ಒಡಿಶಾದಲ್ಲಿ ತ್ರಿವಳಿ ರೈಲು ಅಪಘಾತ ಸಂಭವಿಸಿ 3 ದಿನಗಳು ಕಳೆದಿವೆ, ಇನ್ನೂ 101 ಶವಗಳ ಗುರುತು ಪತ್ತೆಯಾಗಿಲ್ಲ. ಆಸ್ಪತ್ರೆಯ ಶವಾಗಾರಗಳು ತುಂಬಿವೆ ಹೀಗಾಗಿ ಬಾಸೋರ್ನ ಶಾಲೆಯೊಂದನ್ನು ತಾತ್ಕಾಲಿಕ ಶವಾಗಾರವನ್ನಾಗಿ ಮಾಡಲಾಗಿದೆ.
ಅಪಘಾತದಲ್ಲಿ 275 ಮಂದಿ ಮೃತಪಟ್ಟಿದ್ದು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇನ್ನೂ 101 ಮೃತದೇಹಗಳನ್ನು ಗುರುತಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೆಲವು ದೇಹಗಳು ನಜ್ಜುಗುಜ್ಜಾಗಿದೆ, ಇನ್ನೂ ಕೆಲವರ ಮುಖಕ್ಕೆ ಗಂಭೀರ ಗಾಯಗಳಾಗಿವೆ.
ಒಡಿಶಾದ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 200 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ, ಅಪಘಾತದಲ್ಲಿ ಸುಮಾರು 1,100 ಜನರು ಗಾಯಗೊಂಡಿದ್ದಾರೆ, ಅದರಲ್ಲಿ ಸುಮಾರು 900 ಜನರನ್ನು ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಓದಿ:Odisha Train Accident: ಶವಗಳ ರಾಶಿಯಿಂದ ಮಗನನ್ನು ಜೀವಂತವಾಗಿ ಹೊರ ತೆಗೆದ ತಂದೆ
ಭುವನೇಶ್ವರದಲ್ಲಿ ಇರಿಸಲಾಗಿರುವ ಒಟ್ಟು 193 ಶವಗಳಲ್ಲಿ 80 ಶವಗಳನ್ನು ಗುರುತಿಸಲಾಗಿದೆ. 55 ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಬಿಎಂಸಿಯ ಸಹಾಯವಾಣಿ ಸಂಖ್ಯೆಗೆ 200 ಕ್ಕೂ ಹೆಚ್ಚು ಕರೆಗಳು ಬಂದಿವೆ. 1929. ಮೃತ ದೇಹಗಳನ್ನು ಗುರುತಿಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತಿದೆ.
ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ನಿಂತಿದ್ದ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದು ಹಲವಾರು ಬೋಗಿಗಳು ಪಕ್ಕದ ಟ್ರ್ಯಾಕ್ನಲ್ಲಿ ಬಿದ್ದಿದ್ದವು. ಬಳಿಕ ಯಶವಂತಪುರದಿಂದ ಹೌರಾಕ್ಕೆ ಪ್ರಯಾಣಿಸುತ್ತಿದ್ದ ಹೌರಾ ಎಕ್ಸ್‌ಪ್ರೆಸ್ ಕೂಡ ಡಿಕ್ಕಿ ಹೊಡೆದಿತ್ತು.
ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಅಪಘಾತದ ಸ್ಥಳ ಪರಿಶೀಲನೆ ನಡೆಸಿದರು, ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ