ದೆಹಲಿ: ಕೊರೊನಾ ಎಂಬ ಮಹಾಮಾರಿ ಸೋಂಕಿನಿಂದ ಮೃತಪಟ್ಟ ಪತ್ರಕರ್ತರನ್ನು ಕೋವಿಡ್ ವಾರಿಯರ್ ಎಂದು ಪರಿಗಣಿಸುವಂತೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ PCI ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಈಗಾಗಲೇ ಕೋವಿಡ್ನಿಂದ ಸಾವನ್ನಪ್ಪಿದ ವೈದ್ಯರು ಹಾಗು ಆಸ್ಪತ್ರೆ ಸಿಬ್ಬಂದಿಯನ್ನು ಕೋವಿಡ್ ವಾರಿಯರ್ ಎಂದು ಪರಿಗಣಿಸಿದ್ದು, ಇವರ ಪಟ್ಟಿಗೆ ಪತ್ರಕರ್ತರನ್ನೂ ಸೇರಿಸಿ, ಕೋವಿಡ್ ವಾರಿಯರ್ಗಳಿಗೆ ಇರುವ ಸೌಲಭ್ಯಗಳನ್ನು ನೀಡುವಂತೆ ಕೇಂದ್ರಕ್ಕೆ ಒತ್ತಾಯಿಸಿದೆ.
ಹರಿಯಾಣ ಸರ್ಕಾರವು ಈಗಾಗಲೇ ರೂಪಿಸಿದ ಯೋಜನೆಗಳಿಗೆ ಅನುಗುಣವಾಗಿ ಪತ್ರಕರ್ತರಿಗಾಗಿ ಗುಂಪು ವಿಮಾ ಯೋಜನೆಯನ್ನು ಜಾರಿಗೆ ತರಲು ಪಿಸಿಐ, ಕೇಂದ್ರ ಸರ್ಕಾರ ಹಾಗೂ ಎಲ್ಲಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.
ಪಿಸಿಐ ಸರ್ವಾನುಮತದ ನಿರ್ಣಯದಲ್ಲಿ ಹರಿಯಾಣ ಸರ್ಕಾರ ರೂಪಿಸಿದ ಮಾದರಿಯಲ್ಲಿ ಗುಂಪು ವಿಮಾ ಯೋಜನೆಯನ್ನು ಜಾರಿಗೆ ತರಲು ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರಾಡಳಿಯ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಕೌನ್ಸಿಲ್ ನಿರ್ಧರಿಸಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮಾಸ್ಕ್ ಧರಿಸದಿದ್ದರೆ ಸೋಂಕಿತರ ಸೇವೆ ಮಾಡುವ ಶಿಕ್ಷೆ: ಗುಜರಾತ್ ಹೈಕೋರ್ಟ್ ವಿನೂತನ ಕ್ರಮ
Published On - 3:03 pm, Thu, 3 December 20