ನವದೆಹಲಿ, (ಫೆಬ್ರವರಿ 26): ಟಿವಿ9 ನೆಟ್ವರ್ಕ್ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (What India Thinks Today’ Global Summit) ಜಾಗತಿಕ ಶೃಂಗಸಭೆಯ ಎರಡನೇ ದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (narendra modi) ಅವರು ಭಾಗವಹಿಸಿದರು. ಈ ವೇಳೆ ಮಾತನಾಡಿದ ಮೋದಿ, ಮೊದಲಿಗೆ ಟಿವಿ9 ಸುದ್ದಿ ಸಂಸ್ಥೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ದೇಶದ ಹಲವಾರು ಭಾಷೆಗಳಲ್ಲಿ ಟಿವಿ9 ಸುದ್ದಿ ಪ್ರಸಾರ ಮಾಡುತ್ತಿದೆ. ಇದಕ್ಕಾಗಿ ಟಿವಿ9 ನೆಟ್ವರ್ಕ್ನ ಎಲ್ಲಾ ಸಿಬ್ಬಂದಿಗೆ ನನ್ನ ನಮಸ್ಕಾರಗಳು ಎಂದ ಮೋದಿ, ಇಡೀ ವಿಶ್ವಕ್ಕೆ ಭಾರತದ 10 ವರ್ಷದ ಪರಿಶ್ರಮ ಕಾಣುತ್ತಿದೆ. ಕಳೆದ 10 ವರ್ಷದಲ್ಲಿ ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಬದಲಾಗಿದೆ. ದೇಶದ ಸಾಮಾನ್ಯ ವ್ಯಕ್ತಿಯನ್ನು ಬೇರೆ ದೇಶಗಳು ನೋಡುವ ದೃಷ್ಟಿ ಬದಲಾಗಿದೆ. ಕೆಂಪು ಕೋಟೆಯಲ್ಲಿ ನಿಂತು ಭಾರತದ ಬಗ್ಗೆ ಮಾತನಾಡುತ್ತಿದ್ದರು. ಭಾರತ ದೇಶದ ಪ್ರಜೆಗಳು ಸೋಮಾರಿಗಳೆಂದು ಭಾಷಣ ಮಾಡಿದ್ದರು. ಈಗ ಇಡೀ ವಿಶ್ವವೇ ಭಾರತದ ಜೊತೆ ಸ್ನೇಹ ಮಾಡಲು ಮತ್ತು ವ್ಯವಹರಿಸಲು ಇಚ್ಚಿಸುತ್ತಿದೆ ಎಂದು ಹೇಳಿದರು.
10 ವರ್ಷದಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಬದಲಾವಣೆ ಆಗಿದೆ. 2024ರಲ್ಲಿ ದೇಶದ ಮ್ಯೂಚುಯಲ್ ಫಂಡ್ನಲ್ಲಿ ಹೆಚ್ಚು ಹಣ ಸಂದಾಯ ಮಾಡಿದೆ. ಭಾರತೀಯನ ಆಲೋಚನೆ ಎಲ್ಲವನ್ನು ಸಾಧಿಸುವ ಛಲ ಹೆಚ್ಚಾಗಿದೆ. 10 ವರ್ಷದಲ್ಲಿ ಸರ್ಕಾರದ ಚಿಂತನೆಯಿಂದ ಆಡಳಿತ ಸುಧಾರಣೆ ಆಗಿದೆ. ಪಂಡಿತ್ ನೆಹರು ಮಾಡಿದ ಡ್ಯಾಂ ಶಿಲಾನ್ಯಾಸ 60 ವರ್ಷದವರೆಗೂ ನೆನಗುದಿಗೆ ಬಿದ್ದಿತ್ತು. ಈಗ ಸರ್ದಾರ ಸರೋವರದ ಕಾರ್ಯವನ್ನು ನಮ್ಮ ಸರ್ಕಾರ ಪೂರ್ಣಗೊಳಿಸಿದೆ. ಪ್ರತಿ ತಿಂಗಳ ನಾನು ದಶಕದಿಂದ ಬಾಕಿ ಇರುವ ಫೈಲ್ಗಳ ಅವಲೋಕನ ಮಾಡುತ್ತೇನೆ. ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಇರುವ ಫೈಲ್ಗಳನ್ನು ಖುದ್ದು ನಾನೇ ನೋಡುತ್ತೇನೆ. ಕಳೆದ ಹತ್ತು ವರ್ಷಗಳಲ್ಲಿ 17 ಲಕ್ಷ ಕೋಟಿ ರೂಪಾಯಿ ಯೋಜನೆಗಳ ಕಡತಗಳನ್ನು ಪರಿಶೀಲಿಸಿದ್ದೇನೆ. ಆದ್ದರಿಂದ ಈ ಯೋಜನೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.
ಹಿಂದಿನ ಸರ್ಕಾರಗಳ ಅವಧಿಯಲ್ಲಿ ಭಾರತವು ರಿವರ್ಸ್ ಗೇರ್ನಲ್ಲಿತ್ತು. ಉತ್ತರ ಪ್ರದೇಶದಲ್ಲಿ ಸರಯೂ ಕಾಲುವೆ ಯೋಜನೆಗೆ 80ರ ದಶಕದಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಆದ್ರೆ, ಈ ಯೋಜನೆಯು 4 ದಶಕಗಳಿಂದ ಹಾಗೇ ಇತ್ತು. ನಮ್ಮ ಸರ್ಕಾರಕ್ಕೆ ಬಂದ ನಂತರ ಅದನ್ನು ಪೂರ್ಣಗೊಳಿಸಿದ್ದೇವೆ. 60ರ ದಶಕದಲ್ಲಿ ಸರ್ದಾರ್ ಸರೋವರ ಯೋಜನೆಯ ಅಡಿಗಲ್ಲು ಹಾಕಲಾಯಿತ್ತು. ಅದರ ಕೆಲಸವೂ ಬಾಕಿ ಉಳಿದಿತ್ತು. ನಮ್ಮ ಸರ್ಕಾರ ರಚನೆಯಾದ ನಂತರ ಆ ಅಣೆಕಟ್ಟಿನ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡಿದ್ದೇವೆ.. 2002ರಲ್ಲಿ ಅಟಲ್ ಸುರಂಗಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ ಈ ಕೆಲಸವೂ ಸ್ಥಗಿತಗೊಂಡಿತ್ತು. ಅದನ್ನು ಸಹ ನಮ್ಮ ಸರ್ಕಾರ ಪೂರ್ಣಗೊಳಿಸಿದೆ. ಅಸ್ಸಾಂನ ಬೋಡಿ ಬಿಲ್ ಸೇತುವೆಯನ್ನು ನಮ್ಮ ಸರ್ಕಾರ ಬಂದ ನಂತರ ಅದನ್ನು ಪೂರ್ಣಗೊಳಿಸಿದ್ದೇವೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅಪೂರ್ಣವಾಗಿರುವ ನೂರಾರು ಯೋಜನೆಗಳನ್ನು ನಾನು ಲೆಕ್ಕ ಹಾಕಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ಗೆ ಟಾಂಗ್ ಕೊಟ್ಟರು.
ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರ ಮತ್ತು ವ್ಯವಸ್ಥೆಯಲ್ಲಿ ಭಾರತದ ಜನರ ನಂಬಿಕೆ ಹೆಚ್ಚಾಗಿದೆ. ಜನರಿಗೆ ತಮ್ಮ ಮೇಲೆ ಇರುವಷ್ಟೇ ನಂಬಿಕೆ ದೇಶದ ಮೇಲೆ ಇದೆ, ಪ್ರತಿಯೊಬ್ಬ ಭಾರತೀಯನೂ ನಾನು ಏನು ಬೇಕಾದರೂ ಮಾಡಬಲ್ಲೆ, ನನಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಯೋಚಿಸುತ್ತಿರುತ್ತಾನೆ. ಜನರ ಮನಸ್ಥಿತಿ ಮತ್ತು ನಂಬಿಕೆಯ ಬದಲಾವಣೆಗೆ ನಮ್ಮ ಸರ್ಕಾರದ ಕಾರ್ಯ ಸಂಸ್ಕೃತಿಯೇ ದೊಡ್ಡ ಕಾರಣ. ಅದೇ ಅಧಿಕಾರಿಗಳಿದ್ದಾರೆ, ಅದೇ ಕಚೇರಿಗಳಿವೆ, ಅದೇ ಕಡತಗಳಿವೆ. ಸರ್ಕಾರಿ ಕಚೇರಿಗಳು ಸಮಸ್ಯೆಯಾಗಿಲ್ಲ. ಬದಲಾಗಿ ದೇಶದ ಜನರಿಗೆ ಸಹಾಯವಾಗುತ್ತಿವೆ ಎಂದರು.
ದೇಶದಲ್ಲಿ ಹಲವಾರು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಿದ್ದೇವೆ. ಲಕ್ಷದ್ವೀಪದಲ್ಲಿ ಆಪಟಿಕಲ್ ಕೇಬಲ್ ಅಳವಡಿಸಿದ್ದೇವೆ. ಲಕ್ಷದ್ವೀಪದಲ್ಲಿ ಆಪಟಿಕಲ್ ಕೇಬಲ್ ಅಳವಡಿಸುವುದು ಸವಾಲಿನ ಸಂಗತಿಯಾಗಿತ್ತು. ಭಾರದಲ್ಲಿ ಪ್ರತಿದಿನ 2 ಹೊಸ ಕಾಲೇಜು ಪ್ರಾರಂಭವಾಗುತ್ತಿವೆ. ಭಾರತದಲ್ಲಿ ಪ್ರತಿದಿನ 55 ಸಾವಿರ ಜನರನ್ನು ಬಡತನ ರೇಖೆಯಿಂದ ಹೊರಗೆ ತಂದಿದ್ದೇವೆ. ಈವರೆಗೆ 25 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರ ತರುವ ಕಾರ್ಯ ಮಾಡಿದ್ದೇವೆ. ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಕೊಳ್ಳುವ ಶಕ್ತಿ ಹೆಚ್ಚಾಗಿದೆ. ನಮ್ಮ ಸರ್ಕಾರ ಕೈಗೊಂಡ ಜನಪರ ಯೋಜನೆಗಳಿಂದ ಇದು ಸಾಧ್ಯವಾಗಿದೆ. ದೇಶದ ಜನರನ್ನು ಸಂಕಷ್ಟದಲ್ಲಿ ಇರಿಸಲು ಈ ಹಿಂದಿನ ಸರ್ಕಾರ ಯತ್ನಿಸಿತ್ತು. ಆದರೆ ನಮ್ಮ ಸರ್ಕಾರ ಇದಕ್ಕೆ ಅವಕಾಶ ನೀಡಿಲ್ಲ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಮೋದಿಯ ಗ್ಯಾರಂಟಿಯ ಬಗ್ಗೆ ಪ್ರತಿಯೊಬ್ಬರಿಗೂ ಸಿಗಲೇಬೇಕು. ನಾವು, ದೇಶವೇ ಪ್ರಥಮ ಎಂಬ ಸಿದ್ದಾಂತದಿಂದ ದೇಶ ನಡೆಸುತ್ತಿದ್ದೇವೆ. ತ್ರಿವಳಿ ತಲಾಖ್ ಅಂತಹ ಹಲವಾರು ಜನಪರ ಕಾರ್ಯಗಳನ್ನು ಮಾಡಿದೆ. 5ಜಿ ನೆಟ್ವರ್ಕ್ ಕ್ಷೇತ್ರದಲ್ಲಿ ಯೂರೋಪ ದೇಶವನ್ನು ಹಿಂದೆ ಹಾಕಿದೆ. ಭಾರತ ಮುಂದಿನ ಭವಿಷ್ಯದ ಹೆಚ್ಚು ಹೆಚ್ಚು ಆಲೋಚನೆ ಮಾಡುತ್ತಿದೆ ಎಂದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:22 pm, Mon, 26 February 24