AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಸಿಕ್‌ನ ತ್ರಯಂಬಕೇಶ್ವರ ದೇವಸ್ಥಾನಕ್ಕೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ ಮುಸ್ಲಿಮರು; ತಡೆದ ಭದ್ರತಾ ಸಿಬ್ಬಂದಿ

ಇದಕ್ಕೂ ಮೊದಲು ಮೇ 13 ರಂದು, ಅಕೋಲಾದಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಒಬ್ಬರು ಸಾವಿಗೀಡಾಗಿದ್ದು ಮತ್ತು ಇಬ್ಬರು ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದರು. ಎರಡು ಸಮುದಾಯಗಳ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ಹಲವಾರು ವಾಹನಗಳು ಸುಟ್ಟು ಹೋಗಿವೆ ಮತ್ತು ಅಂಗಡಿಗಳಿಗೆ ಹಾನಿಯಾಗಿದೆ.

ನಾಸಿಕ್‌ನ ತ್ರಯಂಬಕೇಶ್ವರ ದೇವಸ್ಥಾನಕ್ಕೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ ಮುಸ್ಲಿಮರು; ತಡೆದ ಭದ್ರತಾ ಸಿಬ್ಬಂದಿ
ನಾಸಿಕ್‌ನ ತ್ರಯಂಬಕೇಶ್ವರ ದೇವಾಲಯ
ರಶ್ಮಿ ಕಲ್ಲಕಟ್ಟ
|

Updated on:May 16, 2023 | 4:25 PM

Share

“ದಿ ಕೇರಳ ಸ್ಟೋರಿ” (The Kerala Story) ಚಿತ್ರಕ್ಕೆ ಸಂಬಂಧಿಸಿದ ವಿವಾದಾತ್ಮಕ ಪೋಸ್ಟ್ ಮಹಾರಾಷ್ಟ್ರದ (Maharashtra) ಅಕೋಲಾದಲ್ಲಿ ಕೋಮುಗಲಭೆಗೆ ಕಾರಣವಾದ ಕೆಲವು ದಿನಗಳ ನಂತರ, ಮುಸ್ಲಿಂ ಸಮುದಾಯದ ಜನರ ಗುಂಪೊಂದು ನಾಸಿಕ್‌ನ ತ್ರಯಂಬಕೇಶ್ವರ ದೇವಸ್ಥಾನಕ್ಕೆ(Trimbakeshwar temple) ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿತು. ಆದರೆ, ಅಲ್ಲಿ ಈ ಸಮುದಾಯದವರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಇನ್ನೊಂದು ಸಮುದಾಯದ ಜನರ ಗುಂಪು ದೇವಸ್ಥಾನಕ್ಕೆ ಬಲವಂತವಾಗಿ ನುಗ್ಗಿತು, ಆದರೆ ಭದ್ರತಾ ಸಿಬ್ಬಂದಿ ಪ್ರಯತ್ನವನ್ನು ವಿಫಲಗೊಳಿಸಿದರು ಎಂದು ತ್ರಯಂಬಕೇಶ್ವರ ದೇವಸ್ಥಾನದ ಟ್ರಸ್ಟ್ ಹೇಳಿಕೆಯಲ್ಲಿ ತಿಳಿಸಿದೆ. ದೇವಸ್ಥಾನದ ಟ್ರಸ್ಟ್ ಪೊಲೀಸರಿಗೂ ದೂರು ನೀಡಿದೆ. ಈ ಘಟನೆಯ ಹಲವು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘಟನೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ. ಫಡ್ನವಿಸ್ ಅವರ ಕಚೇರಿಯ ಪ್ರಕಾರ, ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಶ್ರೇಣಿಯ ಅಧಿಕಾರಿಯೊಬ್ಬರು ಎಸ್‌ಐಟಿಯ ನೇತೃತ್ವ  ವಹಿಸಿದ್ದಾರೆ.

ಇದಕ್ಕೂ ಮೊದಲು ಮೇ 13 ರಂದು, ಅಕೋಲಾದಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಒಬ್ಬರು ಸಾವಿಗೀಡಾಗಿದ್ದು ಮತ್ತು ಇಬ್ಬರು ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದರು. ಎರಡು ಸಮುದಾಯಗಳ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ಹಲವಾರು ವಾಹನಗಳು ಸುಟ್ಟು ಹೋಗಿವೆ ಮತ್ತು ಅಂಗಡಿಗಳಿಗೆ ಹಾನಿಯಾಗಿದೆ.

ಅಕೋಲಾ ಪೊಲೀಸರು ಸಲ್ಲಿಸಿದ ಎಫ್‌ಐಆರ್‌ನಲ್ಲಿ ಅರ್ಬಾಜ್ ಎಂಬ ವ್ಯಕ್ತಿಯನ್ನು ಉಲ್ಲೇಖಿಸಲಾಗಿದೆಯ ಈತ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ “ದಿ ಕೇರಳ ಸ್ಟೋರಿ” ಗೆ ಸಂಬಂಧಿಸಿದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ ಎಂದು ಟಿವಿ9 ಭಾರತ್ ವರ್ಷ್ ವರದಿ ಮಾಡಿದೆ.

ಅರ್ಬಾಜ್ ಅವರು ‘ ಪುಟವನ್ನು ವರದಿ ಮಾಡಿ’ ಎಂದು ಹೇಳಿದ್ದು ಅವರಿಗೆ ನಿಂದನೀಯ ಮತ್ತು ಬೆದರಿಕೆ ಸಂದೇಶಗಳನ್ನು ಬರುತ್ತಲೇ ಇತ್ತು. ನಿಂದನೀಯ ಕಾಮೆಂಟ್‌ಗಳಿಗೆ ಅರ್ಬಾಜ್ ತಕ್ಕ ಉತ್ತರ ನೀಡಿದ್ದು ನಂತರ ಚಾಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದು ಮುಸ್ಲಿಂ ಸಮುದಾಯವನ್ನು ಕೆರಳಿಸಿತು ಮತ್ತು ನಗರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Umesh Pal Murder Case: ಶಾಯಿಸ್ತಾ ಪರ್ವೀನ್, ಗುಡ್ಡು ಮುಸ್ಲಿಂ, ಸಬೀರ್ ವಿರುದ್ಧ ಲುಕ್​ಔಟ್ ನೋಟಿಸ್

“xyzzzzz99988′ ಸಂಖ್ಯೆಯಿಂದ ಅರ್ಬಾಜ್ ಅವರಿಗೆ ನಿಂದನೀಯ ಸಂದೇಶಗಳು ಬಂದಿವೆ. ಈ ಮೊಬೈಲ್ ಸಂಖ್ಯೆ ಕರಣ್ ಸಾಹು ಎಂಬಾತನದ್ದು ಎಂದು ಪೊಲೀಸರು ಹೇಳಿದ್ದಾರೆ. ವರದಿಯ ಪ್ರಕಾರ, ಅಕೋಲಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಕರಣ್ ಸಾಹು ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ವಿಚಾರಣೆ ವೇಳೆ ಸಾಹು ಈ ವಿಚಾರದಲ್ಲಿ ತನ್ನ ಕೈವಾಡವನ್ನು ನಿರಾಕರಿಸಿದ್ದಾರೆ.

ಶಾಂತಿ ಕಾಪಾಡಲು ಮುಖ್ಯಮಂತ್ರಿ ಕರೆ

ಕಾನೂನು ಸುವ್ಯವಸ್ಥೆ ಕಾಪಾಡುವುದು ಆಡಳಿತದ ಜವಾಬ್ದಾರಿ.  ಜನರು ಸಹ ಸಹಕರಿಸಬೇಕು. ಪ್ರತಿ ಸಮುದಾಯದ ಜನರು ಮುಂದೆ ಬಂದು ಶಾಂತಿ ಕಾಪಾಡಬೇಕು ಎಂದು ನಾಸಿಕ್‌ನ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಘಟನೆ ಬಗ್ಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಪ್ರತಿಕ್ರಿಯಿಸಿದ್ದಾರೆ.

ತ್ರಯಂಬಕೇಶ್ವರ ದೇಗುಲದ ಮುಖ್ಯ ದ್ವಾರದಲ್ಲಿ ಅಕ್ರಮವಾಗಿ ಗುಂಪುಗೂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿಕ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಘಟನೆಯ ತನಿಖೆಗೆ ಎಡಿಜಿ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ಎಸ್‌ಐಟಿ ರಚಿಸುವಂತೆಯೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಿವಿಸ್ ಆದೇಶಿಸಿದ್ದಾರೆ. ಕಳೆದ ವರ್ಷ ನಡೆದ ಇದೇ ರೀತಿಯ ಘಟನೆಯ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸಲಿದೆ ಎಂದು  ಉಪ ಮುಖ್ಯಮಂತ್ರಿ ಕಚೇರಿ ಪ್ರತಿಕ್ರಿಯಿಸಿದೆ.

ತ್ರಯಂಬಕೇಶ್ವರದಲ್ಲಿ ಶಾಂತಿ ನೆಲೆಸಿದೆ ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವು ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ತನಿಖೆಯನ್ನು ಮುಂದುವರಿಸುತ್ತೇವೆ ಮತ್ತು ಅದರ ಆಧಾರದ ಮೇಲೆ ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ತ್ರಯಂಬಕೇಶ್ವರದಲ್ಲಿರುವ ನಮ್ಮ ಪೊಲೀಸ್ ಇನ್ಸ್‌ಪೆಕ್ಟರ್ ಮುಂದಿನ ತನಿಖೆಯನ್ನು ಮಾಡುತ್ತಾರೆಎಂದು ನಾಸಿಕ್ ಐಜಿ  ಬಿಜಿ ಶೇಖರ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:16 pm, Tue, 16 May 23