ಶಾಂತಿ ಮತ್ತು ಸೌಹಾರ್ದತೆಯ ಗಾಂಧಿ (Mahatma Gandhi) ಆದರ್ಶಗಳು ಜಾಗತಿಕವಾಗಿ ಪ್ರತಿಧ್ವನಿಸುತ್ತವೆ ಮತ್ತು ಲಕ್ಷಾಂತರ ಜನರಿಗೆ ಶಕ್ತಿಯನ್ನು ನೀಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶನಿವಾರ (ಮೇ 20) ಜಪಾನಿನ ಹಿರೋಷಿಮಾದಲ್ಲಿ (Hiroshima, Japan) ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಮಾತನಾಡಿದರು. ಶಾಂತಿ ಮತ್ತು ಅಹಿಂಸೆಯ ಒಗ್ಗಟ್ಟಿನ ಸಂಕೇತವಾಗಿ ಗಾಂಧಿ ಪ್ರತಿಮೆಯ ಸ್ಥಳವನ್ನು ಆಯ್ಕೆ ಮಾಡಲಾಗಿದೆ. US ಆಗಸ್ಟ್ 6, 1945 ರಂದು ಹಿರೋಷಿಮಾದ ಮೇಲೆ ವಿಶ್ವದ ಮೊದಲ ಪರಮಾಣು ದಾಳಿಯನ್ನು ನಡೆಸಿ, ನಗರವನ್ನು ನಾಶಪಡಿಸಿತು ಮತ್ತು ಸುಮಾರು 140,000 ಜನರನ್ನು ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡರು.
ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, ಇಂದಿಗೂ ಕೂಡ ‘ಹಿರೋಷಿಮಾ’ ಎಂಬ ಪದವನ್ನು ಕೇಳಿದರೆ ಜಗತ್ತು ನಡುಗುತ್ತದೆ ಎಂದು ಹೇಳಿದರು.
Unveiled Mahatma Gandhi’s bust in Hiroshima. This bust in Hiroshima gives a very important message. The Gandhian ideals of peace and harmony reverberate globally and give strength to millions. pic.twitter.com/22vVjHlzgn
— Narendra Modi (@narendramodi) May 20, 2023
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಹಿರೋಷಿಮಾ ಕ್ಷೇತ್ರವನ್ನು ಪ್ರತಿನಿಧಿಸುವ ಜಪಾನ್‌ನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಜಿ-7 ಶೃಂಗಸಭೆಗೆ ಅತಿಥಿಯಾಗಿ ಮೋದಿಯನ್ನು ಆಹ್ವಾನಿಸಿದರು. ಜಿ7 ಶೃಂಗಸಭೆಗಾಗಿ ಪ್ರಧಾನಿ ಮೋದಿ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಮತ್ತು ಜಪಾನ್ ನಡುವಿನ ಸ್ನೇಹ ಮತ್ತು ಸೌಹಾರ್ದತೆಯ ಸಂಕೇತವಾಗಿ ಈ ಪ್ರತಿಮೆಯನ್ನು ಭಾರತವು ಹಿರೋಷಿಮಾಕ್ಕೆ ಉಡುಗೊರೆಯಾಗಿ ನೀಡಿತು.
ಇದೀಗ ಮೋದಿ ಹಿರೋಷಿಮಾದಲ್ಲಿ ಇದೆ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಜಪಾನಿನ ಈ ನಡೆ ಬಹಳ ಮುಖ್ಯವಾದ ಸಂದೇಶವನ್ನು ನೀಡುತ್ತದೆ. ಶಾಂತಿ ಮತ್ತು ಸೌಹಾರ್ದತೆಯ ಗಾಂಧಿ ಆದರ್ಶಗಳು ಜಾಗತಿಕವಾಗಿ ಪ್ರತಿಧ್ವನಿಸುತ್ತವೆ ಮತ್ತು ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತವೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿ, ಮಾನವೀಯತೆಯ ಶಾಂತಿಯ ಹಂಬಲವನ್ನು ಸಂಕೇತಿಸುವ ನಗರಕ್ಕೆ ಈ ಪ್ರತಿಮೆ ಸೂಕ್ತವಾದ ಗೌರವವಾಗಿದೆ. 42 ಇಂಚು ಎತ್ತರದ ಕಂಚಿನ ಪ್ರತಿಮೆಯನ್ನು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ರಾಮ್ ವಾಂಜಿ ಸುತಾರ್ ಕೆತ್ತಿದ್ದಾರೆ. ಮೊಟೊಯಾಸು ನದಿಯ ಪಕ್ಕದಲ್ಲಿ ಸ್ಥಾಪಿಸಲಾದ ಗಾಂಧಿ ಪ್ರತಿಮೆ, ಐಕಾನಿಕ್ ಎ-ಬಾಂಬ್ ಡೋಮ್‌ಗೆ ಸಮೀಪದಲ್ಲಿದೆ, ಇದನ್ನು ಪ್ರತಿದಿನ ಸಾವಿರಾರು ಜನರು, ಸ್ಥಳೀಯರು ಮತ್ತು ಪ್ರವಾಸಿಗರು ಭೇಟಿ ನೀಡುತ್ತಾರೆ.
“ನಾನು ಜಪಾನಿನ ಪ್ರಧಾನಿಗೆ ಉಡುಗೊರೆಯಾಗಿ ನೀಡಿದ ಬೋಧಿ ವೃಕ್ಷವನ್ನು ಇಲ್ಲಿ ಹಿರೋಷಿಮಾದಲ್ಲಿ ನೆಡಲಾಗಿದೆ ಎಂದು ತಿಳಿದುಕೊಳ್ಳಲು ನನಗೆ ಬಹಳ ಸಂತೋಷವಾಗುತ್ತಿದೆ, ಇದರಿಂದ ಜನರು ಇಲ್ಲಿಗೆ ಬಂದಾಗ ಶಾಂತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಬಹುದು” ಎಂದು ಮೋದಿ ಹೇಳಿದರು.
ಗಾಂಧಿ ತಮ್ಮ ಜೀವನವನ್ನು ಶಾಂತಿ ಮತ್ತು ಅಹಿಂಸೆಗಾಗಿ ಮುಡಿಪಾಗಿಟ್ಟರು. ಈ ಸ್ಥಳವು ನಿಜವಾಗಿಯೂ ಗಾಂಧೀಜಿಯವರ ತತ್ವಗಳು ಮತ್ತು ಜೀವನದೊಂದಿಗೆ ಪ್ರತಿಧ್ವನಿಸುತ್ತದೆ, ಇದು ಜಗತ್ತಿಗೆ ಮತ್ತು ಅದರ ನಾಯಕರಿಗೆ ಸ್ಫೂರ್ತಿ ನೀಡುವುದನ್ನು ಮುಂದುವರೆಸಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗಸಭೆಯ ಅಧಿವೇಶನದಲ್ಲಿ ಮೋದಿ ಮುಂದಿಟ್ಟ 10 ಕ್ರಿಯಾ ಯೋಜನೆಗಳು
ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಮೋದಿ ಅವರು ಗಾಂಧಿ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಲು ಅವಕಾಶ ನೀಡಿದ ನಗರದ ಮೇಯರ್ ಮತ್ತು ಜಪಾನ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಅವರು ಅಹಿಂಸೆಯ ಕಲ್ಪನೆಯನ್ನು ಮುಂದಕ್ಕೆ ಕೊಂಡೊಯ್ಯುವುದಾಗಿ ಹೇಳಿದರು.