ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ ಹೆಚ್ ಮುನಿಯಪ್ಪ ಗಾಂಧಿ ಪರಿವಾರದವರೇ ಪಕ್ಷದ ಅಧ್ಯಕ್ಷರಾಗಬೇಕೆಂದು ಇಂದಿನ ಕಾರ್ಯಕಾರಿಣಿ ಸಭೆಯಲ್ಲಿ ಬಲವಾಗಿ ಪ್ರತಿಪಾದಿಸಿರುವ ವಿಷಯ ಮೂಲಗಳು ಬಹಿರಂಗಪಡಿಸಿವೆ.
ಲೋಕಸಭಾ ಚುನಾವಣೆ ಫಲಿತಾಂಶವನ್ನೇ ಆಧಾರವಾಗಿಟ್ಟುಕೊಂಡು ರಾಹುಲ್ ಗಾಂಧಿ ಪದತ್ಯಾಗ ಮಾಡಿರುವುದು ಸರಿಯಲ್ಲ. 2019 ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ದೇಶದಲ್ಲಿ ವಿಭಿನ್ನವಾದ ಸನ್ನಿವೇಶವಿತ್ತು, ನಾನು ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಸೋಲುವ ಮಾತೇ ಇರಲಿಲ್ಲ, ಸರ್ಜಿಕಲ್ ಸ್ಟ್ರೈಕ್ ನಮಗೆ ಮುಳುವಾಗಿ ಬಿಜೆಪಿಗೆ ಗೆಲುವಿಗೆ ಕಾರಣವಾಯ್ತುಎಂದರಂತೆ.
ಚುನಾವಣೆಯಲ್ಲಿ ಪಕ್ಷದ ಸೋಲಿಗೆ ರಾಹುಲ್ ಕಾರಣರಲ್ಲಅವರಿಗೆ ಪರ್ಯಾಯ ನಾಯಕ ಕಾಂಗ್ರೆಸ್‌ನಲ್ಲಿಲ್ಲ ಸೋನಿಯಾ ಅವರೇ ಪೂರ್ಣಾವಧಿಗೆ ಅಧ್ಯಕ್ಷರಾಗಬೇಕು ಇಲ್ಲವೇ ರಾಹುಲ್ ಆ ಸ್ಥಾನವನ್ನು ವಹಿಸಿಕೊಳ್ಳಬೇಕು ಸೋನಿಯಾ ಪದತ್ಯಾಗ ಮಾಡಿದರೆ ಕಾಂಗ್ರೆಸ್‌ಗೆ ವಿಪರೀತ ನಷ್ಟವಾಗಲಿದೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕೇವಲ ಗಾಂಧಿ ಪರಿವಾರದವರು ಮಾತ್ರ ಸೂಕ್ತ ಈ ಹಿನ್ನೆಲೆಯಲ್ಲಿ ಡಾ ಮನಮೋಹನ್ ಸಿಂಗ್ ಮಂಡಿಸಿದ ಪ್ರಸ್ತಾವನೆ ಅಂಗೀಕಾರಕ್ಕೆ ನಾನು ಒತ್ತಾಯಿಸುತ್ತೇನೆ ಎಂದು ಮುನಿಯಪ್ಪ ಹೇಳಿದರೆಂದು ಮೂಲಗಳು ತಿಳಿಸಿವೆ.
ಪಕ್ಷದ ಆಂತರಿಕ ವಿಚಾರ ಬಹಿರಗಂಪಡಿಸುವವರ ಬಗ್ಗೆಯೂ ಆತಂಕ ವ್ಯಕ್ತಪಡಿಸಿರುವ ಮುನಿಯಪ್ಪ ಆ ವಿಚಾರಗಳು ಮಾಧ್ಯಮಗಳಿಗೆ ಗೊತ್ತಾಗುತ್ತಿರುವ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿದರಂತೆ.
Published On - 5:48 pm, Mon, 24 August 20