ಸಿರಿಯಾ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯ, ರಷ್ಯಾ ಮತ್ತು ಇರಾನ್ ಬೆಂಬಲಿತ ಬಶರ್ ಅಲ್-ಅಸ್ಸಾದ್ ಆಡಳಿತವನ್ನು ಟರ್ಕಿಯಿಂದ ಬೆಂಬಲಿತವಾಗಿರುವ ಬಂಡುಕೋರ ಗುಂಪುಗಳು ಮತ್ತು ಮಿಲಿಷಿಯಾಗಳಿಂದ ಸುತ್ತುವರಿದಿದೆ. ಈ ಕಾರಣದಿಂದ ಸಿರಿಯಾದಲ್ಲಿ ಪರಿಸ್ಥಿತಿ ಹದಗೆಡಿದೆ. ಇದೀಗ ಸಿರಿಯಾದಲ್ಲಿರುವ ಭಾರತೀಯರನ್ನು ಎಚ್ಚರಿಕೆ ಹಾಗೂ ಜಾಗೃತೆಯಲ್ಲಿ ಇರುವಂತೆ ಭಾರತ ಹೇಳಿದೆ. ಸಿರಿಯಾ ಪರಿಸ್ಥಿತಿಯ ಬಗ್ಗೆ ಭಾರತ ಸರ್ಕಾರವು ಕಳವಳ ವ್ಯಕ್ತಪಡಿಸಿದೆ. ಇದೀಗ ಭಾರತ ಸರ್ಕಾರ ಎಲ್ಲಾ ಭಾರತೀಯ ಪ್ರಜೆಗಳಿಗೆ ಮುಂದಿನ ಸೂಚನೆ ಬರುವವರೆಗೆ ಪ್ರಯಾಣ ಮಾಡುವುದನ್ನು ತಪ್ಪಿಸುವಂತೆ ಹೇಳಿದೆ.
ಇನ್ನು ಈ ಬಗ್ಗೆ ಭಾರತ ಸರ್ಕಾರ ತುರ್ತು ಸಹಾಯವಾಣಿ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಹಂಚಿಕೊಂಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಸ್ತುತ ಸಿರಿಯಾದಲ್ಲಿರುವ ಎಲ್ಲಾ ಭಾರತೀಯರಿಗೆ ಡಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಾಧಿಸುವಂತೆ ಹೇಳಿದೆ. ಇನ್ನು ಭಾರತ ಸರ್ಕಾರ ಸಿರಿಯಾದಲ್ಲಿರುವ ಭಾರತೀಯರನ್ನು ಕರೆತರಲು ಈಗಾಗಲೇ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಸರ್ಕಾರ ಸೂಚನೆ ಬರುವವರೆಗೆ ಯಾರು ಕೂಡ ಹೊರಗೆ ಬರಬೇಡಿ. ಸಾಧ್ಯವಿರುವವರು, ಲಭ್ಯವಿರುವ ಆರಂಭಿಕ ವಾಣಿಜ್ಯ ವಿಮಾನಗಳ ಮೂಲಕ ಸಿರಿಯಾವನ್ನು ತೊರೆಯುವಂತೆ ಸೂಚನೆ ನೀಡಿದೆ.
Travel advisory for Syria:https://t.co/bOnSP3tS03 pic.twitter.com/zg1AH7n6RB
— Randhir Jaiswal (@MEAIndia) December 6, 2024
ಯಾರಿಗೂ ಸಿರಿಯಾವನ್ನು ತೊರೆಯಲು ಸಾಧ್ಯವಿಲ್ಲ ಅವರು ಸುರಕ್ಷತೆಯಿಂದ ಇರುವಂತೆ ಹಾಗೂ ಎಲ್ಲೂ ಕೂಡ ಓಡಾಡಂತೆ ಆದೇಶವನ್ನು ನೀಡಿದೆ. ಸಿರಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯುವ ಮೊಬೈಲ್ ಸಂಖ್ಯೆ +963 993385973 ಹಂಚಿಕೊಂಡಿದೆ. ಹಾಗೂ WhatsApp ಮತ್ತು hoc.damascus@mea.gov.in ಮೇಲ್ ಮೂಲಕವೂ ಸಂಪರ್ಕ ಸಾಧಿಸಬಹುದು ಎಂದು ಹೇಳಿದೆ.
ಇದನ್ನೂ ಓದಿ: ತುರ್ತು ಮಿಲಿಟರಿ ಆಡಳಿತ ಹೇರಿ ಕೆಲವೇ ಗಂಟೆಗಳಲ್ಲಿ ಆದೇಶ ಹಿಂಪಡೆದ ದಕ್ಷಿಣ ಕೊರಿಯಾ
ಸಿರಿಯಾ ರಾಜಕೀಯ ಪ್ರಕ್ಷುಬ್ಧತೆ ಉಂಟಾಗಿದೆ. ಇದರ ಜತೆಗೆ ರಷ್ಯಾ ಮತ್ತು ಇರಾನ್ ಬೆಂಬಲಿತ ಬಶರ್ ಅಲ್-ಅಸ್ಸಾದ್ ಆಡಳಿತವು ಟರ್ಕಿಯಿಂದ ಬೆಂಬಲಿತವಾಗಿರುವ ಬಂಡುಕೋರ ಗುಂಪುಗಳು ಮತ್ತು ಮಿಲಿಷಿಯಾಗಳಿಂದ ಸುತ್ತುವರಿದಿದೆ. ಬಂಡಾಯ ಪಡೆಗಳು, ಕಳೆದ ವಾರ ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅನ್ನು ಪದಚ್ಯುತಗೊಳಿಸಲು ದಾಳಿಯನ್ನು ನಡೆಸಿತ್ತು.
ಇಸ್ಲಾಮಿಸ್ಟ್ ನೇತೃತ್ವದ ಬಂಡುಕೋರರು ಸಿರಿಯಾದ ಹೋಮ್ಸ್‌ನ ಗೇಟ್ ಬಿಡುಬಿಟ್ಟಿದ್ದರು. ಇತರ ಸಿರಿಯನ್ ನಗರಗಳು ಸರ್ಕಾರದ ನಿಯಂತ್ರಣದಿಂದ ತಮ್ಮ ನಿಯಂತ್ರಣಕ್ಕೆ ಪ್ರಯತ್ನಗಳು ನಡೆದಿದೆ. ಇಸ್ಲಾಮಿಸ್ಟ್ ಬಂಡುಕೋರರ ಆಕ್ರಮಣದಿಂದ ಇಡಿ ಸಿರಿಯಾ ತತ್ತರಿಸಿದೆ. ಅಲ್ಲಿ ಪ್ರಜೆಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಸಿರಿಯಾದ ಎರಡನೇ ನಗರ ಅಲೆಪ್ಪೊ ಮತ್ತು ಆಯಕಟ್ಟಿನ ನೆಲೆಗೊಂಡಿರುವ ಹಮಾ ಈಗಾಗಲೇ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ನಿಯಂತ್ರಣದಿಂದ ಬಂಡುಕೋರರು ಕೈಗೆ ಸೇರಿದೆ.
ಬಶರ್ ಅಲ್-ಅಸ್ಸಾದ್ ಅವರೇ ಕಳೆದ ಐದು ದಶಕಗಳಿಂದ ಸಿರಿಯಾವನ್ನು ಆಳುತ್ತಿದ್ದಾರೆ. ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದೆ. ಬಶರ್ ಅಸ್ಸಾದ್‌ನ ಪ್ರಮುಖ ಭದ್ರಕೋಟೆಯಾದ ಮೆಡಿಟರೇನಿಯನ್ ಕರಾವಳಿಯಿಂದ ರಾಜಧಾನಿ ಡಮಾಸ್ಕಸ್‌ನಲ್ಲಿ ತಮ್ಮ ಅಧಿಕಾರವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ