‘ನನ್ನ ಹೃದಯದಲ್ಲಿ ಅಯೋಧ್ಯೆಯನ್ನಿರಿಸಿಕೊಂಡು ಮರಳಿದೆ’: ರಾಷ್ಟ್ರಪತಿ ಮುರ್ಮು ಪತ್ರಕ್ಕೆ ಪ್ರಧಾನಿ ಮೋದಿ ಉತ್ತರ

|

Updated on: Jan 23, 2024 | 7:21 PM

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪತ್ರಕ್ಕೆ ಮಂಗಳವಾರ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ ನಾನು ನನ್ನ ಹೃದಯದಲ್ಲಿ ಅಯೋಧ್ಯೆಯನ್ನಿರಿಸಿಕೊಂಡ ಮರಳಿದ್ದೇನೆ, ಅದು ಎಂದಿಗೂ ದೂರವಾಗುವುದಿಲ್ಲ. ನಾನು ಯಾತ್ರಿಕನಾಗಿ ಅಯೋಧ್ಯಾ ಧಾಮದ ಯಾತ್ರೆಯನ್ನು ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.

ನನ್ನ ಹೃದಯದಲ್ಲಿ ಅಯೋಧ್ಯೆಯನ್ನಿರಿಸಿಕೊಂಡು ಮರಳಿದೆ: ರಾಷ್ಟ್ರಪತಿ ಮುರ್ಮು ಪತ್ರಕ್ಕೆ ಪ್ರಧಾನಿ ಮೋದಿ ಉತ್ತರ
ನರೇಂದ್ರ ಮೋದಿ
Follow us on

ದೆಹಲಿ ಜನವರಿ 23:  ರಾಮಮಂದಿರದಲ್ಲಿ (Ram mandir) ರಾಮಲಲ್ಲಾ ‘ಪ್ರಾಣ ಪ್ರತಿಷ್ಠಾ’ ಕುರಿತ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಪತ್ರಕ್ಕೆ ಮಂಗಳವಾರ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ನಾನು ನನ್ನ ಹೃದಯದಲ್ಲಿ ಅಯೋಧ್ಯೆಯನ್ನಿರಿಸಿಕೊಂಡ ಮರಳಿದ್ದೇನೆ, ಅದು ಎಂದಿಗೂ ದೂರವಾಗುವುದಿಲ್ಲ ಎಂದು ಹೇಳಿದ್ದಾರೆ. ನಾನು ಯಾತ್ರಿಕನಾಗಿ ಅಯೋಧ್ಯಾ ಧಾಮದ ಯಾತ್ರೆಯನ್ನು ಕೈಗೊಂಡಿದ್ದೇನೆ. ಅಂತಹ ಭಕ್ತಿ ಮತ್ತು ಇತಿಹಾಸದ ಸಂಗಮವನ್ನು ಹೊಂದಿರುವ ಪವಿತ್ರ ಭೂಮಿಯನ್ನು ತಲುಪಿದ ನಂತರ ನಾನು ಪರವಶನಾಗಿದ್ದೆ.

ತಮ್ಮ ಪತ್ರದಲ್ಲಿ ಪಿಎಂ ಮೋದಿ, “ಎರಡು ದಿನಗಳ ಹಿಂದೆ ಗೌರವಾನ್ವಿತ ರಾಷ್ಟ್ರಪತಿಗಳಿಂದ ನನಗೆ ಸ್ಪೂರ್ತಿದಾಯಕ ಪತ್ರ ಬಂದಿತ್ತು. ಇಂದು ನಾನು ಪತ್ರದ ಮೂಲಕ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸಿದೆ” ಎಂದು ಹೇಳಿದ್ದಾರೆ. ಭಗವಾನ್ ರಾಮನ ಆದರ್ಶಗಳು ಭಾರತದ ಭವ್ಯ ಭವಿಷ್ಯದ ಆಧಾರವಾಗಿದೆ, ಅವರ ಶಕ್ತಿಯು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ದಾರಿ ಮಾಡಿಕೊಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 

ಭಾನುವಾರ ರಾಷ್ಟ್ರಪತಿ ಮುರ್ಮು ಅವರು ಪ್ರಾಣ ಪ್ರತಿಷ್ಠಾಕ್ಕೆ ಮುಂಚಿತವಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ಉದ್ಘಾಟನೆಗೆ ರಾಷ್ಟ್ರವ್ಯಾಪಿ ಸಂಭ್ರಮಾಚರಣೆಯ ವಾತಾವರಣವು ಭಾರತದ ಶಾಶ್ವತ ಆತ್ಮದ ಅನಿರ್ಬಂಧಿತ ಅಭಿವ್ಯಕ್ತಿಯಾಗಿದೆ ಮತ್ತು ದೇಶದ ಪುನರುತ್ಥಾನದಲ್ಲಿ ಹೊಸ ಚಕ್ರದ ಆರಂಭವಾಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿಗೆ ಬರೆದ ಎರಡು ಪುಟಗಳ ಪತ್ರದಲ್ಲಿ ರಾಷ್ಟ್ರಪತಿಗಳು, “ಪ್ರಭು ಶ್ರೀರಾಮನ ಜನ್ಮಸ್ಥಳದಲ್ಲಿ ನಿರ್ಮಿಸಲಾದ ಹೊಸ ದೇವಾಲಯದಲ್ಲಿ ಪ್ರಭು ಶ್ರೀರಾಮನ ‘ಮೂರ್ತಿ’ (ವಿಗ್ರಹ) ‘ಪ್ರಾಣ ಪ್ರತಿಷ್ಠಾ’ಕ್ಕೆ ಹೋಗಲು ನೀವು ಸಿದ್ಧರಾಗಿರುವಾಗ, ಪವಿತ್ರವಾದ ಆವರಣದಲ್ಲಿ ನೀವು ಇಡುವ ಪ್ರತಿಯೊಂದು ಹೆಜ್ಜೆಯೊಂದಿಗೆ ಸಾಧಿಸಲಾಗುವ ಅನನ್ಯ ನಾಗರಿಕತೆಯ ಪ್ರಯಾಣವನ್ನು ಮಾತ್ರ ನಾನು ಆಲೋಚಿಸಬಲ್ಲೆ ಎಂದಿದ್ದಾರೆ.

ಪ್ರಧಾನಮಂತ್ರಿ ಅವರು ಕೈಗೊಂಡಿರುವ 11 ದಿನಗಳ ಕಠಿಣ ‘ಅನುಷ್ಠಾನ’ವನ್ನು ಉಲ್ಲೇಖಿಸಿದ ಮುರ್ಮು, ಇದು ಪವಿತ್ರ ಆಚರಣೆ ಮಾತ್ರವಲ್ಲದೆ ತ್ಯಾಗ ಮತ್ತು ಭಗವಾನ್ ರಾಮನಿಗೆ ಸಲ್ಲಿಸುವ ಅತ್ಯುನ್ನತ ಆಧ್ಯಾತ್ಮಿಕ ಕ್ರಿಯೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ರಾಮೋತ್ಸವ ರಾಜಕೀಯೇತರ, ಅದ್ದೂರಿ ಮತ್ತು ಇತಿಹಾಸದಲ್ಲಿ ದಾಖಲಾಗಬಹುದಾದ ಕಾರ್ಯಕ್ರಮವಾಗಲಿದೆ: ಇಕ್ಬಾಲ್ ಹುಸೇನ್

ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ ಮುರ್ಮು, ಅಯೋಧ್ಯಾ ಧಾಮದಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರದ ಉದ್ಘಾಟನೆಯ ಸುತ್ತ ರಾಷ್ಟ್ರವ್ಯಾಪಿ ಸಂಭ್ರಮಾಚರಣೆಯ ವಾತಾವರಣವು ಭಾರತದ ಶಾಶ್ವತ ಆತ್ಮದ ಅನಿರ್ಬಂಧಿತ ಅಭಿವ್ಯಕ್ತಿಯಾಗಿದೆ ಎಂದು ಹೇಳಿದರು.
ನಮ್ಮ ರಾಷ್ಟ್ರದ ಪುನರುತ್ಥಾನದಲ್ಲಿ ಹೊಸ ಕಾಲದ ಆರಂಭವನ್ನು ವೀಕ್ಷಿಸಲು ನಾವೆಲ್ಲರೂ ಅದೃಷ್ಟವಂತರು. ಭಗವಾನ್ ರಾಮನ ಸಾರ್ವತ್ರಿಕ ಮೌಲ್ಯಗಳಾದ ಧೈರ್ಯ, ಸಹಾನುಭೂತಿ ಮತ್ತು ಕರ್ತವ್ಯದಲ್ಲಿ ನಿರಂತರ ಗಮನವನ್ನು ಈ ಭವ್ಯವಾದ ದೇವಾಲಯದ ಮೂಲಕ ಜನರಿಗೆ ಹತ್ತಿರವಾಗಿಸುತ್ತದೆ ಎಂದು ಮುರ್ಮು ಹೇಳಿದರು.

“ಪ್ರಭು ಶ್ರೀ ರಾಮ್ ನಮ್ಮ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಅತ್ಯುತ್ತಮ ಅಂಶಗಳನ್ನು ಸೂಚಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಅವನು ಕೆಟ್ಟದ್ದರೊಂದಿಗೆ ನಿರಂತರ ಹೋರಾಟದಲ್ಲಿರುವ ಒಳ್ಳೆಯದನ್ನು ಪ್ರತಿನಿಧಿಸುತ್ತಾನೆ. ಅವನ ಜೀವನ ಮತ್ತು ತತ್ವಗಳು ನಮ್ಮ ಇತಿಹಾಸದ ಅನೇಕ ಘಟನೆಗಳ ಮೇಲೆ ಪ್ರಭಾವ ಬೀರಿವೆ ಮತ್ತು ರಾಷ್ಟ್ರ ನಿರ್ಮಾಣಕಾರರನ್ನು ಪ್ರೇರೇಪಿಸಿದೆ” ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Tue, 23 January 24