Maharashtra: ಆಸ್ಪತ್ರೆಗೆ ತೆರಳಲು 7 ಕಿಮೀ ನಡೆದ ತುಂಬು ಗರ್ಭಿಣಿ; ಹೀಟ್ ಸ್ಟ್ರೋಕ್​ನಿಂದಾಗಿ ಗರ್ಭಿಣಿ ಸಾವು!

|

Updated on: May 16, 2023 | 3:35 PM

ಒಂಬತ್ತನೇ ತಿಂಗಳಿನಲ್ಲಿದ್ದ ಸೋನಾಲಿ ಅವರಿಗೆ ಪಿಎಚ್‌ಸಿಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿತ್ತು. ಅವರು ಮನೆಗೆ ಹಿಂತಿರುಗಲು ಉರಿ ಬಿಸಿಲಿಗೆ ನಡೆದು ಹೆದ್ದಾರಿಯಿಂದ 3.5 ಕಿಮೀ ದೂರ ನಡೆದಿದ್ದಾರೆ

Maharashtra: ಆಸ್ಪತ್ರೆಗೆ ತೆರಳಲು 7 ಕಿಮೀ ನಡೆದ ತುಂಬು ಗರ್ಭಿಣಿ; ಹೀಟ್ ಸ್ಟ್ರೋಕ್​ನಿಂದಾಗಿ ಗರ್ಭಿಣಿ ಸಾವು!
ಸಾಂದರ್ಭಿಕ ಚಿತ್ರ
Follow us on

ಮಹಾರಾಷ್ಟ್ರದ ಪಾಲ್ಘರ್ (Palghar) ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (PHC) ಹೋಗಿ ಮನೆಗೆ ಹಿಂದಿರುಗಲು ಗ್ರಾಮದಿಂದ ಏಳು ಕಿಲೋಮೀಟರ್ ನಡೆದುಕೊಂಡು ಹೋದ 21 ವರ್ಷದ ಬುಡಕಟ್ಟು ಸಮುದಾಯಕ್ಕೆ ಸೇರಿದ ತುಂಬ ಗರ್ಭಿಣಿ (Pregnant) ಸೂರ್ಯನ ಹೊಡೆತದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಸೋಮವಾರ (ಮೇ 15) ತಿಳಿಸಿದ್ದಾರೆ. ಈ ಘಟನೆ ಶುಕ್ರವಾರ (ಮೇ 12) ನಡೆದಿದ್ದು, ದಹಾನು ತಾಲೂಕಿನ ಓಸರ್ ವೀರಾ ಗ್ರಾಮದ ಸೋನಾಲಿ ವಾಘಾಟ್ ಸುಡು ಬಿಸಿಲಿನಲ್ಲಿ 3.5 ಕಿ.ಮೀ ನಡೆದು ಸಮೀಪದ ಹೆದ್ದಾರಿಗೆ ತೆರಳಿ ಅಲ್ಲಿಂದ ಆಟೋ ರಿಕ್ಷಾದಲ್ಲಿ ತವಾ ಪಿಎಚ್‌ಸಿ ತಲುಪಿದರು ಎಂದು ಪಾಲ್ಘರ್ ಜಿಲ್ಲಾ ಸಿವಿಲ್ ಸರ್ಜನ್ ಡಾ. ಸಂಜಯ್ ಬೋಡಾಡೆ ಪಿಟಿಐಗೆ ತಿಳಿಸಿದರು.

ಒಂಬತ್ತನೇ ತಿಂಗಳಿನಲ್ಲಿದ್ದ ಸೋನಾಲಿ ಅವರಿಗೆ ಪಿಎಚ್‌ಸಿಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿತ್ತು. ಅವರು ಮತ್ತೆ ಮನೆಗೆ ಹಿಂತಿರುಗಲು ಉರಿ ಬಿಸಿಲಿಗೆ ನಡೆದು ಹೆದ್ದಾರಿಯಿಂದ 3.5 ಕಿಮೀ ದೂರ ನಡೆದಿದ್ದಾರೆ. ಸಂಜೆ ನಂತರ, ಅವರು ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿತು ಮತ್ತು ಧುಂಡಲವಾಡಿ PHC ಗೆ ಕರೆತರಾಯ್ಲಾಯಿತು, ಅಲ್ಲಿಂದ ಅವರನ್ನು ಕಳಸ ಉಪವಿಭಾಗೀಯ ಆಸ್ಪತ್ರೆಗೆ (SDH) ಶಿಫ್ಟ್ ಮಾಡಲಾಯಿತು, ಅಲ್ಲಿ ಅವರು “ಅರೆ-ಕೊಮೊರ್ಬಿಡ್ ಸ್ಥಿತಿಯಲ್ಲಿ” ಕಂಡುಬಂದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆಕೆಗೆ ಹೆಚ್ಚಿನ ತಾಪಮಾನ ಇದ್ದ ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ದಹಾನುವಿನ ಧುಂಡಲವಾಡಿಯಲ್ಲಿರುವ ವಿಶೇಷ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಡಾ. ಬೋಡಾಡೆ ಹೇಳಿದರು.

ಆದರೆ, ಆಂಬ್ಯುಲೆನ್ಸ್‌ನಲ್ಲಿ ಮಾರ್ಗ ಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ ಮತ್ತು ಭ್ರೂಣವನ್ನೂ ಕಳೆದುಕೊಂಡಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಗೆ ಹೆರಿಗೆ ನೋವು ಕಾಣಿಸಿಕೊಂದಿರಲಿಲ್ಲ, ಕಳಸ ಪಿಎಚ್‌ಸಿ ವೈದ್ಯರು ತಕ್ಷಣ ಗಮನ ಹರಿಸಿದ್ದರು ಆದರೂ ಆಕೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಆಕೆಯ “ಅರೆ ಕೊಮೊರ್ಬಿಡ್ ಸ್ಥಿತಿ” ಯಿಂದ ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾರಣ, ಅವರು ಅವಳನ್ನು ವಿಶೇಷ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಅವರು ಹೇಳಿದರು. ಬಿಸಿ ವಾತಾವರಣದಲ್ಲಿ ಮಹಿಳೆ ಏಳು ಕಿಲೋಮೀಟರ್ ನಡೆದ ಕಾರಣ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ನಂತರ ಸೂರ್ಯನ ಹೊಡೆತ ಇವರ ಸಾವಿಗೆ ಕಾರಣವಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಡಾ ಬೊಡಾಡೆ ಅವರು ಪಿಎಚ್‌ಸಿಗಳು ಮತ್ತು ಎಸ್‌ಡಿಎಚ್‌ಗೆ ಭೇಟಿ ನೀಡಿ ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಿದರು. ಸೋಮವಾರ ಬೆಳಗ್ಗೆ ಖಾಸ ಎಸ್‌ಡಿಎಚ್‌ನಲ್ಲಿದ್ದ ಪಾಲ್ಘರ್ ಜಿಲ್ಲಾ ಪರಿಷತ್ ಅಧ್ಯಕ್ಷ ಪ್ರಕಾಶ್ ನಿಕಮ್, ಮಹಿಳೆಗೆ ರಕ್ತಹೀನತೆ ಇತ್ತು ಮತ್ತು ಆಶಾ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ) ಕಾರ್ಯಕರ್ತೆ ಆಕೆಯನ್ನು ಎಸ್‌ಡಿಎಚ್‌ಗೆ ಕರೆತಂದಿದ್ದರು ಎಂದು ಪಿಟಿಐಗೆ ತಿಳಿಸಿದರು. ಅಲ್ಲಿನ ವೈದ್ಯರು ಆಕೆಯನ್ನು ಪರೀಕ್ಷಿಸಿ ಔಷಧಗಳನ್ನು ಕೊಟ್ಟರೂ ಪ್ರಯೋಜನವಾಗಿಲ್ಲ ಎಂದರು. ಖಾಸ ಎಸ್‌ಡಿಎಚ್‌ನಲ್ಲಿ ತೀವ್ರ ನಿಗಾ ಘಟಕ (ಐಸಿಯು) ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡಲು ತಜ್ಞ ವೈದ್ಯರು ಇಲ್ಲ ಎಂದು ಅವರು ಹೇಳಿದರು.

ಈ ಸೌಲಭ್ಯಗಳು ಇದ್ದಿದ್ದರೆ ಆದಿವಾಸಿ ಮಹಿಳೆಯ ಪ್ರಾಣ ಉಳಿಸಬಹುದಿತ್ತು ಎಂದರು. ನಿಕಮ್ ಅವರು ಈ ವಿಷಯವನ್ನು ಸೂಕ್ತ ಮಟ್ಟದಲ್ಲಿ ತೆಗೆದುಕೊಂಡು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಹೇಳಿದರು.

ಇದನ್ನೂ ಓದಿ: ಮೇ 28 ರಂದು ನೂತನ ಸಂಸತ್ ಭವನ ಉದ್ಘಾಟನೆ ಸಾಧ್ಯತೆ

ಮಹಾರಾಷ್ಟ್ರ ಪ್ರಸ್ತುತ ತೀವ್ರ ಶಾಖ-ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದೆ, ಸುಮಾರು 1,500 ಹೀಟ್ ಸ್ಟ್ರೋಕ್ ಪ್ರಕರಣಗಳು ಮತ್ತು ಹಲವಾರು ಸಾವುಗಳು ವರದಿಯಾಗಿವೆ. ಆರೋಗ್ಯ ಸೇವೆಗಳ ನಿರ್ದೇಶನಾಲಯದ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ, ಕಳೆದ ತಿಂಗಳು ಖಾರ್ಘರ್‌ನಲ್ಲಿ ನಡೆದ ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಮನಾರ್ಹ ಸಂಖ್ಯೆಯ ಪ್ರಕರಣಗಳು ಮತ್ತು ಸಾವುಗಳು ಸಂಭವಿಸಿವೆ.