ಬಿಜೆಪಿ ನಿಧಿಗೆ 1000 ರೂ.ದೇಣಿಗೆ ನೀಡಿದ ಪ್ರಧಾನಿ ಮೋದಿ; ಕೈಲಾದಷ್ಟು ಹಣ ನೀಡಿ, ಪಕ್ಷ ಸದೃಢಗೊಳಿಸಲು ಕರೆ

| Updated By: Lakshmi Hegde

Updated on: Dec 25, 2021 | 4:19 PM

ಬಿಜೆಪಿಯ ಈ ದೇಣಿಗೆ ಸಂಗ್ರಹ ಕಾರ್ಯಕ್ರಮಕ್ಕೆ ಮೈಕ್ರೋ-ಡೊನೇಶನ್​ ಎಂದೇ ಹೆಸರಿಡಲಾಗಿದ್ದು, ಆ ಫೋಟೋವನ್ನೂ ಕೂಡ ಪಿಎಂ ಮೋದಿ ಶೇರ್​ ಮಾಡಿದ್ದಾರೆ.

ಬಿಜೆಪಿ ನಿಧಿಗೆ 1000 ರೂ.ದೇಣಿಗೆ ನೀಡಿದ ಪ್ರಧಾನಿ ಮೋದಿ; ಕೈಲಾದಷ್ಟು ಹಣ ನೀಡಿ, ಪಕ್ಷ ಸದೃಢಗೊಳಿಸಲು ಕರೆ
ಪ್ರಧಾನಿ ಮೋದಿ
Follow us on

ದೆಹಲಿ: ಇಂದು ಭಾರತೀಯ ಜನತಾ ಪಕ್ಷ (ಬಿಜೆಪಿ)ದ ನಿಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ(PM Modi)ಯವರು 1000 ರೂಪಾಯಿ ದೇಣಿಗೆ ನೀಡಿದ್ದಾರೆ. ಹೀಗೆ, ನಿಮ್ಮ ಕೈಲಾದಷ್ಟು ಮೊತ್ತದ ದೇಣಿಗೆ ನೀಡಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಿ ಎಂದು ಬಿಜೆಪಿ ಬೆಂಬಲಿಗರಿಗೆ ಪ್ರಧಾನಿ ಮೋದಿ (PM Narendra Modi) ಕರೆ ನೀಡಿದ್ದಾರೆ.  ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಾನಿಂದು ಭಾರತೀಯ ಜನತಾ ಪಾರ್ಟಿಯ ನಿಧಿಗೆ 1 ಸಾವಿರ ರೂಪಾಯಿ ದೇಣಿಗೆ ನೀಡಿದ್ದೇನೆ. ಯಾವಾಗಲೂ ರಾಷ್ಟ್ರಕ್ಕೆ ಪ್ರಥಮ ಆದ್ಯತೆ ನೀಡುವುದು ನಮ್ಮ ಆದರ್ಶ. ಇಂಥ ಪಕ್ಷಕ್ಕೆ ನೀವು ಚಿಕ್ಕಚಿಕ್ಕ ಮೊತ್ತದ ದೇಣಿಗೆ ನೀಡಿದರೆ, ನಮ್ಮ ಸಿಬ್ಬಂದಿಗೆ ತುಂಬ ಅನುಕೂಲವಾಗುತ್ತದೆ. ಜೀವಮಾನ ಪೂರ್ತಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಅವರ ಉತ್ಸಾಹಕ್ಕೆ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ. ಬಿಜೆಪಿಯನ್ನು ಬಲಿಷ್ಠಗೊಳಿಸಲು, ಈ ಮೂಲಕ ಭಾರತವನ್ನು ಬಲಿಷ್ಠಗೊಳಿಸಲು ಸಹಾಯ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಹಾಗೇ, ತಾವು ಪಕ್ಷಕ್ಕೆ ದೇಣಿಗೆ ನೀಡಿದ್ದಕ್ಕಾಗಿ, ತಮಗೆ ನೀಡಲಾದ ರಸೀದಿಯ ಫೋಟೋವನ್ನೂ ಟ್ವೀಟ್​ನಲ್ಲಿ ಹಂಚಿಕೊಂಡಿದ್ದಾರೆ.

ಬಿಜೆಪಿಯ ಈ ದೇಣಿಗೆ ಸಂಗ್ರಹ ಕಾರ್ಯಕ್ರಮಕ್ಕೆ ಮೈಕ್ರೋ-ಡೊನೇಶನ್​ ಎಂದೇ ಹೆಸರಿಡಲಾಗಿದ್ದು, ಆ ಫೋಟೋವನ್ನೂ ಕೂಡ ಪಿಎಂ ಮೋದಿ ಶೇರ್​ ಮಾಡಿದ್ದಾರೆ, ಈ ದೇಣಿಗೆ ಸಂಗ್ರಹ ಅಭಿಯಾನ ಒಂದು ಕಾರಣಕ್ಕೆ ವಿಶೇಷವಾಗಿದೆ. ಇದು ಅಟಲ್​ ಬಿಹಾರಿ ವಾಜಪೇಯಿ ಜನ್ಮದಿನವಾದ ಇಂದು (ಡಿ.25) ಶುರುವಾಗಲಿದ್ದು, ಫೆಬ್ರವರಿ 11ರಂದು ದೀನ್​ ದಯಾಳ್​ ಉಪಾಧ್ಯಾಯ ಅವರ ಪುಣ್ಯತಿಥಿಯಂದು ಮುಕ್ತಾಯಗೊಳ್ಳಲಿದೆ. ನೀವು ನೀಡುವ ದೇಣಿಗೆ, ಈ ರಾಷ್ಟ್ರ ನಿರ್ಮಾಣಕ್ಕಾಗಿ ಸ್ವಾರ್ಥರಹಿತವಾಗಿ ದುಡಿಯುತ್ತಿರುವ ಲಕ್ಷಾಂತರ ಕಾರ್ಯಕರ್ತರಿಗೆ ಸಹಾಯವಾಗಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಪಕ್ಷಕ್ಕೆ 1 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ. ನಾನು NaMo ಆ್ಯಪ್​ ಮೂಲಕ 1000 ರೂಪಾಯಿ ನೀಡಿ, ಪಕ್ಷ ಸದೃಢಗೊಳಿಸಲು ನನ್ನದೇ ಆದ ಚಿಕ್ಕ ಕೊಡುಗೆ ನೀಡಿದ್ದೇನೆ. ನೀವು ರೆಫೆರೆಲ್​ ಕೋಡ್ ಬಳಸಿಕೊಂಡು, ನಿಮ್ಮ ಕುಟುಂಬ, ಸ್ನೇಹಿತರನ್ನೂ ಈ ಅಭಿಯಾನದಲ್ಲಿ ಸೇರಿಸಿಕೊಳ್ಳಬಹುದು. ಈ ಮೂಲಕ ಬಿಜೆಪಿಯನ್ನು ಬಲಿಷ್ಠಗೊಳಿಸಬಹುದು ಎಂದು ಜೆಪಿ ನಡ್ಡಾ ಟ್ವೀಟ್ ಮಾಡಿದ್ದಾರೆ.   ಅಂದಹಾಗೆ, ಬಿಜೆಪಿಯನ್ನು ಬೆಂಬಲಿಸುವವರು 5 ರೂಪಾಯಿಯಿಂದ 1000 ರೂ.ವರೆಗೆ ದೇಣಿಗೆ ನೀಡಬಹುದು ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ‘ಕರ್ನಾಟಕ ಬಂದ್‌ನಿಂದ ಮಹಾರಾಷ್ಟ್ರದವರಿಗೆ ತೊಂದರೆ ಆಗಲ್ಲ; ಬಂದ್‌ಗೆ ಕರೆ ನೀಡಿದವರು ಈ ಬಗ್ಗೆ ಯೋಚಿಸಬೇಕು’