ಬ್ಯಾಂಕ್​ಗಳ ವಿಲೀನ! ಗ್ರಾಹಕರು ಏನು ಮಾಡಬೇಕು?

|

Updated on: Sep 06, 2019 | 2:41 PM

ಮೊದಲ ಪ್ರಯತ್ನದಲ್ಲಿ ಎಸ್​ಬಿಐ ಬ್ಯಾಂಕ್​ಗಳ ವಿಲೀನದ ಬಳಿಕ ಇದೀಗ ಕೇಂದ್ರ ಸರ್ಕಾರ 3ನೇ ಸುತ್ತಿನ ಬೃಹತ್​ ಬ್ಯಾಂಕ್‌ಗಳ ವಿಲೀನವನ್ನು ಘೋಷಿಸಿದೆ. ಹೀಗಾಗಿ ಇನ್ಮುಂದೆ 27 ಬ್ಯಾಂಕ್​ಗಳ ಜಾಗದಲ್ಲಿ ಕೇವಲ 12 ಬ್ಯಾಂಕ್​ಗಳು ಮಾತ್ರ ಕಾರ್ಯ ನಿರ್ವಹಿಸಲಿವೆ. ಸಿಂಡಿಕೇಟ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳ್ಳಲಿದ್ದು, ಕಾರ್ಪೊರೇಷನ್‌ ಬ್ಯಾಂಕ್‌ ಮತ್ತು ಆಂಧ್ರಾ ಬ್ಯಾಂಕ್​ಗಳು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ವಿಲೀನಗೊಳ್ಳಲಿವೆ. ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಮತ್ತು ಯುನೈಟೆಡ್‌ ಬ್ಯಾಂಕ್‌ಗಳು ಪಂಜಾಬ್‌ ನ್ಯಾಷನಲ್​ ಬ್ಯಾಂಕ್​ನೊಂದಿಗೆ ಸೇರ್ಪಡೆಯಾದ್ರೆ, ಇಂಡಿಯನ್‌ ಬ್ಯಾಂಕ್​ನೊಂದಿಗೆ ಅಲಹಾಬಾದ್‌ […]

ಬ್ಯಾಂಕ್​ಗಳ ವಿಲೀನ! ಗ್ರಾಹಕರು ಏನು ಮಾಡಬೇಕು?
Follow us on

ಮೊದಲ ಪ್ರಯತ್ನದಲ್ಲಿ ಎಸ್​ಬಿಐ ಬ್ಯಾಂಕ್​ಗಳ ವಿಲೀನದ ಬಳಿಕ ಇದೀಗ ಕೇಂದ್ರ ಸರ್ಕಾರ 3ನೇ ಸುತ್ತಿನ ಬೃಹತ್​ ಬ್ಯಾಂಕ್‌ಗಳ ವಿಲೀನವನ್ನು ಘೋಷಿಸಿದೆ. ಹೀಗಾಗಿ ಇನ್ಮುಂದೆ 27 ಬ್ಯಾಂಕ್​ಗಳ ಜಾಗದಲ್ಲಿ ಕೇವಲ 12 ಬ್ಯಾಂಕ್​ಗಳು ಮಾತ್ರ ಕಾರ್ಯ ನಿರ್ವಹಿಸಲಿವೆ.

ಸಿಂಡಿಕೇಟ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳ್ಳಲಿದ್ದು, ಕಾರ್ಪೊರೇಷನ್‌ ಬ್ಯಾಂಕ್‌ ಮತ್ತು ಆಂಧ್ರಾ ಬ್ಯಾಂಕ್​ಗಳು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ವಿಲೀನಗೊಳ್ಳಲಿವೆ. ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಮತ್ತು ಯುನೈಟೆಡ್‌ ಬ್ಯಾಂಕ್‌ಗಳು ಪಂಜಾಬ್‌ ನ್ಯಾಷನಲ್​ ಬ್ಯಾಂಕ್​ನೊಂದಿಗೆ ಸೇರ್ಪಡೆಯಾದ್ರೆ, ಇಂಡಿಯನ್‌ ಬ್ಯಾಂಕ್​ನೊಂದಿಗೆ ಅಲಹಾಬಾದ್‌ ಬ್ಯಾಂಕ್​ ವಿಲೀನಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ.

ಈ ಹಿಂದೆ ಕೇಂದ್ರ ಸರ್ಕಾರ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್‌ ಅನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಜೊತೆ ವಿಲೀನ ಮಾಡಿತ್ತು. 2ನೇ ಸುತ್ತಿನಲ್ಲಿ ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ನ್ನು ಬ್ಯಾಂಕ್‌ ಆಫ್‌ ಬರೋಡದಲ್ಲಿ ವಿಲೀನಗೊಳಿಸಿತ್ತು. ಇದೀಗ 3ನೇ ಸುತ್ತಿನಲ್ಲಿ ಹಲವು ಬ್ಯಾಂಕ್​ಗಳ ವಿಲೀನವನ್ನು ಕೇಂದ್ರ ಘೋಷಣೆ ಮಾಡಿದೆ.

ಬ್ಯಾಂಕ್​ಗಳ ವಿಲೀನದಿಂದ ಗ್ರಾಹಕರು ವಹಿಸಬೇಕಾದ ಮುಂಜಾಗ್ರತೆ ಕ್ರಮಗಳು

*  ಬ್ಯಾಂಕ್​ಗಳ ವಿಲೀನವಾದಾಗ ಗ್ರಾಹಕರ ಅಕೌಂಟ್​ ನಂಬರ್ ಬದಲಾವಣೆಯಾಗುವ ಸಾಧ್ಯತೆ ಇರುತ್ತೆ. ಈ ಕುರಿತು ಬ್ಯಾಂಕ್​ಗಳಿಗೆ ತೆರಳಿ ಗ್ರಾಹಕರು ಮಾಹಿತಿ ಪಡೆಯಬೇಕು.

*  ಸಾಮಾನ್ಯವಾಗಿ ಬ್ಯಾಂಕ್​ನ ಬ್ರಾಂಚ್​ಗಳ ಐಎಫ್​ಎಸ್​ಸಿ ಕೋಡ್ ಸಹ ಬದಲಾವಣೆಯಾಗುವ ಸಾಧ್ಯತೆಯಿರುತ್ತೆ.

*  ನಿಮ್ಮ ಚೆಕ್​ ಪುಸ್ತಕವನ್ನು ಯಾವ ಬ್ಯಾಂಕ್​ ಜೊತೆ ವಿಲೀನವಾಗಲಿದೆಯೋ ಆ ಬ್ಯಾಂಕ್​ನ ಚೆಕ್​ ಪುಸ್ತಕ ಬದಲಾಯಿಸಬೇಕು.

*  ಹಳೆಯ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳನ್ನು ಹೊಸ ಬ್ಯಾಂಕ್‌ನ ಕಾರ್ಡ್‌ಗಳೊಂದಿಗೆ ಬದಲಾವಣೆ ಮಾಡಿಕೊಳ್ಳಬೇಕು.

*  ಫಿಕ್ಸೆಡ್‌ ಡೆಪಾಸಿಟ್​ಗಳನ್ನು ಇಟ್ಟಿದ್ದರೆ ಇವನ್ನು ಹೊಸ ಬ್ಯಾಂಕ್‌ಗೆ ಬದಲಾಯಿಸಬೇಕಾಗುತ್ತದೆ.

Published On - 1:21 pm, Sat, 31 August 19