ದೆಹಲಿ ಸೆಪ್ಟೆಂಬರ್ 16: ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi Birthday) ಜನ್ಮದಿನವಾದ ಸೆಪ್ಟೆಂಬರ್ 17 ರಂದು (ಭಾನುವಾರ) ದೇಶದಾದ್ಯಂತ 70 ಸ್ಥಳಗಳಲ್ಲಿ ವಿಶ್ವಕರ್ಮ ಯೋಜನೆಯನ್ನು (Vishwakarma yojana) ಪ್ರಾರಂಭಿಸಲಾಗುತ್ತದೆ. ಈ ಯೋಜನೆಯು ಸಾಂಪ್ರದಾಯಿಕ ಕರಕುಶಲತೆಯಲ್ಲಿ ನುರಿತ ವ್ಯಕ್ತಿಗಳಿಗೆ ಪ್ರಯೋಜನವನ್ನು ನೀಡುವ ಉದ್ದೇಶವನ್ನು ಹೊಂದಿದ್ದು, ಈ ಉಪಕ್ರಮವನ್ನು ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನದಂದು ಪ್ರಧಾನಿ (PM Modi) ಘೋಷಿಸಿದ್ದರು. ತಳಮಟ್ಟದಲ್ಲಿರುವ ಕಾರ್ಮಿಕ ವರ್ಗದ ಕಲ್ಯಾಣವನ್ನು ಗುರಿಯಾಗಿರಿಸಿಕೊಂಡರುವ ಈ ಯೋಜನೆಗೆ ಮುಂದಿನ ಐದು ವರ್ಷಗಳಲ್ಲಿ 13,000 ಕೋಟಿ ವೆಚ್ಚವಾಗಲಿದೆ.ಈ ಯೋಜನೆಯಡಿ, ಚಮ್ಮಾರರು, ಬಟ್ಟೆ ಒಗೆಯುವವರು, ಬಡಗಿಗಳು ಮತ್ತು ಅಂತಹ ಇತರ ಕಾರ್ಮಿಕರಿಗೆ ಮೊದಲ ಹಂತದಲ್ಲಿ ಐದು ಶೇಕಡಾ ಬಡ್ಡಿದರದಲ್ಲಿ ಒಂದು ಲಕ್ಷ ರೂಪಾಯಿ ಸಾಲ ಮತ್ತು ಎರಡನೇ ಹಂತದಲ್ಲಿ ಎರಡು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ವಿಶ್ವಕರ್ಮ ಯೋಜನೆಯು ಕುಶಲಕರ್ಮಿಗಳು ಮತ್ತು ಕಾರ್ಮಿಕರಿಗೆ ತರಬೇತಿಯನ್ನು ನೀಡುತ್ತದೆ, ಜೊತೆಗೆ ಪ್ರಶಿಕ್ಷಣಾರ್ಥಿಗಳಿಗೆ ದಿನಕ್ಕೆ 500 ರೂ ನೀಡಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರ 73ನೇ ಹುಟ್ಟುಹಬ್ಬವನ್ನು ಹಲವು ರೀತಿಯಲ್ಲಿ ಆಚರಿಸಲು ಬಿಜೆಪಿ ಮತ್ತು ಸರ್ಕಾರ ಯೋಜನೆ ರೂಪಿಸಿದೆ. ಪಿಟಿಐ ವರದಿ ಪ್ರಕಾರ ತ್ರಿಪುರಾದ ಬಿಜೆಪಿ ಘಟಕವು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಪ್ರಚಾರವನ್ನು ತೀವ್ರಗೊಳಿಸಲಿದೆ. ಪ್ರಧಾನಿಯವರ ಜನ್ಮದಿನದ ಆಚರಣೆಗೆ ‘ನಮೋ ವಿಕಾಸ್ ಉತ್ಸವ’ ಎಂದು ಹೆಸರಿಸಲಾಗಿದ್ದು, ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಬಿಜೆಪಿ ಶಾಸಕ ಭಗಬನ್ ದಾಸ್ ಹೇಳಿದ್ದಾರೆ.
ಸೆಪ್ಟೆಂಬರ್ 17 ರಂದು ಕುಮಾರ್‌ಘಾಟ್ ಪಿಡಬ್ಲ್ಯೂಡಿ ಮೈದಾನದಲ್ಲಿ ಮುಖ್ಯಮಂತ್ರಿ ಮಾಣಿಕ್ ಸಹಾ ಅವರ ಸಂಪುಟ ಸಹೋದ್ಯೋಗಿಗಳು ಮತ್ತು ದೆಹಲಿ ಮತ್ತು ತ್ರಿಪುರಾದಿಂದ ಪಕ್ಷದ ಹಿರಿಯ ನಾಯಕರು ಭಾಗವಹಿಸುವ ಯೋಗ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗುತ್ತದೆ.
‘ಆಯುಷ್ಮಾನ್ ಭವ’ ಅಭಿಯಾನವನ್ನು ಸೆಪ್ಟೆಂಬರ್ 13 ರಂದು ಪ್ರಾರಂಭಿಸಲಾಗಿದ್ದರೂ, ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಪ್ರಾರಂಭವಾಗುವ ‘ಸೇವಾ ಪಾಕ್ಷಿಕ’ದಲ್ಲಿ ಇದನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.‘ಆಯುಷ್ಮಾನ್ ಭವ’ ಅಭಿಯಾನಕ್ಕೆ ಸೆ. 13ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಿಬಿರಗಳನ್ನು ನಡೆಸಿ ಸುಮಾರು 60 ಸಾವಿರ ಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ವಿತರಿಸಲಾಗುವುದು. ಗಾಂಧಿ ಜಯಂತಿ ಅಂದರೆ ಅಕ್ಟೋಬರ್ 2ರಂದು ಈ ಪಾಕ್ಷಿಕ ಮುಕ್ತಾಯವಾಗಲಿದ್ದು, ಅಂದಿನವರೆಗೆ ಆರೋಗ್ಯ ಜಾಗೃತಿಗಾಗಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಯುಷ್ಮಾನ್ ಆಪ್ಕೆ ದ್ವಾರ್ 3.0ರ ಅಡಿಯಲ್ಲಿ ಬರುವ ‘ಆಯುಷ್ಮಾನ್ ಭವ’ ಅಭಿಯಾನನವು ಬಾಕಿ ಉಳಿದಿರುವ ಎಲ್ಲಾ ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್‌ಗಳ ರಚನೆ ಮತ್ತು ವಿತರಣೆಯ ಗುರಿಯನ್ನು ಹೊಂದಿದೆ.
ಪ್ರತಿ ಗ್ರಾಮ, ವಾರ್ಡ್‌ಮಟ್ಟದ ಸಭೆಗಳಲ್ಲಿ ಆರೋಗ್ಯ ಸೇವೆ ಮತ್ತು ಆರೋಗ್ಯ ರಕ್ಷಣೆಯ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವವುಗಳಾಗಿವೆ ಆಯುಷ್ಮಾನ್ ಮೇಳ. ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ಪ್ರತಿವಾರವೂ ನಡೆಯುವ ಆರೋಗ್ಯ ಮೇಳಗಳ ಭಾಗವಾಗಿ ಆಯುಷ್ಮಾನ್ ಮೇಳವನ್ನು ನಡೆಸಲಾಗುವುದು. ಸೇವಾ ಪಾಕ್ಷಿಕದ ದ ಸಮಯದಲ್ಲಿ ಆನ್‌ಲೈನ್ ಅಂಗದಾನ ಪ್ರತಿಜ್ಞೆ ನೋಂದಣಿಯನ್ನು ಪ್ರಾರಂಭಿಸಲಾಗುವುದು . ಬಿಜೆಪಿಯು ಪ್ರಧಾನಿ ಮೋದಿ ಅವರ ಜನ್ಮದಿನದಿಂದ ಅಂದರೆ ಸೆ. 17ರಿಂದ ಅ. 2ರವರೆಗೆ ‘ಸೇವಾ ಪಾಕ್ಷಿಕ’ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಕಳೆದ ವರ್ಷ ಪ್ರಧಾನಿ ಮೋದಿಯವರ ಜನ್ಮದಿನದಂದು ಸರ್ಕಾರ ಕ್ಷಯರೋಗ ಸಮಸ್ಯೆಯ ಬಗ್ಗೆ ಕೆಲಸ ಮಾಡಿದೆ ಎಂದು ಮಾಂಡವಿಯಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿಯ ಗುಜರಾತ್ ರಾಜ್ಯ ಘಟಕ 30,000 ಶಾಲಾ ಬಾಲಕಿಯರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲಿದೆ. ಪ್ರಧಾನಿ ಮೋದಿಯವರ ಜನ್ಮದಿನದ ರಾಜ್ಯಾದ್ಯಂತ ಆಚರಣೆಯ ಅಂಗವಾಗಿ ಬಿಜೆಪಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಗುಜರಾತ್ ಬಿಜೆಪಿ ಮುಖ್ಯಸ್ಥ ಸಿಆರ್ ಪಾಟೀಲ್ ಹೇಳಿದ್ದಾರೆ. ನಾವು ನವಸಾರಿ ಜಿಲ್ಲೆಯಲ್ಲಿ 30,000 ಶಾಲಾ ಬಾಲಕಿಯರನ್ನು ಗುರುತಿಸಿದ್ದೇವೆ. ಶುಕ್ರವಾರದಿಂದ ನಾವು ಅವರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯುತ್ತೇವೆ.ಆದ್ದರಿಂದ ಅವರು ಪ್ರಧಾನ ಮಂತ್ರಿ ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಇದಲ್ಲದೇ ಗುಜರಾತ್‌ನ ಎಲ್ಲಾ ಜಿಲ್ಲೆಗಳಲ್ಲಿ ಬಿಜೆಪಿ ಯುವ ಮೋರ್ಚಾ ರಕ್ತದಾನ ಶಿಬಿರಗಳನ್ನು ಆಯೋಜಿಸಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 73 ನೇ ಹುಟ್ಟುಹಬ್ಬದ ಗೌರವಾರ್ಥವಾಗಿ ನರೇಂದ್ರ ಮೋದಿ ಅಧ್ಯಯನ ಕೇಂದ್ರ (CNMS), ನವದೆಹಲಿಯು ಭವ್ಯವಾದ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಆಯೋಜಿಸಲು ಸಿದ್ಧವಾಗಿದೆ. “ನರೇಂದ್ರ ಮೋದಿ – ಸಮೃದ್ಧಿಯ ಮುಂದಾಳು ಮತ್ತು ವಿಶ್ವ ಶಾಂತಿಯ ಧರ್ಮಪ್ರಚಾರಕ” (Narendra Modi – Harbinger of Prosperity & Apostle of World Peace) ಎಂಬುದು ಥೀಮ್. ಈ ಕೂಟವು CNMS ಮತ್ತು SPWD ಸಹಯೋಗದಿಂದ ನಡೆಯಲಿದ್ದು ಭಾರತ ಮತ್ತು ಜಗತ್ತಿಗೆ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವದ ಕೊಡುಗೆಗಳನ್ನು ಸ್ಮರಿಸುವ ಗುರಿಯನ್ನು ಹೊಂದಿದೆ.
ಹೆಸರು ಹೇಳಲು ಬಯಸದ ಬಿಜೆಪಿಯ ಪದಾಧಿಕಾರಿಯೊಬ್ಬರ ಪ್ರಕಾರ ಈ ಹಿಂದೆ ಮಾಡಿದಂತೆ, ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ದೇಶಾದ್ಯಂತ ಸೇವೆ ಅಥವಾ ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ಬಿಜೆಪಿ ಮುಂದಾಗಿದೆ. ಕೆಲವು ರಾಜ್ಯಗಳಲ್ಲಿ, ಪಕ್ಷದ ಕಾರ್ಯಕರ್ತರು ರಕ್ತದಾನ ಶಿಬಿರಗಳನ್ನು ಅಥವಾ ಸ್ವಚ್ಛತೆ ಮತ್ತು ಮರ ನೆಡುವ ಅಭಿಯಾನಗಳನ್ನು ನಡೆಸುತ್ತಾರೆ. ಪ್ರತಿ ರಾಜ್ಯ ಘಟಕವು ಪ್ರಧಾನಿಯವರ ರಾಜಕೀಯ ಪ್ರಯಾಣದ ಪ್ರದರ್ಶನದಂತಹ ವಿಶಿಷ್ಟವಾದದ್ದನ್ನು ಸಿದ್ಧಪಡಿಸಿದೆ.
ಸರ್ಕಾರವು ತನ್ನ ಸಮಾಜ ಕಲ್ಯಾಣ ಯೋಜನೆಗಳು ಉದ್ದೇಶಿತ ಫಲಾನುಭವಿಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಉತ್ಸುಕವಾಗಿದೆ. ಕುಡಿಯುವ ನೀರನ್ನು ಮನೆ ಬಾಗಿಲಿಗೆ ತಲುಪಿಸುವ ಜಲ ಜೀವನ್ ಮಿಷನ್‌ನಂತಹ ಯೋಜನೆಗಳ ವ್ಯಾಪ್ತಿಯನ್ನು ವಿಸ್ತರಿಸಲು ಸಚಿವಾಲಯಗಳು ಮತ್ತು ಇಲಾಖೆಗಳನ್ನು ಈಗಾಗಲೇ ಕೇಳಲಾಗಿದೆ. ಬ್ಯಾಂಕ್ ಖಾತೆಗಳನ್ನು ತೆರೆಯುವ ಜನ್ ಧನ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಸಹಾಯಧನದ ವಸತಿಗಳನ್ನು ಒದಗಿಸುತ್ತದೆ.
ಕಳೆದ ವರ್ಷ,ತಮ್ಮ 72 ನೇ ಹುಟ್ಟುಹಬ್ಬದಂದು ದೇಶದಲ್ಲಿ ಚೀತಾ ಮರುಪರಿಚಯಿಸುವ ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ಉದ್ಯಾನವನಗಳಿಗೆ ಚೀತಾಗಳನ್ನು ತಂದು ಬಿಟ್ಟಿದ್ದರು. ದೇಶದಲ್ಲಿ ಚೀತಾಗಳ ಸಂಖ್ಯೆಯನ್ನು ಮತ್ತೆ ಹೆಚ್ಚಿಸುವ ಸಲುವಾಗಿ “ಚೀತಾ ಮರುಪರಿಚಯ ಪ್ರಾಜೆಕ್ಟ್ʼಗೆ ಚಾಲನೆ ನೀಡಿದ್ದು, ನಮೀಬಿಯಾದಿಂದ ಭಾರತಕ್ಕೆ ಚೀತಾಗಳನ್ನು ತರಲಾಗಿತ್ತು. ಈ ಚೀತಾಗಳನ್ನು ಮಧ್ಯಪ್ರದೇಶದ ಕುನೊ ನ್ಯಾಷನಲ್ ಪಾರ್ಕ್‌ಗೆ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಬಿಡಲಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ