AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಸಿಕಾಂಥ್ ಸೆಂಥಿಲ್ ಮತ್ತು ಅಣ್ಣಾಮಲೈ ಮೇಲೆ ನಿಂತಿದೆ ಎರಡು ರಾಷ್ಟ್ರೀಯ ಪಕ್ಷಗಳ ಭವಿಷ್ಯ!?

ಭಾರತೀಯ ಆಡಳಿತಾತ್ಮಕ ಸೇವೆಯನ್ನು ತ್ಯಜಿಸಿ ರಾಜಕೀಯ ಪಕ್ಷಗಳನ್ನು ಸೇರುವ ಪ್ರವೃತ್ತಿ ದೇಶದಲ್ಲಿ ಆಗಾಗ ಕಂಡುಬರುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಹಲವು ವಿಷಯಗಳಲ್ಲಿ ಧ್ವನಿ ಎತ್ತಿದ್ದ ಮಾಜಿ ಐಎಎಸ್ ಅಧಿಕಾರಿ ಸಸಿಕಾಂಥ್ ಸೆಂಥಿಲ್ ಈಗ ಕಾಂಗ್ರೆಸ್ ಸೇರಿಕೊಂಡಿದ್ದಾರೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಮುನ್ನೆಲೆಗೆ ಬರಲು 41 ವರ್ಷದ ಸಸಿಕಾಂಥ್ ಶ್ರಮಿಸಲಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿವೆ. ತಮಿಳುನಾಡು ರಾಜಕೀಯದಲ್ಲಿ ಈಗ ಮಾಜಿ ಐಎಎಸ್ ಅಧಿಕಾರಿಗಳ ಹವಾ.. ತಮಿಳುನಾಡು ರಾಜಕೀಯದಲ್ಲಿ ಈಗ ಮಾಜಿ ಐಎಎಸ್ […]

ಸಸಿಕಾಂಥ್ ಸೆಂಥಿಲ್ ಮತ್ತು ಅಣ್ಣಾಮಲೈ ಮೇಲೆ ನಿಂತಿದೆ ಎರಡು ರಾಷ್ಟ್ರೀಯ ಪಕ್ಷಗಳ ಭವಿಷ್ಯ!?
ಪೃಥ್ವಿಶಂಕರ
| Updated By: ಆಯೇಷಾ ಬಾನು|

Updated on:Nov 09, 2020 | 3:16 PM

Share

ಭಾರತೀಯ ಆಡಳಿತಾತ್ಮಕ ಸೇವೆಯನ್ನು ತ್ಯಜಿಸಿ ರಾಜಕೀಯ ಪಕ್ಷಗಳನ್ನು ಸೇರುವ ಪ್ರವೃತ್ತಿ ದೇಶದಲ್ಲಿ ಆಗಾಗ ಕಂಡುಬರುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಹಲವು ವಿಷಯಗಳಲ್ಲಿ ಧ್ವನಿ ಎತ್ತಿದ್ದ ಮಾಜಿ ಐಎಎಸ್ ಅಧಿಕಾರಿ ಸಸಿಕಾಂಥ್ ಸೆಂಥಿಲ್ ಈಗ ಕಾಂಗ್ರೆಸ್ ಸೇರಿಕೊಂಡಿದ್ದಾರೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಮುನ್ನೆಲೆಗೆ ಬರಲು 41 ವರ್ಷದ ಸಸಿಕಾಂಥ್ ಶ್ರಮಿಸಲಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿವೆ.

ತಮಿಳುನಾಡು ರಾಜಕೀಯದಲ್ಲಿ ಈಗ ಮಾಜಿ ಐಎಎಸ್ ಅಧಿಕಾರಿಗಳ ಹವಾ.. ತಮಿಳುನಾಡು ರಾಜಕೀಯದಲ್ಲಿ ಈಗ ಮಾಜಿ ಐಎಎಸ್ ಅಧಿಕಾರಿಗಳ ಗಾಳಿ ಜೋರಾಗಿ ಬೀಸುತ್ತಿದೆ. ತಮಿಳುನಾಡು ಮತದಾರರ ನೆಚ್ಚಿನ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ ಮತ್ತು ಎಐಡಿಎಂಕೆಗಳಿಗೆ ಸೆಡ್ಡು ಹೊಡೆಯಲು ರಾಷ್ಟ್ರೀಯ ಪಕ್ಷಗಳು ಭಾರೀ ಪ್ರಯೋಗಗಳನ್ನೇ ಮಾಡುತ್ತಿವೆ. ಇದೇ ಮಾರ್ಚ್ ನಲ್ಲಿ ಮಾಜಿ ಐಪಿಎಸ್ ಅಧಿಕಾರಿ, ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಕೆ. ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಇದೀಗ ಸಸಿಕಾಂತ್ ಸೆಂಥಿಲ್ ಅವರ ಸೇರ್ಪಡೆ ಹೊಸ ಕುತೂಹಲ ಮೂಡಿಸಿದೆ. ಭಿನ್ನ ತಾತ್ವಿಕ ಸಿದ್ಧಾಂತಗಳನ್ನು ಹೊಂದಿರುವ ಈ ಎರಡೂ ಪಕ್ಷಗಳ ಬೇರು ತಮಿಳುನಾಡಿನಲ್ಲಿ ಇಳಿಯಲು ಹರಸಾಹಸವನ್ನೇ ಪಡುತ್ತಿವೆ. ಪ್ರಬಲ ಪ್ರಾದೇಶಿಕ ಪಕ್ಷಗಳ ನಡುವೆ ಒಳನುಸುಳುವುದು ಸುಲಭವಂತೂ ಅಲ್ಲ. ಹಾಗಾಗಿ ಇಬ್ಬರು ಪ್ರಸಿದ್ಧ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಎರಡೂ ರಾಷ್ಟ್ರೀಯ ಪಕ್ಷಗಳು 2021 ರ ವಿಧಾನಸಭಾ ಚುನಾವಣೆಯಲ್ಲಿ ಒಂದಷ್ಟು ಭಾರೀ ಸೀಟುಗಳನ್ನು ಗೆಲ್ಲುವ ಯೋಜನೆ ರೂಪಿಸಿವೆ.

ತಮಿಳುನಾಡಲ್ಲಿ ಎರಡು ಪಕ್ಷಗಳ ಸಾಧನೆ ಅಷ್ಟಕಷ್ಟೆ.. ತಮಿಳುನಾಡಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಇದುವರೆಗಿನ ಸಾಧನೆ ಹೇಳಿಕೊಳ್ಳುವಂತೇನೂ ಇಲ್ಲ. 232 ಸ್ಥಾನಗಳಲ್ಲಿ ಕಾಂಗ್ರೆಸ್ 2016 ರ ವಿಧಾನಸಭಾ ಚುನಾವಣೆಯಲ್ಲಿ 41 ರಲ್ಲಿ ಸ್ಪರ್ಧಿಸಿ ಗೆದ್ದಿರುವುದು 8 ಸ್ಥಾನ ಮಾತ್ರ. ಡಿಎಂಕೆ ಜೊತೆಯ ಹೊಂದಾಣಿಕೆಯ ಪಾತ್ರವೂ ಈ ಗೆಲುವಲ್ಲಿ ಪಾತ್ರವಹಿಸಿತ್ತು. ಆದರೆ 2019 ರ ಲೋಕಸಭಾ ಚುನಾವಣೆಯಲ್ಲಿ 9 ರಲ್ಲಿ ಸ್ಪರ್ಧಿಸಿ 8ರಲ್ಲಿ ಗೆಲುವು ಕಂಡಿತ್ತು.

ಇನ್ನು ಬಿಜೆಪಿಯ ಪಾಲಿಗೆ ತಮಿಳುನಾಡಿನ ಭದ್ರ ಕೋಟೆಯೊಳಗೆ ನುಸುಳುವುದು ಸಾಧ್ಯವಾಗಿಲ್ಲ. 2016 ರ ವಿಧಾನಸಭಾ ಚುನಾವಣೆಯಲ್ಲಿ ಇಂದಿಯಾ ಜನನಾಯಗ ಕಚ್ಚಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಒಂದು ಸ್ಥಾನವೂ ಎರಡೂ ಪಕ್ಷಗಳಿಗೆ ಲಭಿಸಲಿಲ್ಲ. ಆದರೆ 2019 ರಲ್ಲಿ ಇದೇ ಇಂದಿಯಾ ಜನನಾಯಗ ಕಚ್ಚಿ ಪಕ್ಷದ ಟಿ.ಆರ್. ಪಾರಿವೆಂದರ್ ಯುಪಿಎ-ಡಿಎಂಕೆ ಜೊತೆ ದೋಸ್ತಿ ಬೆಳೆಸಿ 4,03,518 ಮತಗಳಿಂದ ಗೆದ್ದಿದ್ದರು ಎಂಬುದು ದಾಖಲಾರ್ಹ. ಈ ಕಾರಣ ಬಿಜೆಪಿಗಿಂತ ತಮಿಳುನಾಡಲ್ಲಿ ಕಾಂಗ್ರೆಸ್ ಸ್ವಲ್ಪ ಮುನ್ನಡೆಯಲ್ಲಿದೆ.

2021 ರ ವಿದಾನಸಭಾ ಚುನಾವಣೆಯಲ್ಲಿ ಎಲ್ಲಾ 232 ಸ್ಥಾನಗಳಲ್ಲೂ ಸ್ಪರ್ಧಿಸುವುದಾಗಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಇತ್ತೀಚಿಗೆ ಹೇಳಿಕೆ ನೀಡಿದ್ದಾರೆ. ಇದು ಅಣ್ಣಾಮಲೈ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಸುಳಿವು ನೀಡಿದೆ.

ಅಣ್ಣಾಮಲೈ ಮತ್ತು ಸಸಿಕಾಂಥ್ ಸೆಂಥಿಲ್ ಅವರ ಮೇಲೆ ಇಡೀ ರಾಷ್ಟ್ರದ ಚಿತ್ತ ನೆಟ್ಟಿದೆ. ಎರಡು ರಾಷ್ಟ್ರೀಯ ಪಕ್ಷಗಳ ತಮಿಳುನಾಡಿನ ಭವಿಷ್ಯ ಇವರಿಬ್ಬರ ಭುಜದ ಮೇಲಿರುವುದು ಸುಳ್ಳಲ್ಲ.

Published On - 2:34 pm, Mon, 9 November 20

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!