ದೆಹಲಿ: ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಆಡಿಯೋ ಸಂದೇಶ ನೀಡಿದ್ದಾರೆ. ತಮ್ಮ ಸರ್ಕಾರದ ಮೊದಲ ವರ್ಷದ ಸಾಧನೆಗಳ ಬಗ್ಗೆ ಪ್ರಧಾನಿ ಮಾಹಿತಿ ನೀಡಿದ್ದಾರೆ.
ಸಂವಿಧಾನದ 370ನೇ ವಿಧಿ ರದ್ದು ಮಾಡಿರುವುದು, ತ್ರಿವಳಿ ತಲಾಖ್ ರದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಬಗ್ಗೆ ಪ್ರಧಾನಿ ಮಾಹಿತಿ ಕೊಟ್ಟಿದ್ದಾರೆ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆ ಸೃಷ್ಟಿ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಲಾಕ್ಡೌನ್ ನಿಯಮ, ಮಾರ್ಗಸೂಚಿಗಳನ್ನ ಪಾಲಿಸಿ:
ಕೊರೊನಾ ಸೋಂಕನ್ನು ನಾವು ಸಮರ್ಥವಾಗಿ ಎದುರಿಸಿದ್ದೇವೆ. ಆದರೆ ದೇಶದಲ್ಲಿ ವಲಸಿಗ ಕಾರ್ಮಿಕರಿಗೆ ತೊಂದರೆ ಆಗಿದೆ. ನಾವು ಎದುರಿಸುತ್ತಿರುವ ಅನಾನುಕೂಲ ದುರಂತವಾಗಬಾರದು. ದುರಂತವಾಗಿ ಪರಿವರ್ತನೆ ಆಗದಂತೆ ನೋಡಿಕೊಳ್ಳಬೇಕು. ಹೀಗಾಗಿ ಭಾರತೀಯರು ಲಾಕ್ಡೌನ್ ನಿಯಮ, ಮಾರ್ಗಸೂಚಿಗಳನ್ನು ಪಾಲಿಸಿ. ಬೇರೆ ದೇಶಗಳಿಗಿಂತ ಭಾರತದ ಸ್ಥಿತಿ ಉತ್ತಮವಾಗಿದೆ.
ಆತ್ಮ ನಿರ್ಭರ ಅಭಿಯಾನಕ್ಕೆ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಲಾಗಿದೆ. ಕೊರೊನಾ ವಿರುದ್ಧದ ಹೋರಾಟ ಸುದೀರ್ಘವಾಗಿರುತ್ತೆ. ಈ ಹೋರಾಟದಲ್ಲಿ ಸಂಘಟಿತರಾಗಿ ಜಯಸಾಧಿಸೋಣ ಎಂದು ಮೋದಿ ಕರೆ ನೀಡಿದರು. ಇದೇ ವೇಳೆ ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಚಂಡಮಾರುತದಿಂದ ಭಾರೀ ಹಾನಿಯಾಗಿರುವ ಬಗ್ಗೆಯೂ ಉಲ್ಲೇಖಿಸಿದರು.
Published On - 9:45 am, Sat, 30 May 20