ಒಡಿಶಾ: ನಿನ್ನೆ ಶುಕ್ರವಾರ ದೇಶಾದ್ಯಂತ ಗಣೇಶನ ಹುಟ್ಟುಹಬ್ಬವನ್ನು ವೈಭವಯುತವಾಗಿ ಆಚರಿಸಲಾಗಿದೆ. ಕೊರೊನಾ ಮಹಾಮಾರಿಯ ಭೀತಿಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಆತಂಕದ ಮಧ್ಯೆ ಭಕ್ತರು ಗಣಪನಿಗೆ ಕೈಮುಗಿದಿದ್ದಾರೆ. ರಾಜ್ಯ ಮತ್ತು ದೇಶದಾದ್ಯಂತ ವಿನಾಯಕನ ಭಕ್ತರು ವೈವಿಧ್ಯಮಯವಾಗಿ ಹಬ್ಬ ಆಚರಿಸಿದ್ದಾರೆ. ಕಾಲಕಳೆದಂತೆ ಜನ ಪ್ರಕೃತಿ ಮಾತೆಗೆ ಪ್ರಾಧಾನ್ಯತೆ ನೀಡುತ್ತಿದ್ದು, ಪರಿಸರ ಉಳಿಸಿಕೊಳ್ಳುವುದಕ್ಕೆ ಮಣೆ ಹಾಕಿದ್ದಾರೆ.
ಒಡಿಶಾದ ಭುವನೇಶ್ವರದಲ್ಲಿಯೂ ಒಂದು ಗುಂಪು ಅಕ್ಷರಶಃ ಪ್ರಕೃತಿಯಲ್ಲಿಯೇ ಗಣಪನನನ್ನು ಕಂಡಿದ್ದಾರೆ, ಅದನ್ನೇ ವಿಘ್ನನಿವಾರಕ ಎಂದು ಭಾವಿಸಿ, ಭಾವ ಭಕ್ತಿಯಿಂದ ನಮಿಸಿದ್ದಾರೆ. ಅಪ್ಪಿಕೋ ಚಳುವಳಿಯನ್ನು (Chipko Movement) ನೆನಪಿಸುವ ರೀತಿಯಲ್ಲಿ ವಿಶಿಷ್ಟ ತಂಡವೊಂದು ಮರದಲ್ಲಿಯೇ ಸಾಕ್ಷಾತ್ ಗಜಾನನನ್ನು (Tree Ganesha) ಕಂಡಿದ್ದಾರೆ.
ಅತ್ಯಂತ ಪರಿಸರ ಕಾಳಜಿಯೊಂದಿಗೆ ಮರದಲ್ಲಿಯೇ ಗಣೇಶನನ್ನು ಚಿತ್ರಿಸಿ, ಅದಕ್ಕೆ ಮರವನ್ನೇ ಕಿವಿಯಾಗಿಸಿ, ನಮ್ಮ ಮೊರೆಯನ್ನು ಕೇಳಪ್ಪಾ ಎಂದು ಗಣಪತಿ ಬಪ್ಪಾ ಮೋರೆಯಾಗೆ ಮೊರೆಯಿಟ್ಟಿದ್ದಾರೆ. 10 ದಿನಗಳ ಗಣೇಶ ಚತುರ್ಥಿಯನ್ನು ಭುವನೇಶ್ವರದ ಜನ (Bhubaneswar, Odisha) ಕಾಡಿನಲ್ಲಿ ಆಚರಿಸಿದ್ದಾರೆ.
(people worshipped a tree in the form of Lord Ganesha in Bhubaneswar Odisha)
Published On - 7:03 am, Sat, 11 September 21