಷ್ಟ್ರ ಕ್ಷಿಪ್ರಕಾಂತಿಯು ಬಿಜೆಪಿ ನಡೆಸಿರುವ ರಾಜಕೀಯ ಸರ್ಜಿಕಲ್​ ಸ್ಟ್ರೈಕ್ ಎಂದು ಶರದ್ ಪವಾರ್ ಕಿಡಿಕಿಡಿಯಾಗಿದ್ದಾರೆ.

ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಮೈತ್ರಿಗೆ ಬಹುಮತ ಇತ್ತು. ಆದ್ರೆ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸುವ ಅಜಿತ್‌ ಪವಾರ್‌ ನಡೆಯಿಂದ ಕಾರ್ಯಕರ್ತರಿಗೆ ನೋವಾಗಿದೆ. ಅಜಿತ್‌ ಪವಾರ್‌ ನಿರ್ಧಾರಕ್ಕೆ ನಮ್ಮ ವಿರೋಧವಿದೆ ಎಂದು ಪವಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮಗೆ ಈಗಲೂ 170 ಶಾಸಕರ ಬೆಂಬಲವಿದೆ
ಪಕ್ಷದ ವಿರುದ್ಧ ಅಜಿತ್‌ ಪವಾರ್‌ ನಿರ್ಧಾರ ಕೈಗೊಂಡಿದ್ದಾರೆ. ಅಜಿತ್‌ ಪವಾರ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅಜಿತ್‌ ಪವಾರ್‌ ಜತೆ ಎಷ್ಟು ಶಾಸಕರಿದ್ದಾರೆಂದು ಮಾಹಿತಿಯಿಲ್ಲ. ಅಜಿತ್‌ ಪವಾರ್‌ ಜೊತೆ 10ರಿಂದ 12 ಶಾಸಕರಿರಬಹುದು. ಆದ್ರೆ ಅದು ಬಿಜೆಪಿ, NCP ಸರ್ಕಾರಕ್ಕೆ ಅಗತ್ಯ ಬಹುಮತವಿಲ್ಲ. ಅಜಿತ್‌ ಪವಾರ್‌ ನಡೆಯಿಂದ ನಮಗೆ ಹಿನ್ನಡೆಯಾಗಿಲ್ಲ. ಸರ್ಕಾರ ರಚಿಸಲು ಈಗಲೂ ನಮಗೆ ಬಹುಮತವಿದೆ. ನಮಗೆ ಈಗಲೂ 170 ಶಾಸಕರ ಬೆಂಬಲವಿದೆ ಎಂದು ಪವಾರ್ ಹೇಳಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಶರದ್ ಪವಾರ್‌ ಬೆಂಬಲಿತ ಎಲ್ಲಾ ಶಾಸಕರು ಉಪಸ್ಥಿತಿರಿದ್ದರು. ನಾವು ನಮ್ಮ ನಾಯಕ ಶರದ್ ಪವಾರ್‌ ಜೊತೆ ಇದ್ದೇವೆ ಎಂದು ಬೆಳಗ್ಗೆ ಅಜಿತ್‌ ಪವಾರ್‌ ಜೊತೆ ಗುರುತಿಸಿಕೊಂಡಿದ್ದ ಶಾಸಕರೊಬ್ಬರು ಇದೇ ವೇಳೆ ಹೇಳಿದರು.

ಮಹಾರಾಷ್ಟ್ರದ ಜನರಿಗೆ ಬಿಜೆಪಿ ದ್ರೋಹ ಮಾಡಿದೆ. ನಾವು ಜೊತೆಯಾಗಿದ್ದೇವೆ, ಮುಂದೆಯೂ ಜೊತೆ ಇರುತ್ತೇವೆ. ಬಿಜೆಪಿ ನಾಯಕರ ಕುತಂತ್ರ ಬಯಲಾಗಿದೆ. ಬಿಜೆಪಿಯ ಆಟವನ್ನು ಇಡೀ ದೇಶವೇ ನೋಡುತ್ತಿದೆ ಎಂದು ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಾಸಕರನ್ನ ಅಜಿತ್ ಅಪಹರಿಸಿದ್ದಾರೆ:
ಶಾಸಕರನ್ನು ಅಜಿತ್ ಪವಾರ್‌ ಕಿಡ್ನ್ಯಾಪ್ ಮಾಡಿದ್ದಾರೆ. 8 ಮಂದಿ ಶಾಸಕರನ್ನು ಬ್ಲ್ಯಾಕ್‌ಮೇಲ್ ಮಾಡಿ ಕಾರಿನಲ್ಲಿ ಎತ್ತಿಹಾಕಿಕೊಂಡು ಹೋಗಿದ್ದಾರೆ ಎಂದು ಸಂಜಯ್ ರಾವತ್‌ ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ ಬಿಜೆಪಿಯವ್ರಿಗೆ ತಾಕತ್ ಇದ್ರೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಿ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಸವಾಲ್ ಹಾಕಿದ್ದಾರೆ.

Published On - 1:16 pm, Sat, 23 November 19