ಮೀರತ್​ನಲ್ಲಿ ಪಾಕಿಸ್ತಾನಿ ಐಎಸ್​ಐ ಏಜೆಂಟ್​ ಬಂಧನ

ಮೀರತ್​ನಲ್ಲಿ ಪಾಕಿಸ್ತಾನಿ ಐಎಸ್​ಐ ಏಜೆಂಟ್​ನಲ್ಲಿ ಬಂಧಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳವು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಗೂಢಚಾರಿಕೆ ನಡೆಸುತ್ತಿರುವ ಬಗ್ಗೆ ಮೂಲಗಳಿಂದ ಸುಳಿವು ಪಡೆದಿದೆ. ಭಾರತೀಯ ರಾಯಭಾರ ಕಚೇರಿ, ರಕ್ಷಣಾ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಪ್ರಮುಖ ಮತ್ತು ಗೌಪ್ಯ ಮಾಹಿತಿಯನ್ನು ಐಎಸ್‌ಐ ಹ್ಯಾಂಡ್ಲರ್‌ಗಳಿಗೆ ರವಾನಿಸಿದ್ದಾರೆ ಎಂಬ ಆರೋಪವೂ ಅವರ ಮೇಲಿದೆ.

ಮೀರತ್​ನಲ್ಲಿ ಪಾಕಿಸ್ತಾನಿ ಐಎಸ್​ಐ ಏಜೆಂಟ್​ ಬಂಧನ
Image Credit source: India Today

Updated on: Feb 04, 2024 | 12:29 PM

ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಯುಪಿ ಎಟಿಎಸ್) ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ನಿಯೋಜನೆಗೊಂಡಿದ್ದ ಪಾಕಿಸ್ತಾನಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಏಜೆಂಟ್‌ನನ್ನು ಬಂಧಿಸಿದೆ. ಸತ್ಯೇಂದ್ರ ಸಿವಾಲ್ ಅವರನ್ನು 2021 ರಿಂದ ರಾಯಭಾರ ಕಚೇರಿಯಲ್ಲಿ ನಿಯೋಜಿಸಲಾಗಿತ್ತು. ಅವರು ಅಲ್ಲಿ ಭಾರತ ಆಧಾರಿತ ಭದ್ರತಾ ಸಹಾಯಕರಾಗಿ (IBSA) ಕೆಲಸ ಮಾಡಿದ್ದರು.

ಭಯೋತ್ಪಾದನಾ ನಿಗ್ರಹ ದಳವು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಗೂಢಚಾರಿಕೆ ನಡೆಸುತ್ತಿರುವ ಬಗ್ಗೆ ಮೂಲಗಳಿಂದ ಸುಳಿವು ಪಡೆದಿದೆ.

ವಿಚಾರಣೆಯ ಸಮಯದಲ್ಲಿ, ಸತ್ಯೇಂದ್ರ ಸಿವಾಲ್ ಅವರು ಭಾರತೀಯ ಸೇನೆ ಮತ್ತು ಅದರ ದೈನಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಹೊರತೆಗೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಹಣದ ಆಮಿಷ ಒಡ್ಡುತ್ತಿದ್ದರು ಎಂಬುದನ್ನು ಬಾಯ್ಬಿಟ್ಟಿದ್ದಾರೆ.

ಮತ್ತಷ್ಟು ಓದಿ: ಮಂಗಳೂರು: ನಿಗೂಢ ಕೆಲಸಕ್ಕಾಗಿ ಬೆಂಗಳೂರಿಗೆ ಹೊರಟಿದ್ದ ಯುವಕರ ತಂಡ ಸೆರೆ

ಭಾರತೀಯ ರಾಯಭಾರ ಕಚೇರಿ, ರಕ್ಷಣಾ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಪ್ರಮುಖ ಮತ್ತು ಗೌಪ್ಯ ಮಾಹಿತಿಯನ್ನು ಐಎಸ್‌ಐ ಹ್ಯಾಂಡ್ಲರ್‌ಗಳಿಗೆ ರವಾನಿಸಿದ್ದಾರೆ ಎಂಬ ಆರೋಪವೂ ಅವರ ಮೇಲಿದೆ.

ಮಾಹಿತಿಯ ಮೇರೆಗೆ ಯುಪಿ ಎಟಿಎಸ್ ಸಿವಾಲ್ ಅವರನ್ನು ವಿಚಾರಣೆಗೆ ಒಳಪಡಿಸಿತು, ಅವರು ಆರಂಭದಲ್ಲಿ ಅತೃಪ್ತಿಕರ ಉತ್ತರಗಳನ್ನು ನೀಡಿದರು. ಆದಾಗ್ಯೂ, ನಂತರ ಅವರು ಬೇಹುಗಾರಿಕೆಯನ್ನು ಒಪ್ಪಿಕೊಂಡರು ಮತ್ತು ಮೀರತ್‌ನಲ್ಲಿ ಬಂಧಿಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ