2024ರಲ್ಲಿ ಕ್ವಾಡ್ ಶೃಂಗಸಭೆಗೆ ಆತಿಥ್ಯ ವಹಿಸಲು ಭಾರತ ಸಂತೋಷ ಪಡುತ್ತದೆ: ಮೋದಿ
ಜಾಗತಿಕ ಒಳಿತಿಗಾಗಿ, ಜನರ ಕಲ್ಯಾಣ, ಸಮೃದ್ಧಿ ಮತ್ತು ಶಾಂತಿಗಾಗಿ ಕ್ವಾಡ್ ಪ್ರಯತ್ನಗಳನ್ನು ಮುಂದುವರೆಸುತ್ತದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಕ್ವಾಡ್ ಗ್ರೂಪಿಂಗ್ ಪ್ರಪಂಚದ ಡೈನಾಮಿಕ್ಸ್ ಅನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
2024 ರಲ್ಲಿ ಕ್ವಾಡ್ ಶೃಂಗಸಭೆಯನ್ನು ಆಯೋಜಿಸಲು ಭಾರತ ಖುಷಿ ಪಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಹೇಳಿದ್ದಾರೆ. ಜಪಾನಿನ ಹಿರೋಷಿಮಾದಲ್ಲಿ ಈ ವರ್ಷದ ಕ್ವಾಡ್ ಶೃಂಗಸಭೆ (Quad Summit) ನಡೆಯುತ್ತಿದ್ದು ಯುಎಸ್ ಅಧ್ಯಕ್ಷ ಜೋ ಬಿಡೆನ್, (Joe Biden) ಆಸ್ಟ್ರೇಲಿಯಾದ ಪ್ರಧಾನ ಆಂಥೋನಿ ಅಲ್ಬನೀಸ್ ಮತ್ತು ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಅವರ ಸಮ್ಮುಖದಲ್ಲಿ ಪ್ರಧಾನಿ ಮೋದಿ ಈ ಮಾತನ್ನು ಹೇಳಿದ್ದಾರೆ. ಜಾಗತಿಕ ಒಳಿತಿಗಾಗಿ, ಜನರ ಕಲ್ಯಾಣ, ಸಮೃದ್ಧಿ ಮತ್ತು ಶಾಂತಿಗಾಗಿ ಕ್ವಾಡ್ ಪ್ರಯತ್ನಗಳನ್ನು ಮುಂದುವರೆಸುತ್ತದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಕ್ವಾಡ್ ಗ್ರೂಪಿಂಗ್ ಪ್ರಪಂಚದ ಡೈನಾಮಿಕ್ಸ್ ಅನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಈಗ 20-30 ವರ್ಷಗಳ ನಂತರ ಜನರು ಈ ಕ್ವಾಡ್ ನ ಪ್ರಯೋಜನ ಪಡೆಯುತ್ತಾರೆ. ಬದಲಾವಣೆಯು ಪ್ರದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಲ್ಲಿಯೂ ಕ್ರಿಯಾತ್ಮಕವಾಗಿದೆ ಎಂದು ನಾನು ಭಾವಿಸುತ್ತೇನೆ. ನನ್ನ ದೃಷ್ಟಿಯಲ್ಲಿ, ಕಳೆದ ಎರಡು ವರ್ಷಗಳಲ್ಲಿ ನಾವು ಅಗಾಧವಾದ ಪ್ರಗತಿಯನ್ನು ಸಾಧಿಸಿದ್ದೇವೆ” ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
“We will be happy to host the Quad summit in India in 2024,” says Prime Minister Narendra Modi during the Quad meeting in Hiroshima, Japan. https://t.co/7qerYPcXzd pic.twitter.com/k42N5m4jno
— ANI (@ANI) May 20, 2023
ಜಪಾನ್ ಪ್ರಧಾನ ಮಂತ್ರಿ ಫುಮಿಯೊ ಕಿಶಿದಾ ಅವರು ದಕ್ಷಿಣ ಏಷ್ಯಾ ಮತ್ತು ಪೆಸಿಫಿಕ್ ದ್ವೀಪಗಳ ಇತರ ಗುಂಪುಗಳು/ದೇಶಗಳೊಂದಿಗೆ ಪ್ರಾಯೋಗಿಕ ಸಹಕಾರದಲ್ಲಿ ತೊಡಗಿಸಿಕೊಳ್ಳಲು ಪ್ರತಿಜ್ಞೆ ಮಾಡಿದರು. ನಾವು ಪ್ರಾಯೋಗಿಕ ಸಹಕಾರದಲ್ಲಿ ತೊಡಗಿಸಿಕೊಳ್ಳಲು ಏಷ್ಯಾ, ದಕ್ಷಿಣ ಏಷ್ಯಾ ಮತ್ತು ಪೆಸಿಫಿಕ್ ದ್ವೀಪ ರಾಜ್ಯಗಳ ಪ್ರಾದೇಶಿಕ ದೇಶಗಳ ಧ್ವನಿಯನ್ನು ಆಲಿಸುತ್ತೇವೆ, ಇದು ಈ ಪ್ರದೇಶಕ್ಕೆ ಉತ್ತಮ ಶಕ್ತಿಯಾಗಿ ನಿಜವಾದ ಪ್ರಯೋಜನಗಳನ್ನು ನೀಡುತ್ತದೆ ಎಂದು ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಹೇಳಿದರು.
ಮುಕ್ತ, ಸ್ಥಿರ, ಸುರಕ್ಷಿತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶಕ್ಕಾಗಿ ನಾವು ಒಟ್ಟಿಗೆ ನಿಂತಿರುವುದಾಗಿ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ.
ಇದನ್ನೂ ಓದಿ: ಜಪಾನ್‌ನಲ್ಲಿ ಭಾಷಾತಜ್ಞ, ಲೇಖಕ ಟೊಮಿಯೊ ಮಿಜೋಕಾಮಿಯನ್ನು ಭೇಟಿ ಮಾಡಿದ ಮೋದಿ; ಯಾರು ಈ ವ್ಯಕ್ತಿ?
ನಾನು ಮತ್ತೊಮ್ಮೆ ಆತ್ಮೀಯ ಸ್ನೇಹಿತರ ನಡುವೆ ಇರಲು ಸಂತೋಷಪಡುತ್ತೇನೆ. ಮುಕ್ತ, ಸ್ಥಿರ, ಸುರಕ್ಷಿತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶಕ್ಕಾಗಿ ಒಟ್ಟಿಗೆ ನಿಂತಿದ್ದೇವೆ ಸಾರ್ವಭೌಮತ್ವವನ್ನು ಗೌರವಿಸುವ ಪ್ರದೇಶ ಮತ್ತು ಎಲ್ಲಾ ದೊಡ್ಡ ಮತ್ತು ಸಣ್ಣ ದೇಶಗಳು ಪ್ರಾದೇಶಿಕ ಸಮತೋಲನದಿಂದ ಪ್ರಯೋಜನ ಪಡೆಯುತ್ತವೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದರು.
ಭಾರತ, ಆಸ್ಟ್ರೇಲಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಜಪಾನ್ ಈ ನಾಲ್ಕು ದೇಶಗಳ ಬಹುಪಕ್ಷೀಯ ಗುಂಪಾಗಿದೆ ಕ್ವಾಡ್. ಈ ವರ್ಷದ ಕ್ವಾಡ್ ಶೃಂಗಸಭೆಯನ್ನು ಮೂಲತಃ ಆಸ್ಟ್ರೇಲಿಯಾದಲ್ಲಿ ನಿಗದಿಪಡಿಸಲಾಗಿತ್ತು ಆದರೆ ಯುಎಸ್ ಅಧ್ಯಕ್ಷ ಜೋ ಬೈಡನ್ ವಾಷಿಂಗ್ಟನ್‌ನಲ್ಲಿ ಮಾತುಕತೆಗಳಿಂದಾಗಿ ಆಸ್ಟ್ರೇಲಿಯಾಕ್ಕೆ ತಮ್ಮ ಪ್ರವಾಸವನ್ನು ಮುಂದೂಡಬೇಕಾಗಿದ್ದರಿಂದ ಜಪಾನ್‌ನಲ್ಲಿ ನಡೆಸಲಾಯಿತು. ಜಪಾನ್ ಜಿ7 ಶೃಂಗಸಭೆಯನ್ನು ಆಯೋಜಿಸುತ್ತಿದೆ. ಗುಂಪಿನ ಎಲ್ಲಾ ನಾಯಕರು ಪ್ರಸ್ತುತ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಭಾರತವು ಜಿ7 ಸದಸ್ಯತ್ವ ಹೊಂದಿಲ್ಲದಿದ್ದರೂ, ಪ್ರಧಾನಿ ಮೋದಿ ಅವರು ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಅವರ ವೈಯಕ್ತಿಕ ಆಹ್ವಾನದ ಮೇರೆಗೆ ಜಿ7 ಮತ್ತು ಕ್ವಾಡ್ ಶೃಂಗಸಭೆಗಾಗಿ ಜಪಾನ್‌ಗೆ ಪ್ರಯಾಣಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:45 pm, Sat, 20 May 23