Odisha Train Accident: ಇಂತಹ ದೊಡ್ಡ ದುರಂತ ನೋಡಿಲ್ಲ ಎಂದ ಬಾಲಸೋರ್ ಜಿಲ್ಲಾಸ್ಪತ್ರೆ ವೈದ್ಯ

|

Updated on: Jun 04, 2023 | 2:10 PM

ನನ್ನ ಜೀವನದಲ್ಲೇ ಇಂತಹ ದೊಡ್ಡ ದುರಂತವನ್ನು ನೋಡಿಲ್ಲ ಎಂದು ಹೇಳುವ ಮೂಲಕ ಬಾಲಸೋರ್ ಜಿಲ್ಲಾಸ್ಪತ್ರೆಯ ವೈದ್ಯ ಡಾ.ಪ್ರಸನ್ನ ಅವರು ರೈಲು ಅಪಘಾತದ ಭೀಕರತೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Odisha Train Accident: ಇಂತಹ ದೊಡ್ಡ ದುರಂತ ನೋಡಿಲ್ಲ ಎಂದ ಬಾಲಸೋರ್ ಜಿಲ್ಲಾಸ್ಪತ್ರೆ ವೈದ್ಯ
ಒಡಿಶಾದಲ್ಲಿ ರೈಲು ಅಪಘಾತ
Follow us on

ಬಾಲಸೋರ್: ನನ್ನ ಜೀವನದಲ್ಲೇ ಇಂತಹ ದೊಡ್ಡ ದುರಂತವನ್ನು ನೋಡಿಲ್ಲ ಎಂದು ಹೇಳುವ ಮೂಲಕ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಮೂಲದವರೂ ಆಗಿರುವ ಬಾಲಸೋರ್ (Balasore) ಜಿಲ್ಲಾಸ್ಪತ್ರೆಯ ವೈದ್ಯ ಡಾ.ಪ್ರಸನ್ನ ಅವರು ಒಡಿಶಾ ರೈಲು ಅಪಘಾತದ (Odisha Train Accident) ಭೀಕರತೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಅವರು, ಜೂನ್ 2ರಂದು ಸಂಭವಿಸಿದ ರೈಲು ದುರಂತ ಭೀಕರವಾಗಿತ್ತು. ಗಾಯಾಳುಗಳ ರಕ್ತವು ಕೂಡ ತುಂಬಾ ಕಪ್ಪಾಗಿತ್ತು ಎಂದರು.

ನೂರಾರು ಶವಗಳನ್ನು ಕಂಡು ಮನಸ್ಸಿಗೆ ತುಂಬಾ ನೋವಾಗಿದೆ. ಗಾಯಾಳುಗಳ ಮೈತುಂಬಾ ಕಲ್ಲಿದ್ದಲು ಮೆತ್ತಿಕೊಂಡಿತ್ತು. ಆಸ್ಪತ್ರೆಯಲ್ಲಿ ಕೋಲಾರದ ಒಬ್ಬ ರೋಗಿಗೆ ಚಿಕಿತ್ಸೆ ನೀಡಿದ್ದೆವು. ಮೂರು ತಿಂಗಳಿಂದ ಬಾಲಸೋರ್ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 2 ದಿನಗಳಿಂದ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಿತ್ತು ಎಂದು ವೈದ್ಯ ಪ್ರಸನ್ನ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.

ಇದನ್ನೂ ಓದಿ: Odisha Train Accident: ಒಡಿಶಾ ರೈಲು ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಬಸ್​ ಅಪಘಾತ

ಒಡಿಶಾ ರೈಲು ಅಪಘಾತದ ಹಿನ್ನೆಲೆ

ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಎಕ್ಸ್‌ಪ್ರೆಸ್ ರೈಲು ಭೀಕರ ಅಪಘಾತಕ್ಕೀಡಾಗಿದ್ದು 288 ಮಂದಿ ಸಾವನ್ನಪ್ಪಿದ್ದಾರೆ. 900ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೌರಾದಿಂದ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ಸಂಜೆ ಅಪಘಾತಕ್ಕೀಡಾಗಿತ್ತು. ಮಾಹಿತಿಯ ಪ್ರಕಾರ, ಈ ರೈಲು ಒಡಿಶಾದ ಬಾಲಸೋರ್‌ನಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ನಂತರ 3 ಸ್ಲೀಪರ್ ಕೋಚ್‌ಗಳನ್ನು ಬಿಟ್ಟು ಉಳಿದ ಬೋಗಿಗಳು ಹಳಿತಪ್ಪಿದವು.

ಬಾಲಸೋರ್ ರೈಲು ಅಪಘಾತದ ಕುರಿತು ಉನ್ನತ ಮಟ್ಟದ ಸಮಿತಿ ತನಿಖೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಆದೇಶಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಅಪಘಾತ ಸ್ಥಳಕ್ಕೆ ತೆರಳಿದ್ದರು. ಅಲ್ಲದೆ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:10 pm, Sun, 4 June 23