ನಿಮ್ಮೂರಲ್ಲಿ ಪಟಾಕಿ ಮಾರಾಟ, ಸಿಡಿಸೋದು ವಾಯು ಗುಣಮಟ್ಟದ ಮೇಲೆ ಅವಲಂಬಿತ -NGT

ನಿಮ್ಮೂರಲ್ಲಿ ಪಟಾಕಿ ಮಾರಾಟ, ಸಿಡಿಸೋದು ವಾಯು ಗುಣಮಟ್ಟದ ಮೇಲೆ ಅವಲಂಬಿತ -NGT

ದೆಹಲಿ: ಕೊರೊನಾ ಅಬ್ಬರದ ನಡುವೆ ದೀಪಾವಳಿ ಮತ್ತು ಇತರೆ ಹಬ್ಬಗಳು ಸಾಲುಸಾಲಾಗಿ ಬರುತ್ತಿವೆ. ಇತ್ತ, ಹಬ್ಬದಾಚರಣೆಯ ಅಂಗವಾಗಿ ದೇಶದ ಹಲವು ನಗರ ಮತ್ತು ಪಟ್ಟಣಗಳಲ್ಲಿ ಪಟಾಕಿ ಸಿಡಿಸುವುದು ಸಹ ಹೆಚ್ಚಾಗಲಿದೆ. ಇದರಿಂದ ವಾಯುಮಾಲಿನ್ಯವೂ ಅಧಿಕವಾಗುವ ಸಾಧ್ಯತೆಗಳಿದ್ದು ಈ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ಕಟ್ಟುನಿಟ್ಟಿನ ಸೂಚನೆ ನೀಡಿದೆ. ವಾಯು ಗುಣಮಟ್ಟ ಸೂಚ್ಯಂಕದಲ್ಲಿ (ಏರ್​ ಕ್ವಾಲಿಟಿ ಇಂಡೆಕ್ಸ್​) ಗಾಳಿಯ ಗುಣಮಟ್ಟ ‘ಮಾಡರೇಟ್’​ ಅಥವಾ ಅದಕ್ಕಿಂತ ಕಮ್ಮಿ ಇದ್ದರೆ ಪಟಾಕಿ ಮಾರಾಟದ ಮೇಲೆ ಕೆಲ ನಿರ್ಬಂಧಗಳನ್ನು ಹೇರಬೇಕು ಎಂದು […]

KUSHAL V

|

Nov 09, 2020 | 1:51 PM

ದೆಹಲಿ: ಕೊರೊನಾ ಅಬ್ಬರದ ನಡುವೆ ದೀಪಾವಳಿ ಮತ್ತು ಇತರೆ ಹಬ್ಬಗಳು ಸಾಲುಸಾಲಾಗಿ ಬರುತ್ತಿವೆ. ಇತ್ತ, ಹಬ್ಬದಾಚರಣೆಯ ಅಂಗವಾಗಿ ದೇಶದ ಹಲವು ನಗರ ಮತ್ತು ಪಟ್ಟಣಗಳಲ್ಲಿ ಪಟಾಕಿ ಸಿಡಿಸುವುದು ಸಹ ಹೆಚ್ಚಾಗಲಿದೆ. ಇದರಿಂದ ವಾಯುಮಾಲಿನ್ಯವೂ ಅಧಿಕವಾಗುವ ಸಾಧ್ಯತೆಗಳಿದ್ದು ಈ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ಕಟ್ಟುನಿಟ್ಟಿನ ಸೂಚನೆ ನೀಡಿದೆ.

ವಾಯು ಗುಣಮಟ್ಟ ಸೂಚ್ಯಂಕದಲ್ಲಿ (ಏರ್​ ಕ್ವಾಲಿಟಿ ಇಂಡೆಕ್ಸ್​) ಗಾಳಿಯ ಗುಣಮಟ್ಟ ‘ಮಾಡರೇಟ್’​ ಅಥವಾ ಅದಕ್ಕಿಂತ ಕಮ್ಮಿ ಇದ್ದರೆ ಪಟಾಕಿ ಮಾರಾಟದ ಮೇಲೆ ಕೆಲ ನಿರ್ಬಂಧಗಳನ್ನು ಹೇರಬೇಕು ಎಂದು NGT ಸೂಚಿಸಿದೆ. ಅಂಥ ನಗರಗಳಲ್ಲಿ ಕೇವಲ ಹಸಿರು ಪಟಾಕಿಗಳ ಮಾರಾಟಕ್ಕೆ ಅನುಮತಿ ನೀಡಲು ಸೂಚಿಸಿದೆ. ಜೊತೆಗೆ, ದೀಪಾವಳಿ ಸೇರಿದಂತೆ ಛತ್​ ಪೂಜೆ, ಕ್ರಿಸ್​ಮಸ್​ ಮತ್ತು ಹೊಸ ವರ್ಷಾಚರಣೆ ವೇಳೆ ಕೇವಲ 2 ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸುವ ಅವಕಾಶ ಕಲ್ಪಿಸಬೇಕು ಎಂದು ರಾಜ್ಯಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಸೂಚಿಸಿದೆ.

Follow us on

Most Read Stories

Click on your DTH Provider to Add TV9 Kannada