ಸಾರ್ವಜನಿಕರಿಂದ ತಿರಸ್ಕೃತರಾದವರು ಗೂಂಡಾಗಿರಿಯಿಂದ ಸಂಸತ್ತು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ: ಮೋದಿ

|

Updated on: Nov 25, 2024 | 11:14 AM

ಕೆಲವರು ಹೊಸ ಸಂಸದರ ಆಲೋಚನೆಗಳು, ಶಕ್ತಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂಸತ್ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಸತ್ ಹೊರಗೆ ಮಾತನಾಡಿದ ಅವರು, ಸಾರ್ವಜನಿಕರಿಂದ ತಿರಸ್ಕೃತರಾಗಿರುವ ಕೆಲವರು ಬೆರಳೆಣಿಕೆಯ ಜನರ ಗೂಂಡಾಗಿರಿಯ ಮೂಲಕ ಸಂಸತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಸಾರ್ವಜನಿಕರಿಂದ ತಿರಸ್ಕೃತರಾದವರು ಗೂಂಡಾಗಿರಿಯಿಂದ ಸಂಸತ್ತು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ: ಮೋದಿ
ನರೇಂದ್ರ ಮೋದಿ
Image Credit source: India TV
Follow us on

‘‘ಕೆಲವರು ಹೊಸ ಸಂಸದರ ಆಲೋಚನೆಗಳು, ಶಕ್ತಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂಸತ್ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಸತ್ ಹೊರಗೆ ಮಾತನಾಡಿದ ಅವರು, ‘‘ಸಾರ್ವಜನಿಕರಿಂದ ತಿರಸ್ಕೃತರಾಗಿರುವ ಕೆಲವರು ಬೆರಳೆಣಿಕೆಯ ಜನರ ಗೂಂಡಾಗಿರಿಯ ಮೂಲಕ ಸಂಸತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ’’ ಎಂದು ಪ್ರಧಾನಿ ಮೋದಿ ಹೇಳಿದರು.

ಇಂತಹ ಗೂಂಡಾಗಳನ್ನು ಸಾರ್ವಜನಿಕರು ಶಿಕ್ಷಿಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಾರ್ವಜನಿಕರು ಅವರನ್ನು ಗಮನಿಸುತ್ತಿದ್ದಾರೆ, ಇಂತಹವರು ಪ್ರಜಾಪ್ರಭುತ್ವವನ್ನು ಗೌರವಿಸುವುದಿಲ್ಲ. ಪ್ರತಿಪಕ್ಷಗಳು ಸಾರ್ವಜನಿಕರ ಭಾವನೆಗಳಿಗೆ ಗೌರವ ನೀಡಬೇಕು. ಪ್ರತಿಪಕ್ಷಗಳು ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳಬೇಕು.

ಕೆಲವು ವಿರೋಧ ಪಕ್ಷದ ಸಂಸದರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವುದಿಲ್ಲ. ಅವರಿಗೆ ಜನರ ಆಶೋತ್ತರಗಳ ಬಗ್ಗೆ ಕಾಳಜಿ ಇಲ್ಲ. ಜಗತ್ತು ಭಾರತದತ್ತ ನಿರೀಕ್ಷೆಯಿಂದ ನೋಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಚರ್ಚೆಯು ಕೆಲವು ಅರ್ಥಪೂರ್ಣ ಫಲಿತಾಂಶಗಳನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.

ಮತ್ತಷ್ಟು ಓದಿ: ವಕ್ಫ್​ನಿಂದ ಬ್ಯಾಂಕಿಂಗ್ ಕಾನೂನು ತಿದ್ದುಪಡಿವರೆಗೆ, ಸಂಸತ್​ ಚಳಿಗಾಲದ ಅಧಿವೇಶನದಲ್ಲೇನೇನು ನಡೆಯುತ್ತೆ?

ಹೊಸ ಆಲೋಚನೆಗಳು ಮತ್ತು ಶಕ್ತಿಯನ್ನು ಹೊಂದಿರುವ ಹೊಸ ಸಂಸದರಿಗೆ ಮಾತನಾಡಲು ಬಿಡಬೇಕು, ಜಗತ್ತು ಭಾರತದತ್ತ ನೋಡುತ್ತಿದೆ. ಪ್ರಪಂಚದಲ್ಲಿ ಭಾರತಕ್ಕೆ ಇಂದಿನಂತೆ ಅಂತಹ ಅವಕಾಶಗಳು ಸಿಗುವುದು ಅಪರೂಪ. ಜಗತ್ತಿಗೆ ಸಂದೇಶ ಹೋಗಬೇಕು.

ಹೊಸ ಸಂಸದರು ಹೊಸ ಆಲೋಚನೆಗಳನ್ನು, ಹೊಸ ಶಕ್ತಿಯನ್ನು ತರುತ್ತಾರೆ ಮತ್ತು ಅವರು ಯಾವುದೇ ಒಂದು ಪಕ್ಷಕ್ಕೆ ಸೇರಿಲ್ಲ ಆದರೆ ಎಲ್ಲಾ ಪಕ್ಷಗಳಿಗೆ ಸೇರಿದವರು. ಕೆಲವರು ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆ, ಅವರಿಗೆ ಸದನದಲ್ಲಿ ಮಾತನಾಡುವ ಅವಕಾಶವೂ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನು ಸರಿದೂಗಿಸಲು ಇರುವ ಏಕೈಕ ಮಾರ್ಗವೆಂದರೆ ನಾವು ಪ್ರತಿ ವಿಷಯದ ವಿವಿಧ ಅಂಶಗಳನ್ನು ಸದನದಲ್ಲಿ ಆರೋಗ್ಯಕರ ರೀತಿಯಲ್ಲಿ ಹೈಲೈಟ್ ಮಾಡಬೇಕು, ಮುಂಬರುವ ಪೀಳಿಗೆಗಳು ಸಹ ಅದರಿಂದ ಸ್ಫೂರ್ತಿ ಪಡೆಯುತ್ತವೆ ಎಂದು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ