ಗರ್ಭಿಣಿ, ಬಾಣಂತಿಯರಿಗೆ ತೀವ್ರವಾಗಿ ಬಾಧಿಸಿದ ಕೊವಿಡ್​ 19 ಎರಡನೇ ಅಲೆ; ಐಸಿಎಂಆರ್​ ಅಧ್ಯಯನ

|

Updated on: Jun 17, 2021 | 9:12 AM

ಸುಮಾರು 1530 ಗರ್ಭಿಣಿ-ಬಾಣಂತಿಯರನ್ನು ಅಧ್ಯಯನದಲ್ಲಿ ಒಳಪಡಿಸಿಕೊಳ್ಳಲಾಗಿತ್ತು. ಅವರಲ್ಲಿ 1,143 ಮಂದಿ ಮೊದಲ ಅಲೆಯಲ್ಲಿ ಕೊವಿಡ್​ 19 ಸೋಂಕಿಗೆ ಒಳಗಾದವರು ಹಾಗೂ 387 ಮಂದಿ ಸೋಂಕಿಗೆ ಒಳಗಾದವರಾಗಿದ್ದರು.

ಗರ್ಭಿಣಿ, ಬಾಣಂತಿಯರಿಗೆ ತೀವ್ರವಾಗಿ ಬಾಧಿಸಿದ ಕೊವಿಡ್​ 19 ಎರಡನೇ ಅಲೆ; ಐಸಿಎಂಆರ್​ ಅಧ್ಯಯನ
ಪ್ರಾತಿನಿಧಿಕ ಚಿತ್ರ
Follow us on

ಕೊವಿಡ್​ 19 ಮೊದಲನೇ ಅಲೆಗೆ ಹೋಲಿಸಿದರೆ, ಎರಡನೇ ಅಲೆಯಲ್ಲಿ ಗರ್ಭಿಣಿಯರು, ಆಗಷ್ಟೇ ಹೆರಿಗೆಯಾದ ಮಹಿಳೆಯರು ಅಂದರೆ ಬಾಣಂತಿಯರು ಅತಿ ತೀವ್ರವಾಗಿ ಕೊರೊನಾದಿಂದ ಬಾಧಿತರಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ತಿಳಿಸಿದೆ. ಅಲ್ಲದೆ, ಮೊದಲ ಅಲೆಗಿಂತಲೂ ಈ ಅಲೆಯಲ್ಲಿ ಗರ್ಭಿಣಿಯರು, ಬಾಣಂತಿಯರಲ್ಲಿ ರೋಗಲಕ್ಷಣದ ಪ್ರಕರಣ ಮತ್ತು ಸಾವಿನ ಪ್ರಮಾಣ ಜಾಸ್ತಿ ಇತ್ತು ಎಂದೂ ಐಸಿಎಂಆರ್​ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.

ಕೊವಿಡ್​ 19 ಮೊದಲನೇ ಅಲೆಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಲ್ಲಿ ರೋಗ ಲಕ್ಷಣದ ಪ್ರಕರಣಗಳು 1143ಕ್ಕೆ ಕೇವಲ 162ರಂತೆ ಅಂದರೆ ಅನುಪಾತ 14.2 ಪರ್ಸಂಟ್​ ಇತ್ತು. ಆದರೆ ಅದು ಎರಡನೇ ಅಲೆಯಲ್ಲಿ ಶೇ.28.7ರಷ್ಟು ಹೆಚ್ಚಾಗಿದ್ದು, 387ಕ್ಕೆ 111ರಷ್ಟಿದೆ ಎಂದು ಐಸಿಎಂಆರ್​ ಮಾಹಿತಿ ನೀಡಿದೆ. ಹಾಗೇ, ಗರ್ಭಿಣಿ-ಬಾಣಂತಿಯರ ಮರಣ ಪ್ರಮಾಣ ಮೊದಲ ಅಲೆಯಲ್ಲಿ 0.7 (8/1143)ರಷ್ಟಿತ್ತು. ಆದರೆ ಎರಡನೇ ಅಲೆಯಲ್ಲಿ ಶೇ.5.7 (22/387)ಆಗಿದೆ ಎಂದೂ ಹೇಳಿದೆ.

ಸುಮಾರು 1530 ಗರ್ಭಿಣಿ-ಬಾಣಂತಿಯರನ್ನು ಅಧ್ಯಯನದಲ್ಲಿ ಒಳಪಡಿಸಿಕೊಳ್ಳಲಾಗಿತ್ತು. ಅವರಲ್ಲಿ 1,143 ಮಂದಿ ಮೊದಲ ಅಲೆಯಲ್ಲಿ ಕೊವಿಡ್​ 19 ಸೋಂಕಿಗೆ ಒಳಗಾದವರು ಹಾಗೂ 387 ಮಂದಿ ಸೋಂಕಿಗೆ ಒಳಗಾದವರಾಗಿದ್ದರು. ಇನ್ನು ಮೊದಲ ಮತ್ತು ಎರಡನೇ ಅಲೆಯಲ್ಲಿ ಅತ್ಯಂತ ಹೆಚ್ಚು ಗರ್ಭಿಣಿ-ಬಾಣಂತಿಯರು ಮೃತಪಟ್ಟಿದ್ದು, ಕೊವಿಡ್​ 19 ಸಂಬಂಧಿತ ನ್ಯೂಮೋನಿಯಾ ಮತ್ತು ಉಸಿರಾಟದ ಸಮಸ್ಯೆಯಿಂದಲೇ ಆಗಿದೆ ಎಂದೂ ಐಸಿಎಂಆರ್​ ತಿಳಿಸಿದೆ. ಹಾಗೇ, ಬೇರೆ ಇತರ ಕಾಯಿಲೆಗಳನ್ನು ಹೊಂದಿರುವ ಗರ್ಭಿಣಿಯರಿಗೆ ಲಸಿಕೆ ನೀಡಲು ಕಳೆದವಾರವೇ ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸ್ಸು ಮಾಡಿದೆ.

ಇದನ್ನೂ ಓದಿ: Gold Rate Today: ಇಳಿಕೆಯ ಹಾದಿ ಹಿಡಿದ ಚಿನ್ನದ ದರ; ಆಭರಣ ಪ್ರಿಯರಿಗೆ ಸಂತಸ

Pregnant postpartum women severely affected in second Covid wave ICMR Study