ಬಸ್ಸಿಗಾಗಿ ಕಾಯುತ್ತಿದ್ದ ಬಾಲಕಿ, ಯಮನಂತೆ ಬಂದ ಬೈಕ್​ ಸವಾರ, ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಉಸಿರು ಚೆಲ್ಲಿದ ಬಾಲೆ

ಬಸ್ಸಿಗಾಗಿ ಕಾಯುತ್ತಿದ್ದ ಬಾಲಕಿಗೆ ರಭಸವಾಗಿ ಬಂದ ಬೈಕ್​ ಗುದ್ದಿ 70 ಮೀಟರ್​ಗಳಷ್ಟು ದೂರ ಎಳೆದೊಯ್ದ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಾರಾಣಸಿಯಲ್ಲಿ ನಡೆದಿದೆ.

ಬಸ್ಸಿಗಾಗಿ ಕಾಯುತ್ತಿದ್ದ ಬಾಲಕಿ, ಯಮನಂತೆ ಬಂದ ಬೈಕ್​ ಸವಾರ, ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಉಸಿರು ಚೆಲ್ಲಿದ ಬಾಲೆ

Updated on: May 24, 2024 | 10:58 AM

ತಂದೆಯ ಕೈಹಿಡಿದು ಬಸ್ಸಿಗಾಗಿ ಕಾಯುತ್ತಿದ್ದ ಬಾಲಕಿಗೆ ಬೈಕ್​ ಡಿಕ್ಕಿ ಹೊಡೆದು 70 ಮೀಟರ್​ ಎಳೆದೊಯ್ದ ಘಟನೆ ವಾರಾಣಸಿಯಲ್ಲಿ ನಡೆದಿದೆ. ಇದೀಗ ಅಪಘಾತದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ತಂದೆ ಪೊಲೀಸ್​ ಕಾನ್​ಸ್ಟೆಬಲ್​ ಆಗಿದ್ದು, ಮಗಳನ್ನು ಬಸ್ಸು ಹತ್ತಿಸಲು ಬಂದಿದ್ದರು, ತಂದೆಯ ಜತೆಗೆ ರಸ್ತೆ ಬದಿಗೆ ನಿಂತಿದ್ದ ಬಾಲಕಿಗೆ ಬೈಕ್​ ಡಿಕ್ಕಿ ಹೊಡೆದಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಘಟನೆ ಸೆರೆಯಾಗಿದೆ.

ನಿನ್ನೆ ಸಂಜೆ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಕರಣ್ ಗುಪ್ತಾ ಚೌಬೆಪುರದ ಅತ್ಯಂತ ಜನನಿಬಿಡ ರಸ್ತೆಯಲ್ಲಿ ಮಗಳು ಕಾವ್ಯಾ ಅವರೊಂದಿಗೆ ಪಾಂಡೆಪುರಕ್ಕೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದರು.

ಅಷ್ಟರಲ್ಲಿ ಮಗಳು ಕಾವ್ಯಾ ರಸ್ತೆ ಬದಿಯಿಂದ ಸ್ವಲ್ಪ ದೂರ ಮುಂದೆ ಸಾಗಿದಾಗ ಎದುರಿನಿಂದ ಅತೀ ವೇಗದಲ್ಲಿ ಬಂದ ಬೈಕ್ ಸವಾರನೊಬ್ಬ ಮುಂದೆ ಸಾಗಿ ಕಾವ್ಯಾಗೆ ಡಿಕ್ಕಿ ಹೊಡೆದು ಎಳೆದೊಯ್ದಿದ್ದಾನೆ.

ಬೈಕ್ ಬಲವಾಗಿ ಡಿಕ್ಕಿ ಹೊಡೆದ ರಭಸಕ್ಕೆ ಕ್ಷಣಾರ್ಧದಲ್ಲಿ ಕಾವ್ಯ ಕೆಳಗೆ ಬಿದ್ದಿದ್ದಾಳೆ. ಬಳಿಕ ಅಜಾಗರೂಕತೆಯಿಂದ ಬೈಕ್ ಚಲಾಯಿಸುತ್ತಿದ್ದ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ.

ಮತ್ತಷ್ಟು ಓದಿ: ಹರ್ಯಾಣ: ಮಿನಿ ಬಸ್​ಗೆ ಲಾರಿ ಡಿಕ್ಕಿ, 7 ಮಂದಿ ಸಾವು, 25 ಜನರಿಗೆ ಗಂಭೀರ ಗಾಯ

ಈ ಘಟನೆಯ ನಂತರ ಪ್ರಸ್ತುತ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ತಂದೆ ಕರಣ್ ತಕ್ಷಣ ಮಗಳೊಂದಿಗೆ ಆಸ್ಪತ್ರೆಗೆ ತಲುಪಿದರು, ಅಲ್ಲಿ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

ವಿಡಿಯೋ:

ಪೊಲೀಸರು ಬೈಕ್ ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ತನಿಖಾ ಅಂಶಗಳ ಆಧಾರದ ಮೇಲೆ ಬೈಕ್ ಚಾಲಕನನ್ನು ಹುಡುಕಲಾಗುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ