ವಾರಣಾಸಿಯಲ್ಲಿ ವಾಯುಪಡೆಯಿಂದ ರೋಚಕ ಏರೋಶೋ; ಪ್ರಧಾನಿ ಮೋದಿ ವೀಕ್ಷಣೆ; ಪ್ರಧಾನಿಗೆ ಸ್ವಕ್ಷೇತ್ರದಲ್ಲಿ ಭವ್ಯ ಸ್ವಾಗತ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸ್ವಕ್ಷೇತ್ರವಾದ ವಾರಣಾಸಿಯಲ್ಲಿ ಭಾರತೀಯ ವಾಯುಪಡೆಯ ಏರೋ ಶೋ ವೀಕ್ಷಿಸಿದ್ದಾರೆ. ವಾಯುಪಡೆಯ 94ನೇ ವಾರ್ಷಿಕೋತ್ಸವದ ಅಂಗವಾಗಿ ಈ ಪ್ರದರ್ಶನ ಏರ್ಪಡಸಲಾಗಿತ್ತು. ಇದಕ್ಕೂ ಮುನ್ನ, ವಾರಣಾಸಿಯ ಜನರು ಪ್ರಧಾನಿ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಿದರು. ಏರೋಶೋಗೆ ಮುನ್ನ ಪ್ರಧಾನಿಗಳು ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಾರಣಾಸಿಯಲ್ಲಿ ವಾಯುಪಡೆಯಿಂದ ರೋಚಕ ಏರೋಶೋ; ಪ್ರಧಾನಿ ಮೋದಿ ವೀಕ್ಷಣೆ; ಪ್ರಧಾನಿಗೆ ಸ್ವಕ್ಷೇತ್ರದಲ್ಲಿ ಭವ್ಯ ಸ್ವಾಗತ
ವಾರಣಾಸಿಯಲ್ಲಿ ಏರೋಶೋ ವೀಕ್ಷಿಸುತ್ತಿರುವ ಮೋದಿ, ಯೋಗಿ
Image Credit source: Narendra Modi's Youtube

Updated on: Oct 25, 2026 | 2:13 PM

ನವದೆಹಲಿ, ಅಕ್ಟೋಬರ್ 25: ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಇಂದು ಭಾರತೀಯ ವಾಯುಪಡೆಯ ರೋಚಕ ಸಾಹಸ ಪ್ರದರ್ಶನ ವೀಕ್ಷಿಸಿದರು. ವಾಯುಪಡೆಯಿಂದ ಹಲವು ಯುದ್ಧವಿಮಾನಗಳ ಕಸರತ್ತುಗಳು ಮತ್ತು ವೈಮಾನಿಕ ಸಾಹಸಗಳ ಪ್ರದರ್ಶನವನ್ನು ಪ್ರಧಾನಿ ಮೋದಿ ಅವರ ಜೊತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತಿತರರು ಕಣ್ತುಂಬಿಸಿಕೊಂಡರು. ಎಲ್​ಸಿಎ ತೇಜಸ್, ರಫಾಲ್ ಯುದ್ಧವಿಮಾನಗಳು, ಬ್ರಹ್ಮೋಸ್ ಮತ್ತಿತರ ಕ್ಷಿಪಣಿಗಳನ್ನು ಹೊತ್ತು ರಫಾಲ್, ಎಲ್​ಸಿಎ ತೇಜಸ್ ಮತ್ತಿತರ ಯುದ್ಧವಿಮಾನಗಳು ವಾರಣಾಸಿ ಆಗಸದಲ್ಲಿ ಮಿಂಚಿನ ಸಂಚಾರ ನಡೆಸಿದರು. ವಾಯುಸೇನೆಯ ಸೂರ್ಯಕಿರಣ್ ತಂಡದ ಸಂಯೋಜಿತ ಪ್ರದರ್ಶನವು ಗಮನ ಸೆಳೆಯಿತು.

ಭಾರತೀಯ ವಾಯುಪಡೆಯ 96ನೇ ವಾರ್ಷಿಕೋತ್ಸವದ ಆಚರಣೆಗಾಗಿ ಈ ಪ್ರದರ್ಶನ ಆಯೋಜಿಸಲಾಗಿತ್ತು. ‘ವಿಂಗ್ಸ್ ಓವರ್ ಗ್ಯಾಂಜೆಸ್’ (ಗಂಗೆಯ ಮೇಲೆ ರೆಕ್ಕೆಗಳು) ಥೀಮ್ ಅಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಫಾಲ್, ತೇಜಸ್ ಅಷ್ಟೇ ಅಲ್ಲದೆ, ಸುಖೋಯ್ 30 ಎಂಕೆಐ ಯುದ್ಧವಿಮಾನ, ಪ್ರಚಂಡ್ ಯುದ್ಧ ಹೆಲಿಕಾಪ್ಟರ್, ಸಾರಿಗೆ ವಿಮಾನಗಳು ಇತ್ಯಾದಿಗಳ ಪ್ರದರ್ಶನ ನಡೆಯಿತು.

ವಾರಣಾಸಿ ಏರೋ ಶೋ ಪ್ರದರ್ಶನದ ವಿಡಿಯೋ
YouTube video player

ಇದನ್ನೂ ಓದಿ: ಆಂಧ್ರ, ಒಡಿಶಾದಲ್ಲಿ ಅ. 28ಕ್ಕೆ ಚಂಡಮಾರುತ ಅಬ್ಬರ; ಕರ್ನಾಟಕದಲ್ಲೂ ಬಿರುಗಾಳಿ ಸಹಿತ ಮಳೆಯ ಅಲರ್ಟ್

ವಾರಣಾಸಿಯಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ

ಇದಕ್ಕೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸ್ವಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಿ, ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ವಾರಣಾಸಿಗೆ ಆಗಮಿಸಿದ ಪ್ರಧಾನಿ ಮೋದಿಯವರಿಗೆ ಸ್ಥಳೀಯ ಜನತೆ ರಸ್ತೆಯುದ್ದಕ್ಕೂ ನಿಂತು ಅಭೂತಪೂರ್ವ ಸ್ವಾಗತ ಕೋರಿದರು. ಈ ವೇಳೆ ಪ್ರಧಾನಿಯವರು ತೆರೆದ ವಾಹನದಲ್ಲಿ ಮೆಗಾ ರೋಡ್‌ಶೋ ನಡೆಸಿ ಜನರೊಂದಿಗೆ ಅಭಿವಾದನ ವಿನಿಮಯ ಮಾಡಿಕೊಂಡರು.

ಗಾರ್ಮೆಂಟ್ಸ್ ಸೌಲಭ್ಯ ಮತ್ತು ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ

ಸ್ಥಳೀಯ ನೇಕಾರರು ಮತ್ತು ಜವಳಿ ಉದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಅರವಿಂದ್ ಲಿಮಿಟೆಡ್​ನ ನೂತನ ಗಾರ್ಮೆಂಟ್ಸ್ ಘಟಕವನ್ನು (Garment Facility) ಪ್ರಧಾನಿಯವರು ಉದ್ಘಾಟಿಸಿದರು. ಇದರೊಂದಿಗೆ ಕಾಶಿಯ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಮೂಲಭೂತ ಸೌಕರ್ಯ ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಯಿತು.

ಇದನ್ನೂ ಓದಿ: ಮನ್ ಕಿ ಬಾತ್‌ನಲ್ಲಿ ಸ್ಥಳೀಯ ಉತ್ಪನ್ನಗಳ ಬಳಕೆಗೆ ಪ್ರಧಾನಿ ಮೋದಿ ಕರೆ: ಕರ್ನಾಟಕದ ಕಲಬುರಗಿ ತೊಗರಿಬೇಳೆ, ಬಿಹಾರದ ಮಖಾನಾ ಉಲ್ಲೇಖ

ವಾಯುಪಡೆ ಮತ್ತು ನೌಕಾಪಡೆಯ ಪ್ರದರ್ಶನಗಳ ಬಳಿಕ ಪ್ರಧಾನಿಗಳು ಒಡಿಶಾ ರಾಜಧಾನಿ ಭುವನೇಶ್ವರ್​ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಆರ್​ಬಿಐನಿಂದ ನೂತನವಾಗಿ ಸ್ಥಾಪಿಸಲಾಗಿರುವ ಡಾಟಾ ಸೆಂಟರ್ ಮತ್ತು ಸೈಬರ್ ಸೆಕ್ಯೂರಿಟಿ ಇನ್ಸ್​ಟಿಟ್ಯೂಟ್ ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us