ತ್ರಿಪುರದಲ್ಲಿ ಎಲ್ಲ ಮಸೀದಿಗಳಿಗೂ ಪೊಲೀಸ್​ ಬಿಗಿ ಭದ್ರತೆ; ಎರಡು ಸ್ಥಳಗಳಲ್ಲಿ ಸೆಕ್ಷನ್​ 144 ಜಾರಿ

| Updated By: Lakshmi Hegde

Updated on: Oct 28, 2021 | 5:13 PM

ಮಂಗಳವಾರ ವಿಎಚ್​​ಪಿ ರ್ಯಾಲಿ ನಡೆಯುತ್ತಿದ್ದ ವೇಳೆ ಪಾಣಿಸಾಗರ ಉಪವಿಭಾಗದ ಚಮ್ಟಿಲ್ಲಾ ಎಂಬ ಪ್ರದೇಶದಲ್ಲಿ ಮಸೀದಿಯೊಂದನ್ನು ಧ್ವಂಸ ಮಾಡಲಾಗಿತ್ತು. ಅದಾದ ಮೇಲೆ ಕೆಲವು ಅಂಗಡಿಗಳು, ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು.

ತ್ರಿಪುರದಲ್ಲಿ ಎಲ್ಲ ಮಸೀದಿಗಳಿಗೂ ಪೊಲೀಸ್​ ಬಿಗಿ ಭದ್ರತೆ; ಎರಡು ಸ್ಥಳಗಳಲ್ಲಿ ಸೆಕ್ಷನ್​ 144 ಜಾರಿ
ತ್ರಿಪುರದಲ್ಲಿ ಭದ್ರತೆ ಹೆಚ್ಚಳ
Follow us on

ಅಗರ್ತಲಾ: ಎರಡು ದಿನಗಳ ಹಿಂದೆ ತ್ರಿಪುರದ ಉತ್ತರ ತ್ರಿಪುರ ಜಿಲ್ಲೆಯ ಪಾಣಿಸಾಗರ್​ ಉಪವಿಭಾಗದಲ್ಲಿ ವಿಶ್ವ ಹಿಂದು ಪರಿಷದ್​ ರ್ಯಾಲಿ (VHP Rally) ನಡೆದಿತ್ತು. ಈ ವೇಳೆ ನಡೆದ ಹಿಂಸಾಚಾರದಲ್ಲಿ ಮಸೀದಿಯೊಂದನ್ನು ಧ್ವಂಸಗೊಳಿಸಲಾಗಿದ್ದು, ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು.  ಆ ಗಲಭೆಯ ಬಿಸಿ ಇನ್ನೂ ಆರಿಲ್ಲ. ಸದ್ಯ ಎಲ್ಲ ಮಸೀದಿಗಳಿಗೂ ಪೊಲೀಸ್​  ಬಿಗಿ ಭದ್ರತೆ ಒದಗಿಸಲಾಗಿದೆ. ಒಂದೇ ವಾರದಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಇಂಥ ಘಟನೆಗಳು ನಡೆದಿವೆ. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಅಂದ ಹಾಗೆ, ಬಾಂಗ್ಲಾದೇಶದಲ್ಲಿ ಹಿಂದೂ ದೇವರುಗಳ ಮೂರ್ತಿಗಳ ಧ್ವಂಸವನ್ನು ಖಂಡಿಸಿ ವಿಎಚ್​​ಪಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ವೇಳೆ ಈ ಹಿಂಸಾಚಾರ ಭುಗಿಲೆದ್ದಿತ್ತು.

ಉತ್ತರ ತ್ರಿಪುರದಲ್ಲಿ ಇದೀಗ ಪರಿಸ್ಥಿತಿ ಶಾಂತವಾಗಿದೆ. ಉತ್ತರ ತ್ರಿಪುರ ಜಿಲ್ಲೆ ಸೇರಿ ರಾಜ್ಯದ ಎಲ್ಲ ಮಸೀದಿಗಳಿಗೂ ಪೊಲೀಸ್​ ಬಿಗಿ ಭದ್ರತೆ ಒದಗಿಸಲಾಗಿದೆ. ಹಾಗೇ, ಹೆಚ್ಚಿನ ಗಸ್ತು ತಿರುಗಲಾಗುತ್ತಿದೆ ಎಂದು ಡಿಜಿಪಿ ವಿ.ಎಸ್​.ಯಾದವ್​ ತಿಳಿಸಿದ್ದಾರೆ.  ಇನ್ನು ಪಾಣಿಸಾಗರದಲ್ಲಿ ನಡೆದ ಈ ಹಿಂಸಾಚಾರದ ಬೆನ್ನಲ್ಲೇ ಇಲ್ಲೇ ನಡೆದ ಘಟನೆ ಎಂದು ಬಿಂಬಿಸುವ ಕೆಲವು ಫೇಕ್​ ಫೋಟೋ-ವಿಡಿಯೋಗಳು ವೈರಲ್​ ಆಗುತ್ತಿದ್ದು, ಜನರನ್ನು ಅದನ್ನು ನಂಬಬಾರದು ಎಂದು ತ್ರಿಪುರ ಐಜಿ (ಕಾನೂನು-ಸುವ್ಯವಸ್ಥೆ ಉಸ್ತುವಾರಿ) ಸೌರಭ್​ ತ್ರಿಪಾಠಿ ಹೇಳಿದ್ದಾರೆ.  ಮಸೀದಿಗೆ ಬೆಂಕಿ ಹಚ್ಚಿದ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ ತ್ರಿಪುರದಲ್ಲಿ ಯಾವುದೇ ಮಸೀದಿಗೂ ಬೆಂಕಿ ಹಚ್ಚಿಲ್ಲ. ಕೋಮು ಸೌಹಾರ್ದತೆಯನ್ನು ಮತ್ತಷ್ಟು ಹಾಳುಮಾಡುವ ಉದ್ದೇಶದಿಂದ ಇಂಥ ಫೋಟೋಗಳನ್ನು ವೈರಲ್ ಮಾಡಲಾಗುತ್ತಿದೆ. ಅಂಥವರ ಮೇಲೆ ಕೂಡ ಒಂದು ಕಣ್ಣಿಟ್ಟಿದ್ದು, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಸೆಕ್ಷನ್​ 144 ಜಾರಿ
ಮಂಗಳವಾರ ವಿಎಚ್​​ಪಿ ರ್ಯಾಲಿ ನಡೆಯುತ್ತಿದ್ದ ವೇಳೆ ಪಾಣಿಸಾಗರ ಉಪವಿಭಾಗದ ಚಮ್ಟಿಲ್ಲಾ ಎಂಬ ಪ್ರದೇಶದಲ್ಲಿ ಮಸೀದಿಯೊಂದನ್ನು ಧ್ವಂಸ ಮಾಡಲಾಗಿತ್ತು. ಅದಾದ ಮೇಲೆ ಕೆಲವು ಅಂಗಡಿಗಳು, ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಇದರಿಂದ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಘಟನೆ ಬೆನ್ನಲ್ಲೇ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪಾಣಿಸಾಗರ ಮತ್ತು ನೆರೆಯ ಧರ್ಮನಗರ ಉಪವಿಭಾಗಗಳಲ್ಲಿ ಸೆಕ್ಷನ್​ 144 ಹೇರಲಾಗಿದೆ.

ಇದನ್ನೂ ಓದಿ: ಆಗ್ರಾದಲ್ಲಿ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಬಂಧನ; ಮಕ್ಕಳನ್ನು ಕೂಡಲೇ ಬಿಡುಗಡೆ ಮಾಡಿ ಎಂದು ಆಗ್ರಹಿಸಿದ ಮೆಹಬೂಬಾ ಮುಫ್ತಿ

T20 World Cup: ಟಿ20 ವಿಶ್ವಕಪ್​ನಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿ; ಭಾರತದ ನೆರೆಹೊರೆಯವರದ್ದೇ ಪಾರುಪತ್ಯ!