ಮುಸ್ಲಿಮೇತರರ ಮೇಲೆ ಸೇಡು ತೀರಿಸಲು ಭಾರತದಾದ್ಯಂತ ದಾಳಿಗೆ ಶಂಕಿತ ಐಸಿಸ್ ಉಗ್ರರ ಯೋಜನೆ

|

Updated on: Nov 11, 2023 | 6:57 PM

ತನಿಖಾ ಸಂಸ್ಥೆಯು "ಕಾಫಿರ್‌ಗಳ ಮೇಲಿನ ಪ್ರತೀಕಾರ" ಎಂಬ ಶೀರ್ಷಿಕೆಯ ದಾಖಲೆಗಳ ಸೆಟ್ ಅನ್ನು ವಶಪಡಿಸಿಕೊಂಡಿದೆ, ಅದು ಭಾರತದಲ್ಲಿ ಐಸಿಸ್ ಚಟುವಟಿಕೆಗಳನ್ನು ಮುಂದುವರಿಸಲು ಅವರ ಕಾರ್ಯತಂತ್ರವನ್ನು ವಿವರಿಸುತ್ತದೆ. "ಅವರು ಕಾಫಿರರು (ಮುಸ್ಲಿಮೇತರರು) ಮುಸ್ಲಿಮರ ಮೇಲೆ ನಡೆಸಿದ ದೌರ್ಜನ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಬಯಸಿದ್ದರು" ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಸ್ಲಿಮೇತರರ ಮೇಲೆ ಸೇಡು ತೀರಿಸಲು ಭಾರತದಾದ್ಯಂತ ದಾಳಿಗೆ ಶಂಕಿತ ಐಸಿಸ್ ಉಗ್ರರ ಯೋಜನೆ
ಎನ್ಐಎ
Follow us on

ದೆಹಲಿ ನವೆಂಬರ್ 11: ದೇಶಾದ್ಯಂತ ದಾಳಿಗೆ ಯೋಜನೆ ರೂಪಿಸಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಏಳು ಶಂಕಿತ ಐಸಿಸ್ ಭಯೋತ್ಪಾದಕರ (suspected ISIS terrorists) ವಿರುದ್ಧ ಚಾರ್ಜ್ ಶೀಟ್ (chargesheet) ಸಲ್ಲಿಸಿದೆ.ಆರೋಪಿಗಳು ತಮ್ಮ ಹ್ಯಾಂಡ್ಲರ್‌ಗಳ ನಿರ್ದೇಶನದ ಮೇರೆಗೆ ಐಸಿಸ್ ಚಟುವಟಿಕೆಗಳನ್ನು ಉತ್ತೇಜಿಸಲು ಹಣವನ್ನು ಸಂಗ್ರಹಿಸಿದ್ದಾರೆ ಎಂದು ತನಿಖೆಗಳು ಬಹಿರಂಗಪಡಿಸಿವೆ ಎಂದು ಆರೋಪಪಟ್ಟಿ ಹೇಳಿದೆ. ದೇಶದಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದನೆ ಮಾಡಲು ಬಯಸಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ.

ಎಲ್ಲಾ ಆರೋಪಿಗಳು ವಿದ್ಯಾವಂತರು ಮತ್ತು ತಂತ್ರಜ್ಞಾನ ಬಲ್ಲವರು. ಅವರು ಮಹಾರಾಷ್ಟ್ರದ ಪುಣೆಯಲ್ಲಿ ಹಲವಾರು ಸಭೆಗಳನ್ನು ನಡೆಸಿದ್ದು, ವಾಟ್ಸಾಪ್ ಗುಂಪುಗಳ ಮೂಲಕ ಹೆಚ್ಚಿನ ಸದಸ್ಯರನ್ನು ನೇಮಿಸಿಕೊಳ್ಳಲು ಯೋಜಿಸಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಈ ಉಗ್ರರು ಐಇಡಿಗಳಿಗೆ ರಾಸಾಯನಿಕಗಳನ್ನು ಖರೀದಿಸಲು ಸಲ್ಫ್ಯೂರಿಕ್ ಆಸಿಡ್‌ಗೆ ವಿನೆಗರ್ ಅಥವಾ ಸಿರ್ಕಾ, ಅಸಿಟೋನ್‌ಗಾಗಿ ರೋಸ್‌ವಾಟರ್ ಮತ್ತು ಹೈಡ್ರೋಜನ್ ಪೆರಾಕ್ಸೈಡ್‌ಗಾಗಿ ಶೆರ್ಬತ್‌ನಂತಹ ಕೋಡ್ ಪದಗಳನ್ನು ಬಳಸಿದ್ದಾರೆ

“ಭಾರತದೊಳಗೆ ಐಸಿಸ್ ಉಗ್ರಗಾಮಿ ಸಿದ್ಧಾಂತವನ್ನು ಪ್ರಚಾರ ಮಾಡಲು ಬದ್ಧವಾಗಿರುವ ವ್ಯಕ್ತಿಗಳ ಸಂಕೀರ್ಣ ಜಾಲವನ್ನು ತನಿಖೆಯು ಬಹಿರಂಗಪಡಿಸಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನಿಖಾ ಸಂಸ್ಥೆಯು “ಕಾಫಿರ್‌ಗಳ ಮೇಲಿನ ಪ್ರತೀಕಾರ” ಎಂಬ ಶೀರ್ಷಿಕೆಯ ದಾಖಲೆಗಳ ಸೆಟ್ ಅನ್ನು ವಶಪಡಿಸಿಕೊಂಡಿದೆ, ಅದು ಭಾರತದಲ್ಲಿ ಐಸಿಸ್ ಚಟುವಟಿಕೆಗಳನ್ನು ಮುಂದುವರಿಸಲು ಅವರ ಕಾರ್ಯತಂತ್ರವನ್ನು ವಿವರಿಸುತ್ತದೆ. “ಅವರು ಕಾಫಿರರು (ಮುಸ್ಲಿಮೇತರರು) ಮುಸ್ಲಿಮರ ಮೇಲೆ ನಡೆಸಿದ ದೌರ್ಜನ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಬಯಸಿದ್ದರು” ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಮದ್ಯ ನೀತಿ ಪ್ರಕರಣದಲ್ಲಿ ಎಎಪಿಯನ್ನು ಆರೋಪಿ ಮಾಡಬೇಕೇ? ಕಾನೂನು ಸಲಹೆ ಪಡೆಯಲಿದೆ ತನಿಖಾ ಸಂಸ್ಥೆ

ಆರೋಪಿಗಳು ಸ್ಫೋಟಗಳನ್ನು ನಡೆಸಲು ಸಂಭಾವ್ಯ ಗುರಿಗಳನ್ನು ಗುರುತಿಸಲು ಮಹಾರಾಷ್ಟ್ರ, ಕರ್ನಾಟಕ, ಗೋವಾ, ತೆಲಂಗಾಣ ಮತ್ತು ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಗೆ ಪ್ರಯಾಣಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ವಿದೇಶಿ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಎನ್‌ಐಎ ಆರೋಪಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ