ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೇರಾರನ್ನು ಇಂಡಿಗೊ ವಿಮಾನದಿಂದ ಇಳಿಸಿದ ಪೊಲೀಸ್

|

Updated on: Feb 23, 2023 | 2:30 PM

Pawan Khera ಎಲ್ಲರೂ ವಿಮಾನದಲ್ಲಿ ಕುಳಿತಿದ್ದರು, ಅದೇ ಸಮಯದಲ್ಲಿ ನಮ್ಮ ಪವನ್ ಖೇರಾ ಅವರಲ್ಲಿ ವಿಮಾನದಿಂದ ಇಳಿಯಲು ಕೇಳಲಾಯಿತು.ಇದು ಸರ್ವಾಧಿಕಾರಿ ವರ್ತನೆ. ಸರ್ವಾಧಿಕಾರಿಯು ಅಧಿವೇಶನಕ್ಕೆ ಮುಂಚಿತವಾಗಿ ಇಡಿ ದಾಳಿಗಳನ್ನು ಮಾಡಿದ್ದಾರೆ

ಕಾಂಗ್ರೆಸ್(Congress) ಹಿರಿಯ ನಾಯಕ ಪವನ್ ಖೇರಾ (Pawan Khera) ಅವರನ್ನು ಇಂಡಿಗೊ(Indigo) ವಿಮಾನದಿಂದ ಇಳಿಸಿದ ಘಟನೆ ಇಂದು (ಗುರುವಾರ) ನಡೆದಿದೆ  ದೆಹಲಿಯಿಂದ ಇಂಡಿಗೊ ಫ್ಲೈಟ್ 6 ಇ -204 ರಿಂದ ರಾಯಪುರಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಎಲ್ಲರೂ ವಿಮಾನದಲ್ಲಿ ಕುಳಿತಿದ್ದರು, ಅದೇ ಸಮಯದಲ್ಲಿ ನಮ್ಮ ಪವನ್ ಖೇರಾ ಅವರಲ್ಲಿ ವಿಮಾನದಿಂದ ಇಳಿಯಲು ಕೇಳಲಾಯಿತು.ಇದು ಸರ್ವಾಧಿಕಾರಿ ವರ್ತನೆ. ಸರ್ವಾಧಿಕಾರಿಯು ಅಧಿವೇಶನಕ್ಕೆ ಮುಂಚಿತವಾಗಿ ಇಡಿ ದಾಳಿಗಳನ್ನು ಮಾಡಿದ್ದಾರೆ ಈಗ ಅಂತಹ ಕಾರ್ಯಕ್ಕೆ ಇಳಿದಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಪವನ್ ಖೇರಾರನ್ನು ಬಂಧಿಸುವ ಪ್ರಯತ್ನ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿ ಪ್ರತಿಭಟನೆ ನಡೆಸಿದೆ. ಪವನ್ ಖೇರಾ ಅವರನ್ನು ರಾಯಪುರಕ್ಕೆ ವಿಮಾನದಲ್ಲಿ ಕರೆದೊಯ್ಯುವಂತಿಲ್ಲ ಎಂಬ ಸೂಚನೆಗಳಿವೆ ಎಂದು ಇಂಡಿಗೊ ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

ದೆಹಲಿ  ವಿಮಾನ ನಿಲ್ದಾಣದಲ್ಲಿ  ವಿಮಾನದಿಂದ ಇಳಿಸಿದ ಕೂಡಲೇ ಅಸ್ಸಾಂ ಪೊಲೀಸರು ಖೇರಾ ಅವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಮುಂದಿನ ವಾರ ಭಾರತಕ್ಕೆ ಬಿಲ್ ಗೇಟ್ಸ್; ಭಾರತವನ್ನು ಹಾಡಿ ಹೊಗಳಿದ ಮೈಕ್ರೋಸಾಫ್ಟ್ ಸಹಸ್ಥಾಪಕ

ಪ್ರಧಾನಿ ನರೇಂದ್ರ ಮೋದಿಯವರನ್ನು ಅವಮಾನಿಸಿದ ಆರೋಪದ ಮೇಲೆ ಬಿಜೆಪಿ ಖೇರಾ ಬಂಧನಕ್ಕೆ ಒತ್ತಾಯಿಸಿದೆ. ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಖೇರಾ ಅವರು ಪ್ರಧಾನಿ ಮೋದಿ ಹೆಸರನ್ನು ಲೇವಡಿ ಮಾಡಿದ್ದಾರೆ. ನರಸಿಂಹ ರಾವ್ ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚಿಸಬಹುದಾದರೆ, ಅಟಲ್ ಬಿಹಾರಿ ವಾಜಪೇಯಿ ಜೆಪಿಸಿ ರಚಿಸಬಹುದಾದರೆ, ನರೇಂದ್ರ ಗೌತಮ್ ದಾಸ್ – ಕ್ಷಮಿಸಿ, ದಾಮೋದರ್ ದಾಸ್ ಮೋದಿಗೆ ಏನು ಸಮಸ್ಯೆ ಎಂದಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:26 pm, Thu, 23 February 23