ಭುವನೇಶ್ವರ: ಮಹಾಮಾರಿ ಕೊರೊನಾ ವೈರಸ್ನಿಂದ ದೇಶಾದ್ಯಂತ ಮದ್ಯದಂಗಡಿಗಳನ್ನು ಮುಚ್ಚಲಾಗಿತ್ತು. ಇದರಿಂದ ಕುಡುಕರು ಕಂಗಾಲಾಗಿ ಹೋಗಿದ್ದರು. ಬಳಿಕ ನಿಧಾನವಾಗಿ ವಿವಿಧ ರಾಜ್ಯಗಳಲ್ಲಿ ಎಣ್ಣೆ ಮಾರಾಟಕ್ಕೆ ಅವಕಾಶ ನೀಡಲಾಯ್ತು. ಆದ್ರೂ ಕೆಲವೊಂದು ರಾಜ್ಯಗಳಲ್ಲಿ ಮಾತ್ರ ಅನುಮತಿ ನೀಡಿರಲಿಲ್ಲ.
ಸುಮಾರು 3 ತಿಂಗಳ ಬಳಿಕ ಒಡಿಶಾ ಸರ್ಕಾರವೂ ಸಹ ಹಲವು ಷರತ್ತುಗಳನ್ನು ವಿಧಿಸಿ ಇಂದಿನಿಂದ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿದೆ. ಇದರಿಂದ ಎಣ್ಣೆ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಭುವನೇಶ್ವರದಲ್ಲಿ ಮದ್ಯಪ್ರಿಯರು ಸರತಿ ಸಾಲಿನಲ್ಲಿ ನಿಂತು ಎಣ್ಣೆ ಖರೀದಿಸುತ್ತಿದ್ದಾರೆ. ಅಲ್ಲದೆ ಮನೆ ಬಾಗಿಲಿಗೂ ಎಣ್ಣೆ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದೆ.
Published On - 3:22 pm, Wed, 1 July 20