ದೆಹಲಿ: ಕೊರೊನಾ ಅಬ್ಬರದ ನಡುವೆ ದೀಪಾವಳಿ ಮತ್ತು ಇತರೆ ಹಬ್ಬಗಳು ಸಾಲುಸಾಲಾಗಿ ಬರುತ್ತಿವೆ. ಇತ್ತ, ಹಬ್ಬದಾಚರಣೆಯ ಅಂಗವಾಗಿ ದೇಶದ ಹಲವು ನಗರ ಮತ್ತು ಪಟ್ಟಣಗಳಲ್ಲಿ ಪಟಾಕಿ ಸಿಡಿಸುವುದು ಸಹ ಹೆಚ್ಚಾಗಲಿದೆ. ಇದರಿಂದ ವಾಯುಮಾಲಿನ್ಯವೂ ಅಧಿಕವಾಗುವ ಸಾಧ್ಯತೆಗಳಿದ್ದು ಈ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ಕಟ್ಟುನಿಟ್ಟಿನ ಸೂಚನೆ ನೀಡಿದೆ.
ವಾಯು ಗುಣಮಟ್ಟ ಸೂಚ್ಯಂಕದಲ್ಲಿ (ಏರ್ ಕ್ವಾಲಿಟಿ ಇಂಡೆಕ್ಸ್) ಗಾಳಿಯ ಗುಣಮಟ್ಟ ‘ಮಾಡರೇಟ್’ ಅಥವಾ ಅದಕ್ಕಿಂತ ಕಮ್ಮಿ ಇದ್ದರೆ ಪಟಾಕಿ ಮಾರಾಟದ ಮೇಲೆ ಕೆಲ ನಿರ್ಬಂಧಗಳನ್ನು ಹೇರಬೇಕು ಎಂದು NGT ಸೂಚಿಸಿದೆ. ಅಂಥ ನಗರಗಳಲ್ಲಿ ಕೇವಲ ಹಸಿರು ಪಟಾಕಿಗಳ ಮಾರಾಟಕ್ಕೆ ಅನುಮತಿ ನೀಡಲು ಸೂಚಿಸಿದೆ. ಜೊತೆಗೆ, ದೀಪಾವಳಿ ಸೇರಿದಂತೆ ಛತ್ ಪೂಜೆ, ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ವೇಳೆ ಕೇವಲ 2 ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸುವ ಅವಕಾಶ ಕಲ್ಪಿಸಬೇಕು ಎಂದು ರಾಜ್ಯಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಸೂಚಿಸಿದೆ.
Published On - 1:48 pm, Mon, 9 November 20