Nirmala Sitharaman Economic package ಆನ್​ಲೈನ್ ಶಿಕ್ಷಣಕ್ಕೆ ಹೆಚ್ಚಿನ ಕ್ರಮ

|

Updated on: May 17, 2020 | 2:39 PM

ದೆಹಲಿ: ಕೊರೊನಾದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಆರ್ಥಿಕತೆಯ ಉತ್ತೇಜನಕ್ಕೆ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್​ ಪೈಕಿ ಬಾಕಿ ಇರುವ ಸುಮಾರು 1.5 ಲಕ್ಷ ಕೋಟಿ ಪ್ಯಾಕೇಜ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸುತ್ತಿದ್ದಾರೆ. 5ನೇ ಹಾಗೂ ಕೊನೆಯ ಹಂತದ ಆರ್ಥಿಕ ಪ್ಯಾಕೇಜ್​ ಇದಾಗಿದೆ. ಮುಖ್ಯಾಂಶಗಳು: 1. ಬಡವರಿಗೆ ಮುಂದಿನ 2 ತಿಂಗಳು ಉಚಿತ ಧಾನ್ಯ ನೀಡಲಾಗುತ್ತೆ 2. ಆರೋಗ್ಯ, ಮನ್ರೇಗಾ, […]

Nirmala Sitharaman Economic package ಆನ್​ಲೈನ್ ಶಿಕ್ಷಣಕ್ಕೆ ಹೆಚ್ಚಿನ ಕ್ರಮ
Follow us on

ದೆಹಲಿ: ಕೊರೊನಾದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಆರ್ಥಿಕತೆಯ ಉತ್ತೇಜನಕ್ಕೆ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್​ ಪೈಕಿ ಬಾಕಿ ಇರುವ ಸುಮಾರು 1.5 ಲಕ್ಷ ಕೋಟಿ ಪ್ಯಾಕೇಜ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸುತ್ತಿದ್ದಾರೆ. 5ನೇ ಹಾಗೂ ಕೊನೆಯ ಹಂತದ ಆರ್ಥಿಕ ಪ್ಯಾಕೇಜ್​ ಇದಾಗಿದೆ.

ಮುಖ್ಯಾಂಶಗಳು:
1. ಬಡವರಿಗೆ ಮುಂದಿನ 2 ತಿಂಗಳು ಉಚಿತ ಧಾನ್ಯ ನೀಡಲಾಗುತ್ತೆ
2. ಆರೋಗ್ಯ, ಮನ್ರೇಗಾ, ಉದ್ಯಮ, ಉದ್ಯಮ ಸರಳೀಕರಣ, ಶಿಕ್ಷಣ, ಸಾರ್ವಜನಿಕ ವಲಯದ ನೀತಿಗಳು, ರಾಜ್ಯ ಸರ್ಕಾರ ಮತ್ತು ಸಂಪನ್ಮೂಲಗಳ ಬಗ್ಗೆ ಘೋಷಣೆ
3. ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂಪಾಯಿ ವಿಮೆ
4. ರಾಜ್ಯಗಳಿಗೆ 4,113 ಕೋಟಿ ರೂಪಾಯಿ ಬಿಡುಗಡೆ

ಆನ್​ಲೈನ್​ ಶಿಕ್ಷಣಕ್ಕೆ ಕ್ರಮ:
ಆನ್‌ಲೈನ್‌ ಎಜುಕೇಷನ್ ದೊಡ್ಡ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಡಿಟಿಹೆಚ್ ಮೂಲಕ ಆನ್‌ಲೈನ್ ಎಜುಕೇಷನ್ ನೀಡಲಾಗುತ್ತೆ. ಸ್ವಯಂಪ್ರಭಾ ಮಾಧ್ಯಮದ ಮೂಲಕ ಆನ್‌ಲೈನ್ ಶಿಕ್ಷಣ. ಆನ್‌ಲೈನ್ ಶಿಕ್ಷಣಕ್ಕೆ 12 ಹೊಸ ಚಾನೆಲ್ ಸೇರ್ಪಡೆಯಾಗುತ್ತೆ. ಸ್ಕೈಪ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತೆ. ಪ್ರತಿ ದಿನ 4 ಗಂಟೆ ಆನ್​ಲೈನ್ ಶಿಕ್ಷಣ. 200 ಪಠ್ಯಪುಸ್ತಕಗಳನ್ನು ಇ-ಪಾಠ ಶಾಲೆಗೆ ಸೇರಿಸಲಾಗಿದೆ.

ಮೇ 30 ರಿಂದ 100 ವಿವಿಗಳಲ್ಲಿ ಆನ್​ಲೈನ್ ಶಿಕ್ಷಣ ಆರಂಭವಾಗುತ್ತೆ. ಅಂಧರಿಗೆ ರೇಡಿಯೋ ಮೂಲಕ ಶಿಕ್ಷಣ ನೀಡಲಾಗುತ್ತೆ. ದಿವ್ಯಾಂಗರಿಗಾಗಿ ಪ್ರತ್ಯೇಕ ಪಠ್ಯಪುಸ್ತಕ ಇರುತ್ತೆ. ಡಿಜಿಟಲ್ ಶಿಕ್ಷಣಕ್ಕಾಗಿ ‘ಪಿಎಂ ಇ-ವಿದ್ಯಾ’ ಯೋಜನೆ ಆರಂಭ. ಒನ್​ ಕ್ಲಾಸ್, ಒನ್ ಚಾನಲ್ ಆರಂಭ. 1 ರಿಂದ 12ನೇ ತರಗತಿವರೆಗಿನ ಶಿಕ್ಷಣಕ್ಕೆ ಪ್ರತ್ಯೇಕ ಚಾನಲ್ ಇರುತ್ತೆ. ಕೊರೊನಾ ಬಗ್ಗೆ ಅರಿವು ಮೂಡಿಸೋಕೆ ತಂತ್ರಜ್ಞಾನದ ಬಳಕೆ ಮಾಡಲಾಗುತ್ತೆ.

ಮನ್ರೇಗಾ ಯೋಜನೆಗೆ ಹೆಚ್ಚುವರಿ ಅನುದಾನ:
ವಲಸಿಗ ಕಾರ್ಮಿಕರಿಗೆ ಮನ್ರೇಗಾ ಯೋಜನೆಯಡಿ ಉದ್ಯೋಗ ನೀಡಲಾಗುತ್ತೆ. ಮನ್ರೇಗಾ ಯೋಜನೆಗೆ 40,000 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ. ಗ್ರಾಮೀಣ ಭಾಗದ ಆರ್ಥಿಕತೆ ಅಭಿವೃದ್ಧಿಗೆ ಅನುಕೂಲವಾಗುತ್ತೆ.

ಗ್ರಾಮೀಣ ಭಾಗದಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆ: 
ದೇಶದಲ್ಲಿ ಆರೋಗ್ಯ, ಮೂಲಸೌಕರ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತೆ. ದೇಶದ ಎಲ್ಲಾ ಜಿಲ್ಲೆಗಳಲ್ಲಿ ಸೋಂಕು ತಡೆ ಬ್ಲಾಕ್ ನಿರ್ಮಾಣ. ಪಬ್ಲಿಕ್ ಹೆಲ್ತ್‌ ಬ್ಲಾಕ್‌ಗಳನ್ನು ಬ್ಲಾಕ್ ಮಟ್ಟದಲ್ಲಿ ಸ್ಥಾಪಿಸುತ್ತೇವೆ. ಆರೋಗ್ಯ ಕ್ಷೇತ್ರದಲ್ಲಿ ಸಾರ್ವಜನಿಕ ವೆಚ್ಚ ಹೆಚ್ಚಿಸಲಾಗುತ್ತದೆ. ರೋಗಗಳಿಗೆ ಸಂಬಂಧಿಸಿ ಹೆಚ್ಚಿನ ಸಂಶೋಧನೆಗೆ ಕ್ರಮ. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಕೇಂದ್ರಗಳ ಸ್ಥಾಪನೆ ಮಾಡುತ್ತೇವೆ.

ಉದ್ಯಮಗಳಿಗೆ ರಿಲೀಫ್ ನೀಡಿದ ಕೇಂದ್ರ:
ಲಾಕ್​ಡೌನ್​ನಿಂದ ಬಹಳಷ್ಟು ಉದ್ಯಮಗಳಿಗೆ ಸಂಕಷ್ಟವಾಗಿದೆ. ಲಾಕ್​ಡೌನ್​ ಕಾರಣದಿಂದ ಸಾಲ ಮರುಪಾವತಿ ಮಾಡದಿದ್ದರೆ ಸುಸ್ತಿದಾರ ಎಂದು ಪರಿಗಣಿಸಲ್ಲ. ಎಂಎಸ್​ಎಂಇಗಳು ದಿವಾಳಿಯಾಗಿವೆ ಎಂದು ಘೋಷಿಸಲು ಇದ್ದ ಮಿತಿಯನ್ನ 1 ಕೋಟಿಗೆ ಏರಿಕೆ. ದಿವಾಳಿ ಎಂದು ಘೋಷಿಸೋದನ್ನ 1 ವರ್ಷ ಮುಂದೂಡಿಕೆ ಮಾಡಿ ಉದ್ಯಮಿಗಳಿಗೆ ರಿಲೀಫ್ ಕೊಟ್ಟ ಕೇಂದ್ರ ಸರ್ಕಾರ.

ಕಂಪನಿ ಕಾನೂನುಗಳಲ್ಲಿ ಭಾರೀ ಬದಲಾವಣೆ:
ಉದ್ಯಮ ಸರಳೀಕರಣದಲ್ಲಿ ಭಾರತದ ಱಂಕಿಂಗ್ ಹೆಚ್ಚು ಮಾಡಲು ಪ್ರಯತ್ನ ಮಾಡಲಾಗುತ್ತೆ. 5 ಅಪರಾಧಗಳನ್ನ ಪರ್ಯಾಯ ಕ್ರಮಗಳ ಮೂಲಕ ನಿವಾರಣೆ ಮಾಡಲಾಗುತ್ತೆ. 7 ದಂಡ ವಿಧಿಸೋ ಅಪರಾಧಗಳನ್ನ ಕೈಬಿಡಲಾಗುತ್ತೆ. ದಂಡ ವಿಧಿಸೋದನ್ನ ಕೂಡ ಆಂತರಿಕ ವಿವಾದ ಬಗೆಹರಿಸೋ ಪ್ರಕ್ರಿಯೆಗೆ ಸೇರ್ಪಡೆ. ಸಣ್ಣ ತಾಂತ್ರಿಕ ಮತ್ತು ಪ್ರಕ್ರಿಯೆ ದೋಷದಿಂದ ಅಪರಾಧ ಎಂದು ಘೋಷಿಸೋದನ್ನ ಕೈಬಿಡಲಾಗುತ್ತೆ. ಕಂಪನಿ ಕಾನೂನುಗಳಲ್ಲಿ ಭಾರೀ ಬದಲಾವಣೆಯಾಗಿದ್ದು ಅಪರಾಧ ಮುಕ್ತ ಮಾಡೋದು ಹಾಗೂ ಅಪರಾಧೀಕರಣದಿಂದ ಕೈ ಬಿಡೋದಾಗಿದೆ.

ಎಲ್ಲ ವಲಯಗಳಲ್ಲಿ ಖಾಸಗಿ ಕಂಪನಿಗಳ ಹೂಡಿಕೆಗೆ ಅವಕಾಶ:
ಐಬಿಸಿ ಸಂಬಂಧಿ ಕ್ರಮಗಳಿಂದ ಉದ್ಯಮಗಳಿಗೆ ವಿನಾಯಿತಿ ನೀಡಲಾಗುತ್ತೆ. ಈ ಸಂಬಂಧ ಸದ್ಯದಲ್ಲೇ ಸುಗ್ರೀವಾಜ್ಞೆ ತರಲಾಗುತ್ತೆ. ಕಂಪನಿಗಳ ಡಿ ಕ್ರಿಮಿನಲೈಝೇಷನ್ ಕುರಿತು ಉಪಕ್ರಮ, ಹಲವು ನಿಯಮಗಳಿಗೆ ತಿದ್ದುಪಡಿ ಮಾಡಲಾಗುತ್ತೆ. ರಾಷ್ಟ್ರೀಯ ಕಂಪನಿ ವಿವಾದ ನ್ಯಾಯಾಧಿಕರಣಗಳಿಗೆ ವಿಶೇಷ ಪೀಠ ಸ್ಥಾಪನೆ. ವಿದೇಶಿ ಷೇರುಮಾರುಕಟ್ಟೆಗಳಲ್ಲಿ ಭಾರತದ ಕಂಪನಿಗಳ ನೋಂದಣಿಗೆ ಅವಕಾಶ ನೀಡಲಾಗುತ್ತೆ. ಎಲ್ಲ ವಲಯಗಳಲ್ಲಿ ಖಾಸಗಿ ಕಂಪನಿಗಳ ಹೂಡಿಕೆಗೆ ಅವಕಾಶ ನೀಡಲಾಗುತ್ತೆ.

ರಾಜ್ಯಗಳ ಸಾಲ ಮಿತಿ ಶೇ.60ರಷ್ಟು ಹೆಚ್ಚಳ:
ರಾಜ್ಯಗಳ ಆದಾಯ ಸಂಗ್ರಹದಲ್ಲೂ ಭಾರೀ ಕುಸಿತವಾಗಿದೆ. ರಾಜ್ಯಗಳೂ ಕೊವಿಡ್ ವಿರುದ್ಧ ಹೋರಾಟ ಮಾಡುತ್ತಿವೆ. 46,038 ಕೋಟಿ ರೂ. ತೆರಿಗೆ ನಷ್ಟ ಪರಿಹಾರ ರೂಪದಲ್ಲಿ ನೀಡಲಾಗಿದೆ. ರಾಜ್ಯ ಸರ್ಕಾರಗಳಿಗೆ ಏಪ್ರಿಲ್, ಮೇ ತಿಂಗಳಿನಲ್ಲಿ 12,390 ಕೋಟಿ ರೂ. ನೀಡಲಾಗಿದೆ. NDRF ನಿಧಿಗೆ ಏಪ್ರಿಲ್ ಮೊದಲ ವಾರದಲ್ಲಿ 11,092 ಕೋಟಿ ರೂ. ಕೊಡಲಾಗಿದೆ. ಅಲ್ಲದೆ ರಾಜ್ಯಗಳು ಸಾಲ ಪಡೆಯೋ ಮಿತಿಯನ್ನ ಶೇ.60ರಷ್ಟು ಹೆಚ್ಚಳ ಮಾಡಲಾಗಿದೆ. ಆದರೆ ಇದರಲ್ಲಿ ಶೇಕಡಾ 14ರಷ್ಟು ಮಾತ್ರ ಸಾಲ ಪಡೆದಿದ್ದಾರೆ. ರಾಜ್ಯಗಳ ಜಿಡಿಪಿಯ ಶೇ.3ರಿಂದ 5ಕ್ಕೆ ಏರಿಕೆ ಮಾಡಲಾಗಿದೆ.

20 ಲಕ್ಷ ಕೋಟಿ ರೂ.ನ ಪ್ಯಾಕೇಜ್ ಲೆಕ್ಕ:
20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಾಹಿತಿ ನೀಡಿದ್ದಾರೆ. ಕೇಂದ್ರ, ಆರ್‌ಬಿಐನಿಂದ 20.97 ಲಕ್ಷ ಕೋಟಿ ಪ್ಯಾಕೇಜ್ ಆಗಿದ್ದು, ಮೊದಲ ಪ್ಯಾಕೇಜ್‌ನಲ್ಲಿ 5,94,550 ಕೋಟಿ ರೂಪಾಯಿ ಘೋಷಿಸಲಾಗಿದೆ. 2ನೇ ಪ್ಯಾಕೇಜ್‌ನಲ್ಲಿ 3,10,000 ಕೋಟಿ ರೂಪಾಯಿ, 3ನೇ ಪ್ಯಾಕೇಜ್‌ನಲ್ಲಿ 1,50,000 ಕೋಟಿ ರೂ, 4, 5ನೇ ಪ್ಯಾಕೇಜ್‌ನಲ್ಲಿ ₹48,100 ಕೋಟಿ ಘೋಷಣೆ ಮಾಡಲಾಗಿದೆ. ಮಾರ್ಚ್ ತಿಂಗಳಲ್ಲಿ ಪಿಎಂ ಗರೀಬ್ ಕಲ್ಯಾಣ ಯೋಜನೆ, ತೆರಿಗೆ ರಿಫಂಡ್, ಹೆಲ್ತ್ ಕ್ಷೇತ್ರದ ಘೋಷಣೆ ಸೇರಿದಂತೆ 1,92,800 ಕೋಟಿ ರೂಪಾಯಿ ಘೋಷಿಸಲಾಗಿದೆ. ಒಟ್ಟಾರೆಯಾಗಿ 20,97,053 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಲಾಗಿದೆ.

Published On - 11:09 am, Sun, 17 May 20