ಗೋವಾ, ಫೆ.6: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಫೆ.6) ONGC (Oil and Natural Gas Corporation) ಸಮುದ್ರ ಸರ್ವೈವಲ್ ಸೆಂಟರ್ನ್ನು ಉದ್ಘಾಟಿಸಿದರು. ದಕ್ಷಿಣ ಗೋವಾದ ಬೆತುಲ್ ಗ್ರಾಮದಲ್ಲಿ ಈ ಕೇಂದ್ರಕ್ಕೆ ಚಾಲನೆ ನೀಡಿದ್ದಾರೆ. ಇದರ ಜತೆಗೆ ಇಂಡಿಯಾ ಎನರ್ಜಿ ವೀಕ್ 2024ನ್ನು ಕೂಡ ಅನಾವರಣಗೊಳಿಸಿದರು. ಇನ್ನು ಈ ಯೋಜನೆಯನ್ನು 2047ಕ್ಕೆ ಗುರಿಯಾಗಿಸಿಕೊಂಡಿದ್ದು. ಈ ಯೋಜನೆಗೆ 1,330 ಕೋಟಿ ರೂ. ವೆಚ್ಚವನ್ನು ಮಾಡಲಾಗುವುದು ಎಂದು ಹೇಳಲಾಗಿದೆ.
ಈ ಯೋಜನೆ ಬಗ್ಗೆ ಪ್ರಧಾನಮಂತ್ರಿಗಳ ಕಾರ್ಯಾಲಯ ನೀಡಿದ ಹೇಳಿಕೆ ಪ್ರಕಾರ, ONGC ಸಮುದ್ರ ಸರ್ವೈವಲ್ ಸೆಂಟರ್ನ್ನು ಅತ್ಯಾಧುನಿಕ ಇಂಟಿಗ್ರೇಟೆಡ್ ಸೀ ಸರ್ವೈವಲ್ ಟ್ರೈನಿಂಗ್ ಸೆಂಟರ್ ಆಗಿ ಅಭಿವೃದ್ಧಿಪಡಿಸಲಾಗಿದೆ. ವಾರ್ಷಿಕವಾಗಿ 10,000-15,000 ಸಿಬ್ಬಂದಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿದ್ದು, ಭಾರತದ ಸಮುದ್ರಯಾನದ ತರಬೇತಿಯನ್ನು ಜಾಗತಿಕಮಟ್ಟಕ್ಕೆ ಕೊಂಡೊಯ್ಯಲಿದೆ.
ಇದನ್ನೂ ಓದಿ: ಜಾತಿ, ಧರ್ಮ, ಪ್ರಾಂತ್ಯ ಬೇಧವಿಲ್ಲ, ಎಲ್ಲರಿಗೂ ಒಂದೇ ಕಾನೂನು, ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ
ಇಂಡಿಯಾ ಎನರ್ಜಿ ವೀಕ್ 2024 ಮೂಲಕ ಇಂಧನ ಅಗತ್ಯತೆಗಳಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯನ್ನು ಹೊಂದಿದೆ. ಫೆಬ್ರವರಿ 6 ರಿಂದ 9 ರವರೆಗೆ ಗೋವಾದಲ್ಲಿ ಆಯೋಜಿಸಲಾದ ಕಾರ್ಯಕ್ರಮ ಭಾರತದ ಅತಿದೊಡ್ಡ ಮತ್ತು ಏಕೈಕ ಸಮಗ್ರ ಇಂಧನ ಪ್ರದರ್ಶನದ ಸಮ್ಮೇಳನವಾಗಿದೆ. ಇದು ದೇಶದ ಶಕ್ತಿ ಮೌಲ್ಯ ಸರಪಳಿಯನ್ನು ಒಟ್ಟುಗೂಡಿಸುತ್ತದೆ. ಹಾಗೂ ಭಾರತದ ಶಕ್ತಿ ಪರಿವರ್ತನೆ ಗುರಿಗಳಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರ್ಯಕ್ರಮದ ನಂತರ ಜಾಗತಿಕ ತೈಲ ಮತ್ತು ಅನಿಲ ಸಿಇಒಗಳು ಹಾಗೂ ತಜ್ಞರೊಂದಿಗೆ ಪ್ರಧಾನಿ ಸಭೆ ನಡೆಸಲಿದ್ದಾರೆ.
&
#WATCH | Prime Minister Narendra Modi inaugurates ONGC Sea Survival Centre in Goa
It has been developed as a one-of-a-kind Integrated Sea Survival Training Centre to advance the Indian sea survival training ecosystem to global standards. It is expected to train 10,000-15,000… pic.twitter.com/IAKhb20m11
— ANI (@ANI) February 6, 2024
ಇಂಡಿಯಾ ಎನರ್ಜಿ ವೀಕ್ 2024 ಕಾರ್ಯಕ್ರಮದಲ್ಲಿ ಕೆನಡಾ, ಜರ್ಮನಿ, ನೆದರ್ಲ್ಯಾಂಡ್ಸ್, ರಷ್ಯಾ, ಯುಕೆ ಮತ್ತು ಯುಎಸ್ ದೇಶಗಳು ಭಾಗವಹಿಸಲಿದೆ. ಭಾರತೀಯ ಎಂಎಸ್‌ಎಂಇಗಳು ಇಂಧನ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲಿದೆ. ಇದರ ಜತೆಗೆ ವಿಶೇಷವಾಗಿ ಮೇಕ್ ಇನ್ ಇಂಡಿಯಾ ಪೆವಿಲಿಯನ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:59 am, Tue, 6 February 24