ತೆಲಂಗಾಣ: ವೇದಿಕೆಯಲ್ಲಿ ಮಾದಿಗ ನಾಯಕನಿಗೆ ಸಾಂತ್ವನ ಹೇಳಿದ ಪ್ರಧಾನಿ ಮೋದಿ
ತೆಲಂಗಾಣ ಇತಿಹಾಸದಲ್ಲಿ ನಿರ್ಣಾಯಕ ಘಟ್ಟದಲ್ಲಿದೆ. ಕಳೆದ 10 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರ್ಕಾರ ಜನರ ಕನಸುಗಳನ್ನು ನನಸು ಮಾಡಲು ಸಾಧ್ಯವಾಗಿಲ್ಲ. ತೆಲಂಗಾಣ ಸರ್ಕಾರ ಮಾದಿಗ ಸಮುದಾಯಕ್ಕೆ ದ್ರೋಹ ಬಗೆದಿದೆ. ತೆಲಂಗಾಣ ರಚನೆಗೆ ಕಾಂಗ್ರೆಸ್ ಹೇಗೆ ಅಡ್ಡಗಾಲು ಹಾಕಿತು ಎಂಬುದನ್ನು ಯಾರು ಮರೆಯಲು ಸಾಧ್ಯ? ಆದರೆ ಅನೇಕ ತ್ಯಾಗಗಳ ನಂತರ ತೆಲಂಗಾಣ ರಚನೆಯಾದಾಗ, ಆ ಬಿಆರ್‌ಎಸ್ ನಾಯಕ ಕಾಂಗ್ರೆಸ್‌ಗೆ ಧನ್ಯವಾದ ಹೇಳಲು ಹೋದರು ಎಂದು ಮೋದಿ ಹೇಳಿದ್ದಾರೆ.
ಸಿಕಂದರಾಬಾದ್ ನವೆಂಬರ್ 11: ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ಒಬಿಸಿ ಮುಖ್ಯಮಂತ್ರಿಯಾಗುವ ಬಿಜೆಪಿಯ (BJP) ಭರವಸೆಗೆ ಅನುಗುಣವಾಗಿ ದಲಿತ ಸಮುದಾಯವನ್ನು ಮುಖ್ಯವಾಹಿನಿಗೆ ಕರೆತರುವ ಉದ್ದೇಶದಿಂದ ತೆಲಂಗಾಣದ (Telangana) ಸಿಕಂದರಾಬಾದ್‌ನಲ್ಲಿ ನಡೆದ ಮಾದಿಗ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಭಾಗವಹಿಸಿದ್ದರು. ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡ ಮಂದ ಕೃಷ್ಣ ಮಾದಿಗ ಅವರು ಪ್ರಧಾನಿ ಮೋದಿಯವರೊಂದಿಗೆ ವೇದಿಕೆ ಹಂಚಿಕೊಂಡು ಅಳಲು ತೋಡಿಕೊಂಡರು. ಯಾವುದೇ ಪ್ರಧಾನಿ ಮಾದಿಗರ ಸಮಾವೇಶದಲ್ಲಿ ಭಾಗವಹಿಸಿಲ್ಲ ಎಂದು ಮಂದ ಕೃಷ್ಣ ಮಾದಿಗ ಅವರು ಪ್ರಧಾನಿ ಮೋದಿ ಕೈಮುಗಿದು ಎದ್ದು ನಿಂತರು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಾನು ನಿಮ್ಮಿಂದ ಏನನ್ನೂ ಕೇಳಲು ಇಲ್ಲಿಗೆ ಬಂದಿಲ್ಲ, ಸ್ವಾತಂತ್ರ್ಯದ ನಂತರ ನಿಮ್ಮನ್ನು ವಂಚಿಸಿದ ಎಲ್ಲಾ ರಾಜಕೀಯ ಪಕ್ಷಗಳ ಕ್ಷಮೆ ಕೇಳಲು ಇಲ್ಲಿಗೆ ಬಂದಿದ್ದೇನೆ” ಎಂದು ಹೇಳಿದರು.
ಮಾದಿಗ ಮೀಸಲಾತಿ ಹೋರಾಟ ಸಮಿತಿಯು ಮೂರು ದಶಕಗಳಿಂದ ಪರಿಶಿಷ್ಟ ಜಾತಿಗೆ ಮೀಸಲು ಉಪವರ್ಗೀಕರಣಕ್ಕೆ ಒತ್ತಾಯಿಸುತ್ತಿದೆ. ಮಾದಿಗರು ತೆಲಂಗಾಣದಲ್ಲಿ ಪರಿಶಿಷ್ಟ ಜಾತಿಗಳ ದೊಡ್ಡ ಘಟಕಗಳಲ್ಲಿ ಒಬ್ಬರು. ಮಾದಿಗರು ದಲಿತ ಸಮುದಾಯವಾಗಿದ್ದು, ಇವರು ಚರ್ಮದ ಕೆಲಸ ಮತ್ತು ಮಲಹೊರುವ ಕೆಲಸ ಮಾಡುತ್ತಾರೆ. “ನನ್ನ ಸಹೋದರ ಕೃಷ್ಣ, ನಿಮ್ಮ ಹೋರಾಟದಲ್ಲಿ ನಿಮಗೆ ಅನೇಕ ಸಹಾಯಕರು ಸಿಕ್ಕಿದ್ದಾರೆ. ಇಂದಿನಿಂದ ನಿಮಗೆ ಇನ್ನೂ ಒಬ್ಬರು ಇದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದರು.
Thank you Hyderabad.
Today’s public meeting will remain etched in my memory. The affection from my Dalit sisters and brothers, my Madiga sisters and brothers is tremendous.
I salute my brother Manda Krishna Madiga for his efforts towards empowering people.
Some glimpses… pic.twitter.com/OLrXlkIOEK
— Narendra Modi (@narendramodi) November 11, 2023
“ನಿಮಗೆ ನೀಡಿದ ಭರವಸೆಗಳನ್ನು ಈಡೇರಸದೇ ಇದ್ದ ಎಲ್ಲಾ ರಾಜಕೀಯ ಪಕ್ಷಗಳು, ಎಲ್ಲಾ ರಾಜಕೀಯ ನಾಯಕರ ಕ್ಷಮೆ ಕೇಳಲು ನಾನು ಇಂದು ಇಲ್ಲಿದ್ದೇನೆ” ಎಂದು ಪ್ರಧಾನಿ ಮೋದಿ ಹೇಳಿದರು.
ತೆಲಂಗಾಣ ಇತಿಹಾಸದಲ್ಲಿ ನಿರ್ಣಾಯಕ ಘಟ್ಟದಲ್ಲಿದೆ. ಕಳೆದ 10 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರ್ಕಾರ ಜನರ ಕನಸುಗಳನ್ನು ನನಸು ಮಾಡಲು ಸಾಧ್ಯವಾಗಿಲ್ಲ. ತೆಲಂಗಾಣ ಸರ್ಕಾರ ಮಾದಿಗ ಸಮುದಾಯಕ್ಕೆ ದ್ರೋಹ ಬಗೆದಿದೆ. ತೆಲಂಗಾಣ ರಚನೆಗೆ ಕಾಂಗ್ರೆಸ್ ಹೇಗೆ ಅಡ್ಡಗಾಲು ಹಾಕಿತು ಎಂಬುದನ್ನು ಯಾರು ಮರೆಯಲು ಸಾಧ್ಯ? ಆದರೆ ಅನೇಕ ತ್ಯಾಗಗಳ ನಂತರ ತೆಲಂಗಾಣ ರಚನೆಯಾದಾಗ, ಆ ಬಿಆರ್‌ಎಸ್ ನಾಯಕ ಕಾಂಗ್ರೆಸ್‌ಗೆ ಧನ್ಯವಾದ ಹೇಳಲು ಹೋದರು, ಜನರೇ. ತೆಲಂಗಾಣ ಚಳವಳಿಯ ಸಂದರ್ಭದಲ್ಲಿ ದಲಿತರೊಬ್ಬರು ಸಿಎಂ ಆಗುತ್ತಾರೆ ಎಂದು ಭರವಸೆ ನೀಡಿದ್ದರು. ಆದರೆ ನಂತರ ಅವರೇ ಮುಖ್ಯಮಂತ್ರಿ ಸ್ಥಾನಕ್ಕೇರಿದರುಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ: PM Narendra Modi: ಇದೇ ತಿಂಗಳ 25, 26, 27 ರಂದು ತೆಲಂಗಾಣದಲ್ಲಿ ಮೋದಿ ಚುನಾವಣಾ ಪ್ರಚಾರ
ಸರ್ಕಾರವು ತೆಲಂಗಾಣದ ಜನರಿಗೆ ನೀರಾವರಿ ಯೋಜನೆಗಳ ಬದಲಿಗೆ ನೀರಾವರಿ ಹಗರಣವನ್ನು ನೀಡಿದೆ ಎಂದು ಮೋದಿ ಟೀಕೆ ಮಾಡಿದ್ದಾರೆ
“ಕಾಂಗ್ರೆಸ್ ಮತ್ತು ಬಿಆರ್‌ಎಸ್ ಎರಡರಲ್ಲೂ ಎಚ್ಚರದಿಂದಿರಿ. ಇಬ್ಬರೂ ದಲಿತ ವಿರೋಧಿಗಳು. ಇವರು ಹೊಸ ಸಂವಿಧಾನಕ್ಕೆ ಒತ್ತಾಯಿಸಿ ಬಿಆರ್‌ಎಸ್ ಅಂಬೇಡ್ಕರ್ ಅವರನ್ನು ಅವಮಾನಿಸಿದರು. ಕಾಂಗ್ರೆಸ್ ಕೂಡ ಅಂಬೇಡ್ಕರ್ ಅವರನ್ನು ವಿರೋಧಿಸಿತು ಮತ್ತು ಎರಡು ಬಾರಿ ಚುನಾವಣೆಯಲ್ಲಿ ಗೆಲ್ಲಲು ಅವಕಾಶ ನೀಡಲಿಲ್ಲ. ಕಾಂಗ್ರೆಸ್ ನಿಂದಾಗಿ ಅಂಬೇಡ್ಕರ್ ಅವರಿಗೆ ಭಾರತ ರತ್ನ ಸಿಗಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ