ರೋಜ್ಗಾರ್ ಮೇಳದಲ್ಲಿ 71 ಸಾವಿರ ನೇಮಕಾತಿ ಪತ್ರಗಳನ್ನು ವಿತರಿಸಿದ ಪ್ರಧಾನಿ ಮೋದಿ
ಪ್ರಧಾನ ಮಂತ್ರಿ ರೋಜ್ಗಾರ್ ಮೇಳ ಯೋಜನೆಯಡಿ ಹೊಸದಾಗಿ ನೇಮಕಗೊಂಡ 71 ಸಾವಿರ ಮಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ನೇಮಕಾತಿ ಪತ್ರ ವಿತರಿಸಿದ್ದಾರೆ. ವರ್ಚುವಲ್ ಕಾರ್ಯಕ್ರಮದ ಪ್ರಧಾನಿ ಮೋದಿಯವರು ಹೊಸದಾಗಿ ನೇಮಕಗೊಂಡ ನೂತನ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ್ದು, ತದನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.
ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಡಿ ಭರ್ಜರಿ ಉದ್ಯೋಗಾವಕಾಶ ಸೃಷ್ಠಿಯಾಗುತ್ತಿದ್ದು, ರಾಷ್ಟ್ರೀಯ ರೋಜ್ಗಾರ್ ಮೇಳದ ಮೂಲಕ ಬರೋಬ್ಬರಿ 71 ಸಾವಿರ ಮಂದಿಗೆ ಉದ್ಯೋಗಾವಕಾಶ ನೀಡಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ನೇಮಕಾತಿ ಪತ್ರಗಳನ್ನು ವಿತರಿಸಲಾಗಿದ್ದು, ಆಯ್ಕೆಗೊಂಡ ನೂತನ ಅಭ್ಯರ್ಥಿಗಳು ರೈಲ್ವೆ, ಅಂಚೆ, ಆದಾಯ ತೆರಿಗೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಅವಕಾಶ ಪಡೆದುಕೊಳ್ಳಲಿದ್ದಾರೆ.
ರೋಜ್ಗಾರ್ ಮೇಳದಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರವು ಕರ್ಮಯೋಗಿ ಪ್ರಾರಂಭ್ ಆನ್ಲೈನ್ ಕೋರ್ಸ್ ಮೂಲಕ ವಿಶೇಷ ತರಬೇತಿ ನೀಡಲಿದ್ದು, ತದನಂತರವಷ್ಟೇ ವಿವಿಧ ಇಲಾಖೆಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ. ಇನ್ನು ರೋಜ್ಗಾರ್ ಮೇಳವು ದೇಶದಲ್ಲಿ ವಿವಿಧ ರೀತಿಯ ಉದ್ಯೋಗಾವಕಾಶ ಸೃಷ್ಟಿಯ ಗುರಿ ಹೊಂದಿದ್ದು, ಯುವಶಕ್ತಿಯನ್ನು ಸಶಕ್ತೀಕರಣಗೊಳಿಸಲು ಸಾಕಷ್ಟು ಸಹಕಾರಿಯಾಗುತ್ತಿದೆ.
ರೋಜ್ಗಾರ್ ಮೇಳದ ಮೂಲಕ ಕಳೆದ ಅಕ್ಟೋಬರ್ ನಲ್ಲಿ ಸುಮಾರು 75 ಸಾವಿರ ಮಂದಿಗೆ ಉದ್ಯೋಗ ಪತ್ರಗಳನ್ನು ನೀಡಿದ್ದ ಕೇಂದ್ರ ಸರ್ಕಾರವು ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸೃಷ್ಠಿಸುವ ಗುರಿಹೊಂದಿದ್ದು, ಇದು ಯುವಜನತೆಗೆ ಉತ್ತಮ ಅವಕಾಶ ಒದಗಿಸುವಲ್ಲಿ ಸಹಕಾರಿಯಾಗಲಿದೆ.