ದೆಹಲಿಯಲ್ಲಿ ನಿನ್ನೆಯಿಂದ ಆರಂಭವಾಗಿರುವ ಜಿ20 ಶೃಂಗಸಭೆ ಮುಕ್ತಾಯಗೊಂಡಿದ್ದು, ನವೆಂಬರ್ನಲ್ಲಿ ವರ್ಚ್ಯುವಲ್ ಸಭೆ ನಡೆಯಲಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಅಧ್ಯಕ್ಷ ಲುಲಾಗೆ ಹಸ್ತಾಂತರಿಸಿದರು. ಮುಂದಿನ ವರ್ಷ ಬ್ರೆಜಿಲ್ನಲ್ಲಿ ಜಿ20 ಸಮ್ಮೇಳನವನ್ನು ಆಯೋಜಿಸಲಾಗುವುದು, ಆದರೆ ನವೆಂಬರ್ ಅಂತ್ಯದವರೆಗೆ ಅಧ್ಯಕ್ಷ ಸ್ಥಾನ ಭಾರತದೊಂದಿಗೆ ಇರಲಿದೆ.
ನವೆಂಬರ್ ವರೆಗೂ ಜಿ20 ಅಧ್ಯಕ್ಷ ಜವಾಬ್ದಾರಿ ಭಾರತದೊಂದಿಗಿರಲಿದೆ, ಇನ್ನೂ ಎರಡೂವರೆ ತಿಂಗಳು ಬಾಕಿ ಇದೆ, ಈ ಅವಧಿಯಲ್ಲಿ ಅನೇಕ ವಿಷಯಗಳನ್ನಿಟ್ಟುಕೊಂಡು ಚರ್ಚೆ ನಡೆಸಬೇಕಿದೆ. ಬಂದಿರುವ ಸಲಹೆಗಳನ್ನು ಮತ್ತೊಮ್ಮೆ ನೋಡುವುದು ಹಾಗೂ ಅವುಗಳ ಪ್ರಗತಿಯನ್ನು ಹೇಗೆ ವೇಗಗೊಳಿಸಬಹುದು ಎಂಬುದನ್ನು ಗಮನಿಸುವುದು ನಮ್ಮ ಜವಾಬ್ದಾರಿಯಾಗಿದೆ. ನವೆಂಬರ್ ಅಂತ್ಯದಲ್ಲಿ ಜಿ20 ವರ್ಚ್ಯುವಲ್ ಅಧಿವೇಶನವನ್ನು ನಡೆಸಲು ನಿರ್ಧರಿಸಲಾಗಿದೆ.
ಇಂದು ಮುಂಜಾನೆ ವಿಶ್ವ ನಾಯಕರು ರಾಜ್ಘಾಟ್ಗೆ ಭೇಟಿ ನೀಡಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದರು. ನವದೆಹಲಿಯ ಭಾರತ್ ಮಂಟಪಂ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಲಾಗುತ್ತಿರುವ 18 ನೇ ಜಿ 20 ಶೃಂಗಸಭೆಯ ಮೊದಲ ದಿನದಂದು ಪ್ರಧಾನಿ ಮೋದಿ ಅವರು ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ 30 ಕ್ಕೂ ಹೆಚ್ಚು ದೇಶಗಳು ಮತ್ತು ಸಂಸ್ಥೆಗಳ ನಾಯಕರಿಗೆ ಆತಿಥ್ಯ ನೀಡಿದರು.
ಮತ್ತಷ್ಟು ಓದಿ: ಬ್ರೆಜಿಲ್ನಲ್ಲಿ ಮುಂದಿನ ಜಿ20 ಶೃಂಗಸಭೆ: ಬ್ರೆಜಿಲ್ ಅಧ್ಯಕ್ಷ ಲುಲಾಗೆ ಜವಾಬ್ದಾರಿ ಹಸ್ತಾಂತರಿಸಿದ ಪ್ರಧಾನಿ ಮೋದಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಜಿ 20 ಸ್ಥಳದಲ್ಲಿ ಸುಮಾರು 400 ಅತಿಥಿಗಳಿಗೆ ಅದ್ಧೂರಿ ಭೋಜನವನ್ನು ಆಯೋಜಿಸುವುದರೊಂದಿಗೆ ದಿನವು ಮುಕ್ತಾಯಗೊಂಡಿತ್ತು, ಮೋದಿ ಅವರು ಸ್ವಾಗತ ವೇದಿಕೆಯಿಂದ ಜಾಗತಿಕ ನಾಯಕರನ್ನು ಸ್ವಾಗತಿಸಿದರು, ಜತೆಗೆ ಬಿಹಾರದ ನಳಂದ ವಿಶ್ವವಿದ್ಯಾಲಯದ ವಿಶೇಷತೆಗಳನ್ನು ಪ್ರದರ್ಶಿಸಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ