Krishnaguru Eknaam Akhanda Kirtan: ಅಸ್ಸಾಂನ ಕೃಷ್ಣಗುರು ಸೇವಾಶ್ರಮದಲ್ಲಿ ನಡೆಯಲಿರುವ ಅಖಂಡ ಕೀರ್ತನೆಯಲ್ಲಿ ಪ್ರಧಾನಿ ಮೋದಿ ಭಾಗಿ

|

Updated on: Feb 03, 2023 | 7:39 AM

ಅಸ್ಸಾಂನ ಬಾರ್ಪೇಟಾದಲ್ಲಿರುವ ಕೃಷ್ಣಗುರು ಸೇವಾಶ್ರಮದಲ್ಲಿ ನಡೆಯಲಿರುವ ವಿಶ್ವ ಶಾಂತಿಗಾಗಿ ಕೃಷ್ಣಗುರು ಏಕನಾಮ ಅಖಂಡ ಕೀರ್ತನೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.

Krishnaguru Eknaam Akhanda Kirtan: ಅಸ್ಸಾಂನ ಕೃಷ್ಣಗುರು ಸೇವಾಶ್ರಮದಲ್ಲಿ ನಡೆಯಲಿರುವ ಅಖಂಡ ಕೀರ್ತನೆಯಲ್ಲಿ ಪ್ರಧಾನಿ ಮೋದಿ ಭಾಗಿ
ನರೇಂದ್ರ ಮೋದಿ
Follow us on

ಅಸ್ಸಾಂನ ಬಾರ್ಪೇಟಾದಲ್ಲಿರುವ ಕೃಷ್ಣಗುರು ಸೇವಾಶ್ರಮದಲ್ಲಿ ನಡೆಯಲಿರುವ ವಿಶ್ವ ಶಾಂತಿಗಾಗಿ ಕೃಷ್ಣಗುರು ಏಕನಾಮ ಅಖಂಡ ಕೀರ್ತನೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಪ್ರಧಾನಮಂತ್ರಿಯವರು ಕೃಷ್ಣಗುರು ಸೇವಾಶ್ರಮದ ಭಕ್ತರನ್ನುದ್ದೇಶಿಸಿ ಭಾಷಣ ಕೂಡಾ ಮಾಡಲಿದ್ದಾರೆ.

ಪರಮಗುರು ಕೃಷ್ಣಗುರು ಈಶ್ವರ್ ಅವರು 1974ರಲ್ಲಿ ಅಸ್ಸಾಂನ ಬಾರ್ಪೇಟಾದ ನಸಾತ್ರಾ ಗ್ರಾಮದಲ್ಲಿ ಕೃಷ್ಣಗುರು ಸೇವಾಶ್ರಮವನ್ನು ಸ್ಥಾಪಿಸಿದರು. ಅವರು ಮಹಾನ್ ವೈಷ್ಣವ ಸಂತ ಶ್ರೀ ಶಂಕರದೇವ ಅವರ ಅನುಯಾಯಿಯಾಗಿದ್ದ ಮಹಾವೈಷ್ಣವ ಮನೋಹರದೇವ ಅವರ ಒಂಬತ್ತನೇ ವಂಶಸ್ಥರಾಗಿದ್ದಾರೆ.

ವಿಶ್ವಶಾಂತಿಗಾಗಿ ಕೃಷ್ಣಗುರು ಏಕನಾಮ ಅಖಂಡ ಕೀರ್ತನೆಯು ಕೃಷ್ಣಗುರು ಸೇವಾಶ್ರಮದಲ್ಲಿ ಒಂದು ತಿಂಗಳ ಕಾಲ ನಡೆಯುತ್ತಿದೆ.