ಮಹಾ ವಿಕಾಸ್ ಅಘಾಡಿಯ ನೂತನ ಶಾಸಕರು ಇಂದು ಪ್ರಮಾಣ ವಚನ ಸ್ವೀಕರಿಸುವುದಿಲ್ಲ: ಆದಿತ್ಯ ಠಾಕ್ರೆ

|

Updated on: Dec 07, 2024 | 12:55 PM

ನಮಗೆ ಇವಿಎಂ ಬಗ್ಗೆ ಅನುಮಾನ ಇದೆ, ಹಾಗಾಗಿ ಇಂದು ನಮ್ಮ ಮಹಾ ವಿಕಾಸ್ ಅಘಾಡಿ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸುವುದಿಲ್ಲ. ಇಂದು ಇವಿಎಂನಲ್ಲಿ ನಡೆದ ಮೋಸದ ಬಗ್ಗೆ ಪ್ರತಿಭಟನೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ನಮ್ಮ ಶಾಸಕರು ಪ್ರಮಾಣ ವಚನದಲ್ಲಿ ಭಾಗಿಯಾಗುವುದಿಲ್ಲ. ಇಂದು ಮಹಾರಾಷ್ಟ್ರದಲ್ಲಿ ವಿಶೇಷ ವಿಧಾನಸಭೆ ಅಧಿವೇಶನ ಕರೆಯಲಾಗಿದೆ. ಈ ವೇಳೆ ನೂತನ ಶಾಸಕರು ಪ್ರಮಾಣ ವಚನ, ನೂತನ ಸ್ಪೀಕರ್​​​ ನೇಮಕ, ರಾಜ್ಯಪಾಲರ ಭಾಷಣ ನಡೆಯಲಿದೆ. ಇದರ ಮಧ್ಯೆ ಮಹಾ ವಿಕಾಸ್ ಅಘಾಡಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಮಹಾ ವಿಕಾಸ್ ಅಘಾಡಿಯ ನೂತನ ಶಾಸಕರು ಇಂದು ಪ್ರಮಾಣ ವಚನ ಸ್ವೀಕರಿಸುವುದಿಲ್ಲ: ಆದಿತ್ಯ ಠಾಕ್ರೆ
ಸಾಂದರ್ಭಿಕ ಚಿತ್ರ ( ಮಹಾ ವಿಕಾಸ್ ಅಘಾಡಿ)
Follow us on

ಮುಂಬೈ, ಡಿ.7: ಇಂದು ಯಾವುದೇ ಕಾರಣಕ್ಕೂ ಮಹಾ ವಿಕಾಸ್ ಅಘಾಡಿ (ಎಂವಿಎ)ಯ ನೂತನ ಶಾಸಕರು ಪ್ರಮಾಣವಚನ ಸ್ವೀಕಾರ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ. ಈ ಮೂಲಕ ವಿಧಾನಸಭೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಹಿಷ್ಕರಿಸಲಿದ್ದಾರೆ. ಈ ಬಗ್ಗೆ ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಇಂದು ಹೇಳಿದ್ದಾರೆ. ಮತಯಂತ್ರಗಳನ್ನು (ಇವಿಎಂ) ಟ್ಯಾಂಪರಿಂಗ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಜನರಿಂದ ಬಂದ ತೀರ್ಪು ಅಲ್ಲ. ಇಲ್ಲಿ ಮಹಾ ಮೋಸ ನಡೆದಿದೆ. ಆ ಕಾರಣದಿಂದ ನಮ್ಮ ಮಹಾ ವಿಕಾಸ್ ಅಘಾಡಿ ಯಾವ ಶಾಸಕರು ಕೂಡ ಪ್ರಮಾಣವಚನ ಸ್ವೀಕಾರ ಮಾಡುವುದಿಲ್ಲ ಎಂದು ಹೇಳಿದರು.

ಇಂದು ನಮ್ಮ ನೂತನ ಶಾಸಕರು ಪ್ರಮಾಣ ವಚನ ಸ್ವೀಕಾರಿಸುವುದಿಲ್ಲ, ಇಎಂವಿ ಬಗ್ಗೆ ನಮಗೆ ಅನುಮಾನವಿದೆ. ಈ ಬಗ್ಗೆ ನಾವು ಪ್ರತಿಭಟನೆ ಮಾಡುತ್ತವೆ. ಆ ಕಾರಣದಿಂದ ನಮ್ಮ ಶಾಸಕರು ಇಂದು ಪ್ರಮಾಣ ವಚನ ಸ್ವೀಕರ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ವಿಧಾನಸಭೆಯ ವಿಶೇಷ ಮೂರು ದಿನಗಳ ಅಧಿವೇಶನದ ನಡೆಯಲಿದೆ. ಈ ಸಮಯದಲ್ಲಿ  ಮಹಾ ವಿಕಾಸ್ ಅಘಾಡಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಇದನ್ನೂಓದಿ: ಬ್ಯಾಲೆಟ್ ಪೇಪರ್ ಮತದಾನ ಬೇಕು ಎಂಬ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ, ಕಾಂಗ್ರೆಸ್​​​ಗೆ ಶಾಕ್

ಹಂಗಾಮಿ ಸ್ಪೀಕರ್ ಕಾಳಿದಾಸ್ ಕೊಳಂಬ್ಕರ್ ಅವರ ಮೇಲ್ವಿಚಾರಣೆಯ ಅಧಿವೇಶನದಲ್ಲಿ ಶಾಸಕರಿಗೆ ಪ್ರಮಾಣವಚನ, ವಿಧಾನಸಭಾ ಸ್ಪೀಕರ್ ಆಯ್ಕೆ, ಹೊಸ ಸರ್ಕಾರಕ್ಕೆ ವಿಶ್ವಾಸ ಮತ ಮತ್ತು ರಾಜ್ಯಪಾಲರ ಭಾಷಣ ನಡೆಯಲಿದೆ. ಬಿಜೆಪಿಯ ಹಿರಿಯ ಶಾಸಕ ಕೊಲಂಬ್ಕರ್ ಅವರನ್ನು ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ