Umesh Pal Murder Case: ಶಾಯಿಸ್ತಾ ಪರ್ವೀನ್, ಗುಡ್ಡು ಮುಸ್ಲಿಂ, ಸಬೀರ್ ವಿರುದ್ಧ ಲುಕ್‌ಔಟ್ ನೋಟಿಸ್
ಉಮೇಶ್ ಪಾಲ್(Umesh Pal) ಹತ್ಯೆಗೆ ಸಂಬಂಧಿಸಿದಂತೆ ಶಾಯಿಸ್ತಾ ಪರ್ವೀನ್, ಗುಡ್ಡು ಮುಸ್ಲಿಂ, ಸಬೀರ್ ವಿರುದ್ಧ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಉಮೇಶ್ ಪಾಲ್(Umesh Pal) ಹತ್ಯೆಗೆ ಸಂಬಂಧಿಸಿದಂತೆ ಶಾಯಿಸ್ತಾ ಪರ್ವೀನ್, ಗುಡ್ಡು ಮುಸ್ಲಿಂ, ಸಬೀರ್ ವಿರುದ್ಧ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಉಮೇಶ್ ಪಾಲ್ ಹತ್ಯೆ ನಂತರ ಅತೀಕ್ ಅಹ್ಮದ್ ಪತ್ನಿ ಶಾಯಿಸ್ತಾ , ಆತನ ಆಪ್ತ ಗುಡ್ಡು ಮುಸ್ಲಿಂ ಹಾಗೂ ಸಬೀರ್ ಪರಾರಿಯಾಗಿದ್ದರು ಈಗ ಅವರ ವಿರುದ್ಧ ಪ್ರಯಾಗ್ರಾಜ್ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಈಗಾಗಲೇ ಶೈಸ್ತಾ ಪರ್ವೀನ್ ಹೆಸರಿನಲ್ಲಿ 50,000 ರೂಪಾಯಿ ಬಹುಮಾನ ಘೋಷಿಸಿದ್ದಾರೆ, ದೇಶ ತೊರೆಯದಂತೆ ಲುಕ್‌ಔಟ್ ನೋಟಿಸ್ ಜಾರಿ ಮಾಡಿಲಕಾಗಿದೆ, ಈ ನೋಟಿಸ್ ಅವಧಿ 1 ವರ್ಷದ್ದಾಗಿರುತ್ತದೆ.
ಉಮೇಶ್ ಪಾಲ್ ಹತ್ಯೆಯಾಗಿ 81 ದಿನಗಳಿಂದ ಮೂವರೂ ತಲೆಮರೆಸಿಕೊಂಡಿದ್ದಾರೆ. ಈ ಮೂವರ ಹುಡುಕಾಟದಲ್ಲಿ ಯುಪಿ ಪೊಲೀಸ್, ಎಸ್‌ಟಿಎಫ್ ತಂಡ ಮಹಾರಾಷ್ಟ್ರ, ಒಡಿಶಾ, ಬಿಹಾರ, ರಾಜಸ್ಥಾನ ಸೇರಿದಂತೆ 8 ರಾಜ್ಯಗಳಲ್ಲಿ ಇದುವರೆಗೆ ದಾಳಿ ನಡೆಸಿದೆ.
ಗುಪ್ತಚರ ಇಲಾಖೆಯ ವರದಿ ಬಂದ ನಂತರ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೂವರೂ ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಭೂತಾನ್‌ನಂತಹ ದೇಶಗಳಿಗೆ ಪಲಾಯನ ಮಾಡುವ ಆತಂಕವಿದೆ. ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅವರನ್ನು ಏಪ್ರಿಲ್ 15 ರಂದು ಕೊಲ್ವಿನ್ ಆಸ್ಪತ್ರೆಯಲ್ಲಿ ಹತ್ಯೆ ಮಾಡಲಾಗಿದೆ.
ಮತ್ತಷ್ಟು ಓದಿ: Atiq Ahmad Killers: ಪ್ರತಾಪ್ಗಢ ಕಾರಾಗೃಹಕ್ಕೆ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಹಂತಕರ ಸ್ಥಳಾಂತರ
ಉಮೇಶ್ ಪಾಲ್ ಮತ್ತು ಪೊಲೀಸ್ ಅಂಗರಕ್ಷಕರ ಮೇಲೆ ಗುಡ್ಡು ಮುಸ್ಲಿಂ ಕಚ್ಚಾ ಬಾಂಬ್‌ಗಳನ್ನು ಎಸೆದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿತ್ತು. ನಂತರ ತಲೆ ಮರೆಸಿಕೊಂಡಿದ್ದ ಗುಡ್ಡು ಮುಸ್ಲಿಂ ಇದೀಗ ಕರ್ನಾಟಕದಲ್ಲಿ ಓಡಾಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಯಿಂಗಳಿಂದ ಪತ್ತೆ ಹಚ್ಚಲಾಗಿತ್ತು. ಆತನ ಬಂಧನಕ್ಕಾಗಿ ಉತ್ತರ ಪ್ರದೇಶ ಪೊಲೀಸರು ಕರ್ನಾಟಕ ಪೊಲೀಸರ ನೆರವು ಕೋರಿದ್ದಾರೆ.
ಉಮೇಶ್ ಪಾಲ್ ಮತ್ತು ಇಬ್ಬರು ಪೊಲೀಸರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದ ಹೊರಗೆ ಗುಂಡಿಕ್ಕಿ ಕೊಂದ ನಂತರ ಎರಡು ತಿಂಗಳೊಳಗೆ ಮಾಫಿಯಾ ಡಾನ್, ರಾಜಕಾರಣಿ ಅತೀಕ್ ಅಹ್ಮದ್‌ಗೆ ಸಂಬಂಧಿಸಿದ ಆರು ಜನರು ಹತ್ಯೆ ಮಾಡಲಾಗಿದೆ. ಆರು ಮಂದಿಯ ಪಟ್ಟಿಯಲ್ಲಿ ಅತೀಕ್, ಅವರ ಪುತ್ರ ಅಸಾದ್, ಸಹಚರರಾದ ಅರ್ಬಾಜ್, ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್ ಮತ್ತು ಗುಲಾಮ್ ಹಸನ್ ಸೇರಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ