ರಾಜ್ಯಸಭೆಯೊಳಗೆ ಗಲಾಟೆ, ಹೊರಗೆ ಹರಟೆ !; ಕಲಾಪ ಮುಂದೂಡುತ್ತಿದ್ದಂತೆ ಒಟ್ಟಿಗೇ ಕುಳಿತು ಮಾತುಕತೆ ನಡೆಸಿದ ರಾಜಕೀಯ ಪ್ರತಿಸ್ಪರ್ಧಿಗಳು

| Updated By: Lakshmi Hegde

Updated on: Apr 07, 2022 | 3:15 PM

ಇಂದು ರಾಜ್ಯ ಸಭೆ ಕಲಾಪದ ವೇಳೆ ಶಿವಸೇನೆ ಸೇರಿ ಇನ್ನಿತರ ಪಕ್ಷಗಳ ನಾಯಕರು ಮೊದಲು ಇಂಧನ ಬೆಲೆ ಏರಿಕೆಯ ಬಗ್ಗೆ ತಗಾದೆ ತೆಗೆದರು. ಅದಾದ ನಂತರ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಪ್ರತಿದಿನ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗಲಾಟೆ ಶುರು ಮಾಡಿದರು.

ರಾಜ್ಯಸಭೆಯೊಳಗೆ ಗಲಾಟೆ, ಹೊರಗೆ ಹರಟೆ !; ಕಲಾಪ ಮುಂದೂಡುತ್ತಿದ್ದಂತೆ ಒಟ್ಟಿಗೇ ಕುಳಿತು ಮಾತುಕತೆ ನಡೆಸಿದ ರಾಜಕೀಯ ಪ್ರತಿಸ್ಪರ್ಧಿಗಳು
ಪ್ರಧಾನಿ ಮೋದಿ ಪ್ರತಿಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸುತ್ತಿರುವುದು
Follow us on

ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ವಿವಿಧ ಪ್ರತಿಪಕ್ಷಗಳ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಿತ್ಯ ವಸ್ತುಗಳ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಇಂದು ರಾಜ್ಯಸಭೆಯಲ್ಲಿ ಗಲಾಟೆ, ಗದ್ದಲ ಜಾಸ್ತಿಯಾಗಿತ್ತು. ಹೀಗಾಗಿ ಕಲಾಪವನ್ನು ಮುಂದೂಡಲಾಗಿತ್ತು. ಕಲಾಪ ಮುಂದೂಡಿದ್ದರಿಂದ ಅದೇ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಪಕ್ಷಗಳ ಮುಖ್ಯಸ್ಥರನ್ನು ಭೇಟಿ ಮಾಡಿದ್ದಾರೆ. ನ್ಯಾಶನಲ್​ ಕಾನ್ಫರೆನ್ಸ್​ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಸಮಾಜವಾದಿ ಪಾರ್ಟಿ ಸಂಸ್ಥಾಪಕ ಮುಲಾಯಂ ಸಿಂಗ್​ ಯಾದವ್​, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಅವರು ಒಂದೆಡೆ ಕುಳಿತು ಮಾತನಾಡುತ್ತಿರುವ ಫೋಟೋಗಳನ್ನು ಎಎನ್​ಐ ಪೋಸ್ಟ್ ಮಾಡಿದೆ.

ಇಂದು ರಾಜ್ಯ ಸಭೆ ಕಲಾಪದ ವೇಳೆ ಶಿವಸೇನೆ ಸೇರಿ ಇನ್ನಿತರ ಪಕ್ಷಗಳ ನಾಯಕರು ಮೊದಲು ಇಂಧನ ಬೆಲೆ ಏರಿಕೆಯ ಬಗ್ಗೆ ತಗಾದೆ ತೆಗೆದರು. ಅದಾದ ನಂತರ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಪ್ರತಿದಿನ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗಲಾಟೆ ಶುರು ಮಾಡಿದರು. ಇನ್ನು ಬಿಜೆಪಿ ನಾಯಕ ಕಿರಿತ್​ ಸೋಮಯ್ಯ, ಐಎನ್​ಎಸ್​ ವಿಕ್ರಾಂತ್​ ಮಾರಾಟ ತಡೆಯಲು ಹಣ ಸಂಗ್ರಹಿಸಿ, ಅದನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪವೂ ದೊಡ್ಡಮಟ್ಟದ ಗದ್ದಲ ಸೃಷ್ಟಿಸಿತು. ಇಷ್ಟೆಲ್ಲ ಆದ ಬಳಿಕ ಸಭಾಪತಿಗಳು ಕಲಾಪವನ್ನು ಮುಂದೂಡಿದರು. ಕಿರಿತ್ ಸೋಮಯ್ಯ ಮತ್ತು ಅವರ ಪುತ್ರನ ವಿರುದ್ಧ ಇದೇ ವಿಚಾರಕ್ಕೆ ಪ್ರಕರಣ ಕೂಡ ದಾಖಲಾಗಿದೆ.

ಅಂದಹಾಗೇ, ಇದೀಗ ರಾಜ್ಯಸಭೆಯಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದೆ. ಜನವರಿ 31ರಿಂದ ಅಧಿವೇಶನ ಶುರುವಾಗಿದ್ದು, ಮೊದಲ ಹಂತ ಫೆ.11ಕ್ಕೆ ಮುಕ್ತಾಯಗೊಂಡಿತ್ತು.  ಹಾಗೇ, ಬಜೆಟ್ ಅಧಿವೇಶನದ ಎರಡನೇ ಅವಧಿ ಮಾರ್ಚ್​ 14ರಿಂದ ಪ್ರಾರಂಭವಾಗಿದ್ದು, ಏಪ್ರಿಲ್​ 8 ಕೊನೇ ದಿನ.

ಇದನ್ನೂ ಓದಿ: ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯೋ ಅಥವಾ ಅಲ್ ​ಖೈದಾ ಮುಖ್ಯಸ್ಥನಾ? ರಾಜ್ಯದ ಜನರೇ ತೀರ್ಮಾನಿಸಬೇಕು -ಕೆಎಸ್ ಈಶ್ವರಪ್ಪ