ಕೇರಳ: ದೇವಾಲಯದ ಆವರಣದಲ್ಲಿ ಆರ್‌ಎಸ್‌ಎಸ್ ಶಾಖೆಗೆ ಅವಕಾಶ ನೀಡಬಾರದು: ತಿರುವಾಂಕೂರು ದೇವಸ್ವಂ ಸುತ್ತೋಲೆ

|

Updated on: May 23, 2023 | 8:17 PM

ದೇವಾಲಯದ ಸಂಕೀರ್ಣಗಳಲ್ಲಿ ಶಸ್ತ್ರಾಸ್ತ್ರ ತರಬೇತಿಯನ್ನು ನಿರ್ಬಂಧಿಸಲು ಟಿಬಿಡಿ ಕ್ರಮಗಳನ್ನು ಕೈಗೊಂಡಿರುವುದು ಇದೇ ಮೊದಲಲ್ಲ. 2016 ರಲ್ಲಿ, ಮಂಡಳಿಯು ಆರ್‌ಎಸ್‌ಎಸ್ ನೀಡುವ ಎಲ್ಲಾ ರೀತಿಯ ಶಸ್ತ್ರಾಸ್ತ್ರ ತರಬೇತಿಯನ್ನು ನಿಷೇಧಿಸುವ ಸುತ್ತೋಲೆಯನ್ನು ಹೊರಡಿಸಿತ್ತು

ಕೇರಳ: ದೇವಾಲಯದ ಆವರಣದಲ್ಲಿ ಆರ್‌ಎಸ್‌ಎಸ್ ಶಾಖೆಗೆ ಅವಕಾಶ ನೀಡಬಾರದು: ತಿರುವಾಂಕೂರು ದೇವಸ್ವಂ ಸುತ್ತೋಲೆ
ಆರ್​​ಎಸ್​​ಎಸ್ ಶಾಖೆ (ಸಂಗ್ರಹ ಚಿತ್ರ)
Follow us on

ದೇವಾಲಯದ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಆಯೋಜಿಸುವ ಸಾಮೂಹಿಕ ಕಸರತ್ತು ಮತ್ತು ಇತರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ತಿರುವಾಂಕೂರು ದೇವಸ್ವಂ ಮಂಡಳಿ (Travancore Devaswom Board -TBD) ತನ್ನ ಅಧೀನದಲ್ಲಿರುವ ಎಲ್ಲಾ ದೇವಾಲಯಗಳಿಗೆ ಹೊಸ ಸುತ್ತೋಲೆ ಹೊರಡಿಸಿದೆ. ಟಿಬಿಡಿ ದಕ್ಷಿಣ ಭಾರತದಲ್ಲಿ ಸುಮಾರು 1,200 ದೇವಾಲಯಗಳನ್ನು ನಿರ್ವಹಿಸುವ ಸಂಸ್ಥೆಯಾಗಿದೆ.  ಆರ್‌ಎಸ್‌ಎಸ್ ‘ಶಾಖೆ’ ಅಥವಾ ಕೇರಳದಲ್ಲಿ (Kerala)  ತನ್ನ ನಿರ್ವಹಣೆಯಲ್ಲಿರುವ ದೇವಾಲಯಗಳಲ್ಲಿ ಸಾಮೂಹಿಕ ಕಸರತ್ತುಗಳ ಮೇಲೆ ತನ್ನ ನಿಷೇಧವನ್ನು ಪುನರುಚ್ಚರಿಸಿದ ಟಿಬಿಡಿ ದೇವಸ್ಥಾನಗಳು ತನ್ನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಳಿಕೊಂಡಿದೆ.

ದೇವಾಲಯದ ಸಂಕೀರ್ಣಗಳಲ್ಲಿ ಶಸ್ತ್ರಾಸ್ತ್ರ ತರಬೇತಿಯನ್ನು ನಿರ್ಬಂಧಿಸಲು ಟಿಬಿಡಿ ಕ್ರಮಗಳನ್ನು ಕೈಗೊಂಡಿರುವುದು ಇದೇ ಮೊದಲಲ್ಲ. 2016 ರಲ್ಲಿ, ಮಂಡಳಿಯು ಆರ್‌ಎಸ್‌ಎಸ್ ನೀಡುವ ಎಲ್ಲಾ ರೀತಿಯ ಶಸ್ತ್ರಾಸ್ತ್ರ ತರಬೇತಿಯನ್ನು ನಿಷೇಧಿಸುವ ಸುತ್ತೋಲೆಯನ್ನು ಹೊರಡಿಸಿತ್ತು.

ತಿರುವಾಂಕೂರು ದೇವಸ್ವಂ ಮಂಡಳಿಯು ಮಾರ್ಚ್ 30, 2021 ರಂದು ಆದೇಶವನ್ನು ಮತ್ತೊಮ್ಮೆ ಹೊರಡಿಸಿದ್ದು, ದೇವಾಲಯದ ಆವರಣವನ್ನು ದೇವಾಲಯದ ಆಚರಣೆಗಳು ಮತ್ತು ಉತ್ಸವಗಳಿಗೆ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಬಾರದು ಎಂದು ಹೇಳಿದೆ.

ಟಿಡಿಬಿಯ ಹೊಸ ಸುತ್ತೋಲೆಯಲ್ಲಿ ನಿಷೇಧವನ್ನು ಅನುಸರಿಸಲು ವಿಫಲರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಹಲವು ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್‌ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ, ಕಸರತ್ತು ನಡೆಸುತ್ತಿವೆ ಮತ್ತು ಇಂತಹ ಚಟುವಟಿಕೆಗಳು ನಡೆಯುತ್ತಿವೆ. ಆದ್ದರಿಂದಲೇ ಇಂತಹ ಸುತ್ತೋಲೆ ಹೊರಡಿಸಲಾಗಿದೆ. ದೇವಾಲಯಗಳಲ್ಲಿ ಭಕ್ತರಿಗೆ, ಭಕ್ತರ ಪೂಜೆಗೆ ಯಾವುದೇ ತೊಂದರೆಯಾಗಬಾರದು. ದೇವಸ್ವಂ ಮಂಡಳಿಯ ನಿಲುವು ಅಧಿಕಾರಿಗಳ ಗಮನಕ್ಕೆ ತರಲು ಮತ್ತೊಮ್ಮೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಟಿಡಿಬಿ ಅಧ್ಯಕ್ಷ ಅನಂತಗೋಪನ್ ಹೇಳಿದ್ದಾರೆ.

ದೇವಸ್ಥಾನಗಳಲ್ಲಿ  ಕೆಲವು ರಾಜಕೀಯ ನಾಯಕರ ಫೋಟೋಗಳನ್ನು ಪ್ರದರ್ಶಿಸಲಾಗಿದೆ. ಇಂತಹ ಕ್ರಮಗಳು ದೇವಾಲಯಗಳ ಪಾವಿತ್ರ್ಯವ ನ್ನು ಹಾಳುಮಾಡುತ್ತದೆ. ಅಧಿಕಾರಿಗಳು ಶಾಂತಿಯುತವಾಗಿ ಸಂಬಂಧಪಟ್ಟ ಜನರೊಂದಿಗೆ ಸಭೆಗಳನ್ನು ಆಯೋಜಿಸುತ್ತಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: UPSC 2022 toppers from Karnataka: KSRTC ಬಸ್ ಚಾಲಕನ ಮಗ ಸೇರಿದಂತೆ 25 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ

ಏತನ್ಮಧ್ಯೆ ಸುತ್ತೋಲೆ ಹೊರಡಿಸಿರುವುದರ ಹಿಂದೆ ಯಾವುದೇ ರಾಜಕೀಯ ಒತ್ತಡವಿಲ್ಲ ಎಂದು ಅನಂತಗೋಪನ್ ಸ್ಪಷ್ಟಪಡಿಸಿದ್ದಾರೆ.
ಜನವರಿಯಿಂದ, ಹಬ್ಬ ಹರಿದಿನಗಳಲ್ಲಿ, ಇದಕ್ಕೆ ಸಂಬಂಧಿಸಿದ ಕೆಲವು ವಿಷಯಗಳು ವರದಿಯಾಗಿವೆ. ಕನಿಷ್ಠ ಕೆಲವು ಸ್ಥಳಗಳಲ್ಲಿ ಈ ಸಂಸ್ಥೆಗಳು ದೇವಾಲಯದ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಿದ ಉದಾಹರಣೆಗಳಿವೆ ಎಂದು ಟಿಡಿಬಿ ಅಧ್ಯಕ್ಷರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ