ಭಾರತಕ್ಕೆ ಸಮುದ್ರ ಮಾರ್ಗವಾಗಿ ಎಂಟ್ರಿ ಕೊಡಲು ಪಾಕ್ ಕಮಾಂಡೋಗಳ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಗುಜರಾತ್ ನ ಕಛ್ ಕೊಲ್ಲಿಗೆ ಪಾಕ್ ಕಮಾಂಡೋಗಳು ಪ್ರವೇಶಿಸೋ ಸಾಧ್ಯತೆ ಇದೆ ಎಂದು ನೌಕಾಪಡೆಯಿಂದ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಈ ಸಂಬಂಧ ಗುಜರಾತ್ ನ ಹರಮಿ ನಲಾ ಪ್ರದೇಶದಲ್ಲಿ ಪಾಕ್ ಗೆ ಸಂಬಂಧಿಸಿದ 2 ದೋಣಿಗಳನ್ನೂ ಸಹ ಬಿಎಸ್ಎಫ್ ಪತ್ತೆ ಹಚ್ಚಿದೆ.
ಈ ಸಂಬಂಧ ದೇಶಾದ್ಯಂತ ಬಂದರು ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಹೆಲಿಕಾಪ್ಟರ್, ಬೋಟ್ ನಲ್ಲಿ ಕರಾವಳಿ ಪ್ರದೇಶದಲ್ಲಿ ನೌಕಾಪಡೆ ಗಸ್ತು ತಿರುಗುತ್ತಿದೆ. ಕೋಲ್ಕತ್ತಾ, ಗುಜರಾತ್, ಮುಂಬೈ, ಕೊಚ್ಚಿನ್
ಚೆನ್ನೈ ಸೇರಿದಂತೆ ಕರಾವಳಿ ತೀರದ ನಗರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಮಾಹಿತಿ ನೀಡಿ ಎಂದು ಸಾರ್ವಜನಿಕರು, ಮೀನುಗಾರರಿಗೆ ನೌಕಾಪಡೆ ಸೂಚನೆ ನೀಡಿದೆ.
ಜಮ್ಮು-ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ರದ್ದುಗೊಳಿಸುತ್ತಿದ್ದಂತೆ ಪಾಪಿ ಪಾಕಿಸ್ತಾನ ಕಾಲು ಕೆರೆದು ಭಾರತದ ಜೊತೆ ಯುದ್ಧಕ್ಕೆ ತಯಾರಾಗುತ್ತಿದೆ. ಈ ಸಂಬಂಧ ಪಾಕ್ ನ ಸಚಿವರೇ ಅಕ್ಟೋಬರ್ ತಿಂಗಳಲ್ಲಿ ಭಾರತದ ಜೊತೆ ಯುದ್ಧ ಮಾಡಲಾಗುತ್ತೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಪಾಕಿಸ್ತಾನದ ಸ್ಥಿತಿ ಕೆಳಗೆ ಬಿದ್ರೂ ಮೀಸೆ ಮಣ್ಣಾಗಿಲ್ಲ ಎಂಬಂತಾಗಿದೆ.
Published On - 4:20 pm, Fri, 30 August 19